ಸಮಾಜಿಕ ಕ್ರಾಂತಿಯ ಹರಿಕಾರ ದೇವರಾಜ ಅರಸು: ಸಿದ್ದರಾಮಯ್ಯ
ಸಮಾಜಿಕ ಕ್ರಾಂತಿಯ ಹರಿಕಾರ ದೇವರಾಜ ಅರಸು: ಸಿದ್ದರಾಮಯ್ಯ
ಬೆಂಗಳೂರು:ಅ.20.“ರಾಜ್ಯದಲ್ಲಿ ಭೂ ಒಡೆಯತನ, ಮೀಸಲಾತಿ ಹಾಗೂ ಸಮಾಜಮುಖಿ ಯೋಜನೆಗಳ ಮೂಲಕ ಶೋಷಿತ, ಹಿಂದುಳಿದ ಸಮುದಾಯಗಳಿಗೆ ಅಸ್ಮಿತೆ ನೀಡಿದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ನಿಜಕ್ಕೂ ಸಾಮಾಜಿಕ ಕ್ರಾಂತಿಯನ್ನು ನಡೆಸಿದ ವ್ಯಕ್ತಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸಭಾ ಬ್ಯಾಂಕ್ಟೆಟ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 110ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಉದ್ಘಾಟಿಸಿ ಮಾತನಾಡಿದರು.
“ಉಳುವವನೆ ಭೂಮಿ ಒಡೆಯ ಕಾಯ್ದೆಯ ಮೂಲಕ ಅನೇಕರು ಭೂ ಸ್ವಾಮ್ಯ ಪಡೆದರು. ನಿರುದ್ಯೋಗ ಭತ್ಯೆ, ಜೀತ ಪದ್ಧತಿ ಮುಂತಾದ ಅನೇಕ ಮಾನವೀಯ ಯೋಜನೆಗಳ ಮೂಲಕ ಸಾವಿರಾರು ಜನರ ಬಾಳಿಗೆ ಬೆಳಕಾದವರು ಸಮಾಜಮುಖಿ ಕಾರ್ಯಗಳತ್ತ ಅವರ ಮನಸು ಸದಾ ತುಡಿಯುತ್ತಿತ್ತು” ಎಂದು ಸಿಎಂ ಹೇಳಿದರು.
ಹಾವನೂರು ಆಯೋಗ ಜಾರಿಗೆ ತಂದು, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಬದುಕನ್ನು ಬೆಳಗಿಸಲು ಅವರು ಶ್ರಮಿಸಿದ್ದರು. ಅಭಿವೃದ್ಧಿ ನಿಗಮಗಳ ಮೂಲಕ ಸಾಲ, ಕೃಷಿ ಪ್ರೋತ್ಸಾಹ ಹಾಗೂ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಲಯಗಳ ಸ್ಥಾಪನೆಯ ಮೂಲಕ ಹಿಂದುಳಿದ ಸಮುದಾಯಕ್ಕೆ ಉದ್ಧಾರವಾದಂತೆ ಮಾಡಿದರು ಎಂದು ಸಿದ್ಧರಾಮಯ್ಯ ನೆನಪಿಸಿದರು.
“ಇವನಾರವ ಯುವ ನಾರವ ಎಂದೆನಿಸದಿರಯ್ಯ, ಇವನಮ್ಮ ಮನೆಯ ಮಗನೆಂದೆನಿಸಯ್ಯ” , “ವಿಶ್ವಗುರು ಬಸವಣ್ಣನವರ ಆದರ್ಶದಂತೆ ಜಾತಿ ವ್ಯವಸ್ಥೆ ಮುರಿಯಲು ಅರಸು ಅವರು ಪ್ರಯತ್ನಿಸಿದರು,” ಎಂದು ಹೇಳಿದರು.
ಸರ್ಕಾರದ ಸುದೀರ್ಘ ಸೇವೆಗೆ ಗೌರವ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್ ಅವರಿಗೆ 'ದೇವರಾಜ ಅರಸು ಪ್ರಶಸ್ತಿ' ನೀಡಿ ಗೌರವಿಸಿದರು. ಅವರ ಪರವಾಗಿ ಪುತ್ರ ಅಜೀತ್ ಕಲ್ಲೆ ಧನ್ಯವಾದ ಅರ್ಪಿಸಿದರು. “ಇಂದಿನ ಪತ್ರಿಕೋದ್ಯಮ ತನ್ನ ನೈತಿಕ ಆಶಯವನ್ನು ಕಳೆದುಕೊಂಡಿದೆ” ಎಂಬ ದುಃಖವನ್ನು ಅವರು ವ್ಯಕ್ತಪಡಿಸಿದರು.
-ಸಚಿವ ಶಿವರಾಜ ಎಸ್. ತಂಗಡಗಿ ಪ್ರಾಥಮಿಕವಾಗಿ ಮಾತನಾಡಿ ದೇವರಾಜ ಅರಸು ಅವರು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಸಮುದಾಯಗಳ ಏಳಿಗೆಗೆ ಹಲವು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎರಡನೇ ಅರಸು ಸಿದ್ದರಾಮಯ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ರಿಜ್ವಾನ್ ಅರ್ಷದ ಮಾತನಾಡಿದರು.ಆಯುಕ್ತ ಕೆ.ಎ. ದಯಾನಂದ ಸ್ವಾಗತ ಭಾಷಣ ಮಾಡಿದರು.
ತಿಪ್ಪಣ್ಣಪ್ಪ ಕಮಕನೂರ, ವಿಜಯನಂದ ಕಾಶಪ್ಪನೋರ, ವೇದಿಕೆ ಮೇಲೆ ಇದ್ದರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿಬ್ಬಂದಿಗಳು, ಅರಸುವ ಅಭಿಮಾನಿಗಳು, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ,ಶರಣಗೌಡ ಪಾಟೀಲ ಪಾಳಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
---