ಜಿಲ್ಲೆಯ ರೈತರ ವಿವಿಧ ಬೇಡಿಕೆಗಳು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ
ಜಿಲ್ಲೆಯ ರೈತರ ವಿವಿಧ ಬೇಡಿಕೆಗಳು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ
ಕಲಬುರಗಿ: ಜಿಲ್ಲೆಯ ರೈತರ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳ ಪರಿಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ತೋಗರಿ ಬೆಳೆ ನೇಟೆ ಹೋಗಿ ಸಾವಿರಾರು ರೈತರು ಕಳೆದ ಬಾರಿಗಿಂತ ಈ ಬಾರಿ ಕಂಗಾಲಾಗಿದ್ದಾರೆ ಅವರಿಗೆ ಸೂಕ್ತ ಪರಿಹಾರ ಸರಕಾರದಿಂದ ನೀಡಬೇಕು ಹಾಗೂ ಮುಂಗಾರು ಅತಿವೃಷ್ಟಿಯಿಂದ ಹಾನಿಯಾದ ಬೆಳೆಗೆ ಪರಿಹಾರ ಕೊಡುವುದರಲ್ಲಿ ವಿಳಂಬ ನೀತಿಯನ್ನು ಕಂಡಿಸಿ ಮತ್ತು ಬೆಳೆ ವಿಮೆ ಇನ್ನೂ ರೈತರಿಗೆ ಹಣ ಸಂದಾಯ ಆಗಿರುವುದಿಲ್ಲ.
ತೋಗರಿ ಬೆಳೆಗೆ ಕನೀಷ್ಟ ಬೆಂಬಲ ಬೆಲೆ ರೂ: 12000/- ಒದಗಿಸಬೇಕು, ಯಡ್ರಾಮಿ ತಾಲೂಕಿನ ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಶಿಘ್ರದಲ್ಲಿ ಪೂರ್ಣಗೊಳಿಸಬೇಕು, ಪಿಎನ್ಸಿ ರಸ್ತೆ ಕಾಮಗಾರಿಯಿಂದ ರೈತರಿಗೆ ತೊಂದರೆ ಆಗಿದ್ದು ಅದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು, ನೂತನವಾಗಿ ರಚನೆ ಆದಂತಹ ತಾಲೂಕುಗಳಿಗೆ ಮೂಲ ಸೌಕರ್ಯ ಒದಗಿಸುವುದೊಂದಿಗೆ ಅಭೀವೃದ್ಧಿಗೊಳಿಸಬೇಕು, ಎಲ್ಲಾ ಸಮಸ್ಯೆಗಳಿಗೂ ಹಾಗೂ ಬೇಡಿಕೆಗಳಿಗೂ ಶಿಘ್ರದಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪೈಜ್ಯ ಶ್ರೀ ಡಾ. ಶಾಂತವೀರ ಶೀವಾಚಾರ್ಯರು, ಶ್ರೀ ಡಾ.ಗುರು ಮೂರ್ತಿ ಶಿವಾಚಾರ್ಯರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ, ಜಿಲ್ಲಾ ಅಧ್ಯಕ್ಷ ಪ್ರಶಾಂತಗೌಡ ಮಾಲಿಪಾಟೀಲ್, ವಿರಯ್ಯ ಮುತ್ತಿಮಠ, ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಆರ್.ಹಿರೇಮಠ, ದಿವ್ಯಾ ಹಾಗರಗಿ, ಜ್ಯೋತಿ ಪಾಟೀಲ, ಪರ್ವತರೇಡ್ಡಿ, ಚಂದ್ರಕಲಾ, ಮಲ್ಲಣಗೌಡ ಹಗರಟಗಿ ಸೇರಿದಂತೆ ಇತರರು ಇದ್ದರು.