ರಾಮಗಿರಿ ಮಹಾರಜ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: ಠಾಣೆಗೆ ದೂರು
ರಾಮಗಿರಿ ಮಹಾರಜ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: ಠಾಣೆಗೆ ದೂರು
ಕಲಬುರಗಿ: ಪ್ರವಾದಿ ಮೊಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಕುರಿತು ಅವಹೇಳ ಮಾಡಿರುವ ರಾಮಗಿರಿ ಮಹಾರಜ್ ರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ರಜಾ ಅಕಡಮಿಯ ಕಲಬುರಗಿ ಘಟಕ ಶುಕ್ರವಾರ ರೋಜಾ ಪೊಲೀಸ್ ಠಾಣೆಗೆ ದೂರು ನೀಡಿ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ ನಾಸೀಕ್ ನ ತಾಲ್ಲೂಕಿನ ಸಿನ್ನರ್ ತಾಲ್ಲೂಕಿನಲ್ಲಿ ಶ್ರೀ ಕಸ್ತರಾ ಪಂಚಲೆದಲ್ಲಿ ಅಖಂಡ ಹರಿನಾಮ್ ಸಪ್ತಹ ಕಾರ್ಯಕ್ರಮದಲ್ಲಿ ಪ್ರವಾದಿ ಮೊಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಕುರಿತು ಅವಹೇಳವಾಗಿ ಮಾತನಾಡಿದ್ದು, ಇದರಿಂದ ಸಮಸ್ತ ಮುಸ್ಲಿಂ ಸಮಾಜ ಮತ್ತು ಪ್ರವಾದಿ ಮೊಹಮ್ಮದ್ ಅವರ ಅನುಯಾಯಿಗಳಿಗೆ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.
ತಕ್ಷಣ ರಾಮಗಿರಿ ಮಹಾರಜ್ ವಿರುದ್ಧ ಕೋಮುಭಾವನೆ ಕೆರಳಿಸಿರುವುದು ಮತ್ತು ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡುವ ಸೇರಿದಂತೆ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಸಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿರುವ ಅವರ ಈ ಭಾಷಣವನ್ನು ತೆಗೆದು ಹಾಕಿ, ಸಮಾಜಿಕ ಜಾಲಾತಾಣದಲ್ಲಿ ವಿಡಿಯೋ ಹರಿಬಿಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಂಘಟನೆಯ ಸದಸ್ಯರು ದೂರು ನೀಡಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರಜಾ ಅಕಡಮಿಯ ಅಧ್ಯಕ್ಷರಾದ ಮೊಹಮ್ಮದ್ ರಯಿಸ್ ಬೆಲೈಫ್, ಮೊಹಮ್ಮದ್ ಖಯಾಮ್ ಅಲಿ ಸೇರಿದಂತೆ ಹಲವರು ಇದ್ದರು.