ಸಾವಳಿ ಹರಿನಾಮ ಸಪ್ತಾಹದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗಿ

ಸಾವಳಿ ಹರಿನಾಮ ಸಪ್ತಾಹದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗಿ

ಸಾವಳಿ ಹರಿನಾಮ ಸಪ್ತಾಹದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗಿ 

ಔರಾದ: ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಕಮಲನಗರ ತಾಲೂಕಿನ ಸಾವಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ವೇಳೆ ಮಾತನಾಡಿದ ಅವರು, ಆಧುನಿಕತೆಯ ಹೆಸರಿನಲ್ಲಿ ಜನತೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆಯುತ್ತಿದ್ದಾರೆ. ಅಖಂಡ ಹರಿನಾಮ ಸಪ್ತಾಹ ಸನಾತನ ಧರ್ಮವನ್ನು ಉಳಿಸಲು ಮತ್ತು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಸಹಕಾರಿಯಾಗಿವೆ ಎಂದರು.

ಕಾಲ ಕ್ರಮೇಣ ಜನತೆ ಸುಖ, ಶಾಂತಿ, ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹರಿನಾಮ ಸಪ್ತಾಹ ಜೀವನದಲ್ಲಿ ಸಕಾರಾತ್ಮಕತೆಯನ್ನು ಪ್ರೇರೇಪಿಸಿ, ಜೀವನ ಉಜ್ವಲಗೊಳಿಸುತ್ತದೆ. ಬಹಳಷ್ಟು ಜನರನ್ನು ಕಾಡುವ ಕುಡಿತ, ಗುಟಕಾ ಸೇವನೆ, ಜೂಜಾಟ, ಸುಳ್ಳು, ಮೋಸದಂತಹ ದುರ್ಗುಣಗಳನ್ನು ದೂರವಾಗಿಸುತ್ತದೆ. ಹಾಗಾಗಿ ಇಂತಹ ಕಾರ್ಯಕ್ರಮಗಳು ಅತ್ಯಂತ ಅವಶ್ಯಕ ಎಂದು ತಿಳಿಸಿದರು.

ಪೂಜ್ಯ ಸಂತೋಷ ಮಹಾರಾಜ ವನವೆ ಅವರು ಕೀರ್ತನೆ ಕಾರ್ಯಕ್ರಮ ನಡೆಸಿಕೊಟ್ಟರು. ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಪ್ರವೀಣ ಕಾರಬಾರಿ, ಭರತ ಕದಂ, ಬಳಿರಾಮ ಕಾಳೆ, ಅನೀಲ ತಮಗಾಳೆ, ಭೀಮ ಜಗದಂಡೆ, ವಿಜಯ ಬಿರಾದಾರ, ಜ್ಞಾನೇಶ್ವರ ಪಂಚಾವರೆ, ಮಹೇಶ ಬಾವಗೆ ಸೇರಿದಂತೆ ಇತರರಿದ್ದರು. ಇದಕ್ಕೂ ಮುನ್ನ ಶಾಸಕರು ಮಹಾಡೋಣಗಾಂವ ಗ್ರಾಮದಲ್ಲಿ ಏರ್ಪಡಿಸಿದ್ದ ಅಖಂಡ ಹರಿನಾಮ ಸಪ್ತಾಹದಲ್ಲಿ ಭಾಗವಹಿಸಿದರು.