ಡಾ ಬಾಬಾಸಾಹೇಬ ಅಂಬೇಡ್ಕರ್ ಈ ದೇಶದ ಆಸ್ತಿ: ಡಾ . ಸುನೀಲ ಕುಮಾರ ಕಾಂಬಳೆ

ಡಾ ಬಾಬಾಸಾಹೇಬ ಅಂಬೇಡ್ಕರ್ ಈ ದೇಶದ ಆಸ್ತಿ: ಡಾ . ಸುನೀಲ ಕುಮಾರ ಕಾಂಬಳೆ
ಆಳಂದ: ತಾಲೂಕಿನ ಕಡಗಂಚಿಯ ಸಾಯಿ ಪ್ರತಾಪಪದವಿ ಮಹಾವಿದ್ಯಾಯದಲ್ಲಿಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವದಲ್ಲಿ ಮಾತನಾಡಿದ ಡಾ.ಸುನೀಲ ಕುಮಾರ ಕಾಂಬಳೆ ನಾವು ಅನುಕೂಲಸ್ಥರಾಗಿ ನಮ್ಮ ಸ್ವಾರ್ಥ ಜೀವನಕ್ಕಾಗಿ ಸಿಟಿಯಲ್ಲಿ ಬದುಕುವುದು ಬದುಕು ಮಾತ್ರವಲ್ಲ ಮಹಾನ್ ಚಿಂತಕರವಿಚಾರಗಳನ್ನು ಹಳ್ಳಿ ಹಳ್ಳಿಗೆ ಹೋಗಿ ಜನರನ್ನು ತಿಳಿಹೇಳ ಬೇಕಾಗಿದೆ ಸ್ವಾತಂತ್ಯ ದೊರೆತು75 ವರ್ಷಗಳಾದರು ಕೂಡ ನಮ್ಮ ಬದುಕು ಇನ್ನು ಚಿಂತಾಜನಕವಾಗಿದೆ ಹಾಗಾಗಿ ಎಲ್ಲರೂ ಶಿಕ್ಷಣವನ್ನು ಪಡೆಯಬೇಕು ಶಿಕ್ಷಣವೆ೦ಬುದು ಹುಲಿಯ ಹಾಲಿ ಇದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಇದು ಬಾಬಾ ಸಾಹೇಬ್ರ ಸಂದೇಶವಾಗಿದೆ ಆದರೆ ನಾವು ಬಾಬಾ ಸಾಹೇಬ್ ರ ಋಣದ ಮಕ್ಕಳಾಗಿದ್ದೇವೆ ಇವತ್ತಿನ ಯುವಜನಾಂಗಕ್ಕೆ ಬಾಬಾ ಸಾಹೇಬ್ರು ಮಾದರಿಯಾಗಬೇಕು ಇದನ್ನು ಅರಿತುಕೊಂಡು ಬದುಕಬೇಕಾದ ಸಂದರ್ಭ ಬಂದಿದೆ ಮುಂದಿನ ದಿನಗಳು ಬಹಳ ಕಷ್ಟದ ದಿನಗಳಾಗಲಿವೆ ನನ್ನ ಜನಾಂಗ ಬದುಕಿದರೆ ಹುಲಿಗಳಂತೆ ಬದುಕಲಿ ನಾಯಿ ನರಿ ಯಂತೆ ಬದುಕಾಗಬಾರದು ಯಾಕೆಂದರೆಕುರಿ ಕೊಳಿ ಗಳನ್ನು ಬಲಿಕೊಡುತ್ತಾರೆಹುಲಿ ಸಿಂಹಗಳನಲ್ಲ ದೇವರು ದಿಂಡಿರಗಳ ಬಗ್ಗೆ ನಾವು ಸೂಕ್ಷ್ಮವಾಗಿ ಅರಿತುಕೊಳ್ಳ ಬೇಕಾದ ಸಂದರ್ಭ ಬಂದಿದೆ. ಆದರೆ ಇವು ಎಲ್ಲವುದಕ್ಕೆ ಪರಿಹಾರ ಶಿಕ್ಷಣದಲ್ಲಿ ಮಾತ್ರವಿದೆ ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಸಂವಿಧಾನ ಉಳಿಯದಿದ್ದರೆ ನಮಗೆ ಉಳಿಗಾಲವಿಲ್ಲ ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಯಾಕೆ ಹಿಂದೆ ಬಿಳುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಬಂದಿದೆ ಸಾಮಾಜಿಕನ್ಯಾಯ, ಆರ್ಥಿಕ ನ್ಯಾಯ ಧಾರ್ಮಿಕ ನ್ಯಾಯ ಮತ್ತು ಹಕ್ಕು ಕರ್ತವ್ಯ ನೀಡಿದವರು ಬಾಬಾಸಾಹೇಬರು ಈ ದೇಶದ ಆಸ್ತಿಯಾಗಿದ್ದಾರೆ ಎಂದು ಡಾ. ಸುನೀಲ ಕುಮಾರ ಕಾಂಬಳೆ ನುಡಿದರು. ಈ ಸಂದರ್ಭದಲ್ಲಿ ಅಂದಪ್ಪ ದೋಣಿ ಉಪನ್ಯಾಸಕಿ ಅನಿತಾ ಚೆಂಗಟಿ. ಉಪನ್ಯಾಸಕಿ ಸುಮಿತ್ರಾ. ಉಪನ್ಯಾಸಕಿ ಶೀಲಾ ಪ್ರಾಂಶುಪಾಲ ಡಾ ಅವಿನಾಶ S ದೇವನೂರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವರದಿ ಡಾ. ಅವಿನಾಶ S ದೇವನೂರ