ಸೃಜನಶೀಲ ನರ್ಸಿಂಗ್ ವಿಜ್ಞಾನ ವಿದ್ಯಾರ್ಥಿಗಳಿಂದ ಅರೋಗ್ಯ ರಂಗಕ್ಕೆ ಉತ್ತಮ ಕೊಡುಗೆ : ಕಿರಣ್ ಜಾರ್ಜ್

ಸೃಜನಶೀಲ ನರ್ಸಿಂಗ್ ವಿಜ್ಞಾನ ವಿದ್ಯಾರ್ಥಿಗಳಿಂದ ಅರೋಗ್ಯ ರಂಗಕ್ಕೆ ಉತ್ತಮ ಕೊಡುಗೆ : ಕಿರಣ್ ಜಾರ್ಜ್
ಕ್ಲಿನಿಕಲ್ ವರ್ಕ್ ಶಾಪ್ - ಪ್ರಾತ್ಯಕ್ಷಿಕೆ ಪ್ರದರ್ಶನ ಉದ್ಘಾಟನೆ
ಕಲಬುರಗಿ :ಆರೋಗ್ಯ ಕ್ಷೇತ್ರದಲ್ಲಿ ವೈಜ್ಞಾನಿಕ ಮನೋಭಾವದ ನರ್ಸಿಂಗ್ ವಿದ್ಯಾರ್ಥಿಗಳು ಅಪಾರ ಕೊಡುಗೆ ನೀಡುತ್ತಿದ್ದು ಸೃಜನಶೀಲತೆಯಿಂದ ಹೊಸ ಹೊಸ ಆವಿಷ್ಕಾರ ಶೋಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಡಿವೈನ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಯನ್ಸ್ ನ ನಿರ್ದೇಶಕರಾದ ಕಿರಣ್ ಜಾರ್ಜ್ ಹೇಳಿದರು.
ಕಲಬುರಗಿಯಲ್ಲಿ ೭೯ ನೇ ಸ್ವಾತಂತ್ರೋತ್ಸವ ಆಚರಣೆ ನಿಮಿತ್ತ ಆಗಸ್ಟ್ ೧೫ ರಂದು ಡಿವೈನ್ ನರ್ಸಿಂಗ್ ಸಂಸ್ಥೆಯ ವಿದ್ಯಾರ್ಥಿಗಳು ಏರ್ಪಡಿಸಿದ " ಕ್ಲಿನಿಕಲ್ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ವೈಜ್ಞಾನಿಕ ಮನೋಭಾವದ ನರ್ಸಿಂಗ್ ವಿದ್ಯಾರ್ಥಿಗಳಿಂದ ಆರೋಗ್ಯ ರಂಗಕ್ಕೆ ಪ್ರಾತ್ಯಕ್ಷಿಕೆ ವಸ್ತು ಪ್ರದರ್ಶನವು ಮಹತ್ವದ ಕೊಡುಗೆಯಾಗಲಿದೆ ಎಂದರು.
ಆರೋಗ್ಯ ರಂಗದಲ್ಲಿ ಹೊಸ ಹೊಸ ವೈಜ್ಞಾನಿಕ ಉಪಚಾರ ಕ್ರಮ, ನರ್ಸಿಂಗ್ ವಿದ್ಯಾರ್ಥಿಗಳು ತಯಾರಿಸಿದ ಪ್ರಾತ್ಯಕ್ಷಿಕೆಗಳು ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದು ಸಂತ ಮೇರಿಸ್ ಶಾಲೆಯ ಮುಖ್ಯ ಉಪಾಧ್ಯಯರಾದ ಫಾ. ಪ್ರವೀಣ್ ಡೇವಿಡ್ ಹೇಳಿದರು.
ಕಲಬುರಗಿಯ ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಸೃಜನ ಶೀಲತೆಯಿಂದ ಶೋಧಿಸಿದ ವೈದ್ಯಕೀಯ ರಂಗಕ್ಕೆ ನೆರವಾಗುವ ಪ್ರಾತ್ಯಕ್ಷಿಕೆಗಳು ಈ ಭಾಗದ ವಿದ್ಯಾರ್ಥಿಗಳ ನೈಪುಣ್ಯತೆಗೆ ಸಾಕ್ಷಿ ಎಂದು ಆಕಾಶವಾಣಿಯ ನಿವೃತ್ತ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹೇಳಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಏರ್ಪಡಿಸಿದ ವಸ್ತು ಪ್ರದರ್ಶನ, ಪ್ರಾತ್ಯಕ್ಷಿಕೆಗಳು ನರ್ಸಿಂಗ್ ಹಾಗೂ ಅರೋಗ್ಯ ರಂಗದ ಕಣ್ಣು ತೆರೆಸಲಿದ್ದು ಯುವ ನರ್ಸಿಂಗ್ ವಿಜ್ಞಾನಿಗಳ ಕೊಡುಗೆ ಗಮನರ್ಹವಾಗಲಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಅಭಿಪ್ರಾಯಪಟ್ಟರು.
ಡಿವೈನ್ ಇನ್ಸ್ಟಿ ಟ್ಯೂಟ್ ಆಫ್ ನರ್ಸಿಂಗ್ ಸಯನ್ಸ್ ನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ೧೫ ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು ಮತ್ತು ವೀಕ್ಷಕರಿಗೆ ವಿವರಣೆ ನೀಡಿದರು. ನಂತರ ಕುದ್ರೋಳಿ ಗಣೇಶ್ "ಮೈಂಡ್ ಮ್ಯಾಜಿಕ್" ಪ್ರದರ್ಶಿಸಿ ಮಾಡಿ ಜನ ಮೆಚ್ಚುಗೆ ಪಡೆದರು.