ಸ್ಲಂ ಅಲೆಮಾರಿ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಪಂಚಮಿ ಆಚರಣೆ ಸುರೇಶ್ ಹಾದಿಮನಿ
ಸ್ಲಂ ಅಲೆಮಾರಿ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಪಂಚಮಿ ಆಚರಣೆ ಸುರೇಶ್ ಹಾದಿಮನಿ
ಕಲಬುರಗಿ: ಸ್ಲಂ ಜನರ ಸಂಘಟನೆ -ಕರ್ನಾಟಕ ಕಲಬುರಗಿ ವತಿಯಿಂದ ಬಸವ ಪಂಚಮಿಯನ್ನು ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ಕೊಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಲಕರಾದ ಸುರೇಶ್ ಹಾದಿಮನಿ ಅವರು ಉದ್ಘಾಟಿಸಿದರು. ಕಲ್ಲು ದೇವರಿಗೆ ಹಾಲು ಹಾಕಿ ವ್ಯರ್ಥ ಮಾಡುವುದಕ್ಕಿಂತ ಬಡ ಮಕ್ಕಳಿಗೆ ಹಾಲುಣಿಸಿದರೆ ಪೌಷ್ಟಿಕ ಬೆಳೆಯುತ್ತದೆ , ಶರಣರ ತತ್ವಗಳನ್ನು ಪಾಲಿಸಿದಂತಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಸ್ಲಂ ಜನರ ಸಂಘಟನೆಯ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಶಿವ ಶರಣಪ್ಪ ದೇವನೂರ, ಮಲ್ಲಿಕಾರ್ಜುನ್ ಸಿಂಗೆ, ಬ್ರಹ್ಮಾನಂದ ಮಿಂಚ, ಕರಣ ಬಂದರವಾಡ್, ಶಿವಕುಮಾರ್ ಚಿಂಚೋಳಿ, ಪಂಡಿತ್ ಬೈರಾಮಡಗಿ, ರಾಘವೇಂದ್ರ ಮಿಂಚ ಸೇರಿದಂತೆ ಅಲೆಮಾರಿ ಸಮುದಾಯದ ಮುಖಂಡರು ಮತ್ತು ಮಕ್ಕಳು ಉಪಸ್ಥಿತರಿದ್ದರು.