ಚಿತ್ತಾಪುರ ಕೋಲಿ ನಮಾಜವನ್ನು ಒಗ್ಗೂಡಿಸಿದ್ದು ತಿಪ್ಪಣ್ಣಪ್ಪ ಕಮಕನೂರ ಒಡಕು ಮೂಡಿಸಿದ್ದು ಭೀಮಣ್ಣ ಸಾಲಿ
ಚಿತ್ತಾಪುರ ಕೋಲಿ ನಮಾಜವನ್ನು ಒಗ್ಗೂಡಿಸಿದ್ದು ತಿಪ್ಪಣ್ಣಪ್ಪ ಕಮಕನೂರ ಒಡಕು ಮೂಡಿಸಿದ್ದು ಭೀಮಣ್ಣ ಸಾಲಿ
ಚಿತ್ತಾಪುರ: ತಾಲ್ಲೂಕಿನಲ್ಲಿ ಕೋಲಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾಜವನ್ನು ಸಂಘಟಿಸಿ ಒಗ್ಗೂಡಿಸುವ ಕೆಲಸ ಕೋಲಿ ಗಂಗಾಮತ ಸಮಾಜದ ರಾಜ್ಯ ಗೌರವಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಆದರೆ ಚಿತ್ತಾಪುರದಲ್ಲಿ ಹಿರಿಯ ಮುಖಂಡರೆಂದು ಎನ್ನಿಸಿಕೊಂಡ ಭೀಮಣ್ಣ ಸಾಲಿ ಅವರು ತಮ್ಮ ಸ್ವಾರ್ಥಕ್ಕಾಗಿ ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಮಾಜವನ್ನು ತಪ್ಪು ದಾರಿಗೆ ಎಳೆದು ಯುವಕರಲ್ಲಿ ಮಿಸ್ ಗೈಡ್ ಮಾಡಿ ಸಮಾಜದಲ್ಲಿ ವಿಷಬೀಜ ಬಿತ್ತಿ ಒಡಕ್ಕುಂಟು ಮಾಡಿ ಜಗಳ ಹೆಚ್ಚುವ ಕೆಲಸ ಮಾಡಿದ್ದಾರೆ ಎಂದು ಕೋಲಿ ಸಮಾಜದ ಗೌರವಾಧ್ಯಕ್ಷ ಭೀಮಣ್ಣ ಶೀಬಾ, ಮತ್ತು ಅಂಬಿಗ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಶರಣಪ್ಪ ನಾಟಿಕರ್ ಅವರು ಹೇಳಿದ್ದಾರೆ.
ಪಟ್ಟಣದ ಅಂಬಿಗರ ಚೌಡಯ್ಯ ವೃತ್ತಿದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಅವರು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಹೀಗಾಗಿ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಚಿತ್ತಾಪುರ ಕೋಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಸ್ಥಾನ ಆಯ್ಕೆ ಮಾಡುವಲ್ಲಿ ಮೊದಲಿಂದಲೂ ಜನರ ಸಹಮತದ ಮೇರೆಗೆ ಅಂತಿಮವಾಗಿ ತಿಪ್ಪಣ್ಣಪ್ಪ ಕಮಕನೂರ ಅವರ ಲೇಟರ್ ಪ್ಯಾಡ್ ಮೇಲೆಯೇ ಅವರು ಘೋಷಣೆ ಮಾಡಲಾಗುತ್ತಿತ್ತು ಇದು ಎಲ್ಲರಿಗೂ ಗೊತ್ತಿದ್ದರೂ ವಿನಾಕಾರಣ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವ ಪ್ರಯತ್ನ ಮಾಡಬೇಡಿ. ತಿಪ್ಪಣ್ಣಪ್ಪ ಕಮಕನೂರ ಅವರ ಲೇಟರ್ ಪ್ಯಾಡ್ ನಲ್ಲಿಯೇ ಈ ಹಿಂದೆ ಅಧ್ಯಕ್ಷರಾದವರು ಮೌನ ವಹಿಸಿರುವುದು ದುರಂತ ನಾವು ಯಾರ ಲೇಟರ್ ಪ್ಯಾಡ್ ನಲ್ಲಿ ಅಧ್ಯಕ್ಷರಾಗಿದ್ದೇವೆ ಎಂಬುದು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ. ಹೀಗಾಗಿ ತಿಪ್ಪಣ್ಣಪ್ಪ ಕಮಕನೂರ ಅವರು ತಮ್ಮ ಲೇಟರ್ ಪ್ಯಾಡ್ ನ್ನು ಸರಿಯಾಗಿಯೇ ಬಳಸಿದ್ದಾರೆ ಹೀಗಾಗಿ ಭೀಮಣ್ಣ ಸಾಲಿ ಅವರು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿರುಗೆಟು ನೀಡಿದರು.
ತಿಪ್ಪಣ್ಣಪ್ಪ ಕಮಕನೂರ ಅವರು ಕೋಲಿ ಸಮಾಜದ ರಾಜ್ಯ ಮಟ್ಟದ ಒಬ್ಬ ಪ್ರಭಾವಿ ನಾಯಕರಾಗಿದ್ದು ಈಗ ವಿಧಾನ ಪರಿಷತ್ ಸದಸ್ಯರಾಗಿ ಕೋಲಿ ಸಮಾಜದ ಧ್ವನಿಯಾಗಿದ್ದಾರೆ ಹೀಗಾಗಿ ಇವರ ಬೆಳವಣಿಗೆ ಸಹಿಸಿಕೊಳ್ಳಕ್ಕಾಗದೇ ಹೊಟ್ಟೆ ಕಿಚ್ಚಿನಿಂದ ಭೀಮಣ್ಣ ಸಾಲಿ ಅವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಇದು ಇಲ್ಲಿಗೆ ನಿಲ್ಲಿಸಿ. ನಿಮ್ಮ ಗೌರವ ಉಳಿಸಿಕೊಳ್ಳಿ ಇಲ್ಲದಿದ್ದರೆ ಸಮಾಜದ ಜನರಿಂದಲೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು ನೀಡಿದರು.
ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಆಯ್ಕೆ ಮಾಡುವಲ್ಲಿ ಒಮ್ಮೆ ಅಧ್ಯಕ್ಷ ಅಂತ ಮಾಡುತ್ತಾರೆ ಒಮ್ಮೆ ಕ್ಯಾನ್ಸಲ್ ಅಂತ ಹೇಳುತ್ತಾರೆ ಒಮ್ಮೆ ದಿಗ್ಗಾಂವ ಭಾಗದಲ್ಲಿ ಬಹಳಷ್ಟು ಜನರು ಅಧ್ಯಕ್ಷರಾಗಿದ್ದಾರೆ ಹೀಗಾಗಿ ದಂಡೋತಿ, ಗುಂಡಗುರ್ತಿ ಭಾಗದವರಿಗೆ ಅಧ್ಯಕ್ಷ ಮಾಡಲಾಗುತ್ತದೆ ಎಂದು ಹೇಳಿ ಸಮಾಜದಲ್ಲಿ ಗೊಂದಲ ಮೂಡಿಸಿ ಅಶಾಂತಿ ವಾತಾವರಣ ನಿರ್ಮಿಸಿದ್ದಾರೆ. ಹೀಗಾಗಿ ತಾಲೂಕಿನಲ್ಲಿ ಇಬ್ಬರು ಅಧ್ಯಕ್ಷರಾಗಲು ಭೀಮಣ್ಣ ಸಾಲಿ ಅವರೇ ಕಾರಣ ಆಗಿದ್ದಾರೆ. ಆದ್ದರಿಂದ ಸಮಾಜದ ಜನರು ದಾರಿ ತಪ್ಪಿಸುವವರ ಮಾತುಗಳಿಗೆ ಕಿವಿಗೊಡದೆ ಕೋಲಿ ಸಮಾಜದ ಅಧಿಕೃತ ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ ಯಾಗಾಪೂರ ಅವರಿಗೆ ಬೆಂಬಲಿಸಬೇಕು. ಇವರ ನೇತೃತ್ವದಲ್ಲಿ ಜನವರಿ 21ರಂದು ನಡೆಯುವ ಅಂಬಿಗರ ಚೌಡಯ್ಯ ಜಯಂತಿ ಯಶಸ್ವಿಗೆ ಸಹಕರಿಸಿ ಇವರ ಕೈ ಬಲಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದರು.
ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ , ಮುಖಂಡರಾದ ಸಾಬಣ್ಣ ಡಿಗ್ಗಿ, ತಮ್ಮಣ್ಣ ಡಿಗ್ಗಿ, ಕಾಶಪ್ಪ ಡೊಣಗಾಂವ, ಸಾಬಣ್ಣ ಭರಾಟೆ, ದಶರಥ ದೊಡ್ಡಮನಿ, ಸಂತೋಷ ನಾಟಿಕಾರ , ಮಾಹಾದೇವ ಮುಗಟಿ,ಮಾಹಾದೇವ ಕೊನಗೇರಿ ಇದ್ದರು.