ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಶ್ರಿಂಗೇರಿ ಆಯ್ಕೆ

ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಶ್ರಿಂಗೇರಿ ಆಯ್ಕೆ
ಆಳಂದ :ತಾಲೂಕಿನ ಕಿಣ್ಣಿ ಸುಲ್ತಾನ್ ಗ್ರಾಮದ ಮಲ್ಲಿಕಾರ್ಜುನ ಶೃಂಗೇರಿ ಅವರು ಅರಿವು ಶಿಕ್ಷಣಕೇಂದ್ರವನ್ನು ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣವನ್ನ ನೀಡುತ್ತಿರುವುದಲ್ಲದೆ ಅನ್ಯಾಯದ ವಿರುದ್ಧ ಹೋರಾಟ ಬಡವರಿಗೆ ಸಹಾಯ ಮಾಡುತ್ತಿರುವುದನ್ನು ಮತ್ತುಇವರ ಅಪಾರವಾದ ಸೇವೆಯನ್ನು ಪರಿಗಣಿಸಿ ಕಲ್ಬುರ್ಗಿಯ ಜಗತ್ ಸರ್ಕಲ್ ನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ಸಂಸ್ಥಾಪಕರಾದ ಡಾ. ಕೆ.ಎಂ ಸಂದೇಶ್ಅವರ ಆದೇಶದ ಮೇರೆಗೆ ಹಾಗೂ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷ ಬುದ್ದೆಶ್ ಸಿಂಗೆ ಹಾಗೂ ಕಲ್ಬುರ್ಗಿ ಯುವ ಘಟಕದ ಅಧ್ಯಕ್ಷ ಎನ್ .ಕೆ.ಅರ್ಜುನ್ ಅವರ ನೇತೃತ್ವದಲ್ಲಿ ಆಳಂದ ತಾಲೂಕ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಶೃಂಗೇರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಮರ್ ಹಿರಿ ನಾಯಕ್,ವಿಜಯ್ ಕುಮಾರ್ ಚಿಂಚೋಳಿ, ರತಿಕಾಂತ ಭಜನ ವಿಕ್ರಾಂತ್ ಮುಂತಾದವರು ಉಪಸ್ಥಿತರಿದ್ದರು ವರದಿ ಡಾ.ಅವಿನಾಶ್ S ದೇವನೂರ