ಪಕ್ಷದ ಸೇವೆ ಪರಿಗಣಿಸಿ ನಿಗಮ ಮಂಡಳಿಗೆ ನೇಮಿಸಿ :..ರಮೇಶ ಪವಾರ.

ಪಕ್ಷದ ಸೇವೆ ಪರಿಗಣಿಸಿ ನಿಗಮ ಮಂಡಳಿಗೆ ನೇಮಿಸಿ :..ರಮೇಶ ಪವಾರ.

ಪಕ್ಷದ ಸೇವೆ ಪರಿಗಣಿಸಿ ನಿಗಮ ಮಂಡಳಿಗೆ ನೇಮಿಸಿ :..ರಮೇಶ ಪವಾರ.

ಶಹಾಬಾದ : - ಸಮಾಜ ಸೇವೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮಾಡಿದ ಕೆಲಸವನ್ನು ಪರಿಗಣಿಸಿ ಜಿಲ್ಲೆ ಅಥವಾ ತಾಲೂಕಿನ ಯಾವುದಾದರೊಂದು ನಿಗಮ ಮಂಡಳಿಗೆ ನನ್ನನ್ನು ಅಧ್ಯಕ್ಷ / ಸದಸ್ಯರನ್ನಾಗಿ ಪರಿಗಣಿಸಬೇಕು ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಹಾಬಾದ ನಗರದ ಕಾಂಗ್ರೆಸ್‌ ಪಕ್ಷದ ಯುವ ಮುಖಂಡ ರಮೇಶ ಪವಾರ ಸಿಬರಕಟ್ಟಾ ಮನವಿ ಮಾಡಿದ್ದಾರೆ.

ಅವರು ನಗರದಲ್ಲಿ ಮಾದ್ಯಮ ದವರೊಂದಿಗೆ ಮಾತನಾಡಿ,ನಗರಸಭೆಯ ನಾಮನಿರ್ದೇಶಿತ, ಆಶ್ರಯ ಸಮೀತಿ, ಸರ್ಕಾರಿ ಆಸ್ಪತ್ರೆ, ಜೇಸ್ಕಾಂ, ನಗರ ಯೋಜನಾ ಪ್ರಾಧೀಕಾರ, ಎಪಿಎಂಸಿ, ಲ್ಯಾಂಡ್ ಟ್ರಿಬ್ಯೂನಲ ದಂತ ಯಾವುದಾದರು ಒಂದರಲ್ಲಿ ನಿಗಮದ ಅಧ್ಯಕ್ಷ / ಸದಸ್ಯರನ್ನಾಗಿ ಆಯ್ಕೆ ಮಾಡಲು ಕೋರಿ ಮನವಿ ಮಾಡಿದರು. 

ನಾನು ಹಲವಾರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ನಗರಸಭೆ, ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ಗ್ರಾಮ ಪಂಚಾಯತ ಮತ್ತು ವಿಧಾನ ಸಭೆ, ಲೋಕ ಸಭೆಯ ಚುನಾವಣೆಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಗೆಲುವಿಗಾಗಿ ಹಗಲಿರಳು ಶ್ರಮವಹಿಸಿದ್ದೇನೆ.

ಕಳೆದ ಹಲವಾರು ವರ್ಷಗಳಿಂದ ಇಲ್ಲಿಯವರೆಗೆ ಭೋವಿ ಸಮಾಜದ ಹಲವಾರು ಹೋರಾಟಗಳಲ್ಲಿ ಮತ್ತು ಸಂಘಟನೆಯಲ್ಲಿ ಹಾಗೆ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ, ಜೊತೆಗೆ ನಗರಸಭೆ, ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸು್ತಿ ದ್ದೇನೆ, ಇದೆಲ್ಲವನ್ನು ಪರಿಗಣಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಸಚಿವರಾದ ಶರಣಪ್ರಕಾಶ ಪಾಟೀಲ ಮತ್ತು ಜಿಲ್ಲಾಧ್ಯಕ್ಷರಾದ ಜಗದೇವ ಗುತ್ತೇದಾರ ಹಾಗೂ ಬ್ಲಾಕ್ ಅಧ್ಯಕ್ಷರಾದ ಡಾ.ಎಂಎ ರಶೀದ ಸೇರಿ ತಮ್ಮನ್ನು ನಿಗಮ ಮಂಡಳಿಗೆ ನೇಮಕ ಮಾಡಬೇಕು ಎಂದು ರಮೇಶ ಪವಾರ ಮನವಿ ಮಾಡಿದ್ದಾರೆ.