ಹೆಚ್.ಡಿ. ಕುಮಾರ ಸ್ವಾಮಿಯವರಿಗೆ ಕೀಳು ಪದ ಬಳಸಿದ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕರ ವಿರುದ್ಧ ಕ್ರಮಕ್ಕೆ ಆಗ್ರಹ
ಹೆಚ್.ಡಿ. ಕುಮಾರ ಸ್ವಾಮಿಯವರಿಗೆ ಕೀಳು ಪದ ಬಳಸಿದ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕರ ವಿರುದ್ಧ ಕ್ರಮಕ್ಕೆ ಆಗ್ರಹ
ಬೀದರ : ಉನ್ನತ ಸ್ಥಾನದಲ್ಲಿದ್ದ ಲೋಕಾಯುಕ್ತ ತನಿಖೆ ದಳದ ಮುಖ್ಯಸ್ಥ ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕರು ಶ್ರೀ ಎಮ್. ಚಂದ್ರಶೇಖರ ಅವರು ಪ್ರಜಾಸತಾತ್ಮಕ ರಾಜಕೀಯ ಉನ್ನತ ಸೇವೆಯಲ್ಲಿದ್ದ ಶ್ರೀ ಹೆಚ್.ಡಿ. ಕುಮಾರ ಸ್ವಾಮಿಯರವನ್ನು ಕೀಳು ಮಟ್ಟದ ಪದ ಉಪಯೋಗಿಸಿ ಮಾತನಾಡಿದ್ದು ತೀವ್ರವಾಗಿ ಖಂಡಿಸಿ, ಅರವ ವಿರುದ್ಧ ಕ್ರಮಕೈಗೊಳ್ಳಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬೀದರ್ ಜೆಡಿಎಸ್ ಪಕ್ಷ ಆಗ್ರಹಿಸಿದೆ.
ಭಾರತದ ಸಂವಿಧಾನ ಆರ್ಟಿಕಲ್ 21 ರ ಪ್ರಕಾರ ಭಾರತ ದೇಶದ ಪ್ರತಿಯೊಬ್ಬ ವ್ಯಕ್ತಿ ಘನತೆ ಗೌರವದಿಂದ ಬದುಕಬೇಕು ಎಂದು ತಿಳಿಸುತ್ತದೆ.
ಅಲ್ಲದೆ ಬ್ರಷ್ಟಾಚಾರ, ದುರನಡತೆ ಮತ್ತು ಸುಲುಗೆ, ಮುಂತಾದ ಕ್ರಿಮಿನಲ್ ಕೇಸಗಳಲ್ಲಿ ಭಾಗಿಯಾಗಿರುವ ಅಧಿಕಾರಿ ಇವರನ್ನು ಕೂಡಲೇ ಭಾರತಿಯ ಸೇವೆಯಿಂದ ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಡಾ. ಜಿಯಾವುದ್ದಿನ ನಿಲ್ಲಂಗೆಕರ್,ಆಕಾಶ ಖಂಡಾಳೆ,ತಟ್ಟಿರರ್ ಪಾತಾ ಸಾಬ ಮುಜಾವರ ಆಗ್ರಹಿಸಿದ್ದಾರೆ.