ನಾಳೆ ಕಲಬುರಗಿಗೆ ಆಗಮಿಸುತ್ತಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ಎಸ್ ವಿಜೇಯೇಂದ್ರ ಯತ್ನಾಳ್ ಒಡೆತನದ ಚಿಂಚೋಳಿ ಸಿದ್ದಸಿರಿ ಕಾರ್ಖಾನೆ ಪ್ರಾರಂಭಕ್ಕೆ ನಡೆಸುತ್ತಿರುವ ಹೋರಾಟದ ರೈತರ ಬೆಂಬಲಕ್ಕೆ ದಾವಿಸಲು ಮನವಿ

ನಾಳೆ ಕಲಬುರಗಿಗೆ ಆಗಮಿಸುತ್ತಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ಎಸ್ ವಿಜೇಯೇಂದ್ರ  ಯತ್ನಾಳ್ ಒಡೆತನದ ಚಿಂಚೋಳಿ ಸಿದ್ದಸಿರಿ ಕಾರ್ಖಾನೆ ಪ್ರಾರಂಭಕ್ಕೆ ನಡೆಸುತ್ತಿರುವ ಹೋರಾಟದ ರೈತರ ಬೆಂಬಲಕ್ಕೆ ದಾವಿಸಲು ಮನವಿ

ನಾಳೆ ಕಲಬುರಗಿಗೆ ಆಗಮಿಸುತ್ತಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ಎಸ್ ವಿಜೇಯೇಂದ್ರ 

ಯತ್ನಾಳ್ ಒಡೆತನದ ಚಿಂಚೋಳಿ ಸಿದ್ದಸಿರಿ ಕಾರ್ಖಾನೆ ಪ್ರಾರಂಭಕ್ಕೆ ನಡೆಸುತ್ತಿರುವ ಹೋರಾಟದ ರೈತರ ಬೆಂಬಲಕ್ಕೆ ದಾವಿಸಲು ಮನವಿ 

ಚಿಂಚೋಳಿ : 

ನಾಳೆ ಡಿ. 4 ರಂದು ಕಲಬುರಗಿಗೆ ಬಿಜೆಪಿ ಪಕ್ಷದ ರಾಜ್ಯಧ್ಯಕ್ಷ ಬಿ. ಎಸ್.ವಿಜಯೇಂದ್ರ ಯಡಿಯೂರಪ್ಪನವರು ರೈತರ ಅಹವಾಲು ಸ್ವೀಕಾರಕ್ಕಾಗಿ ಹಾಗೂ ವಕ್ಫ ಬೋರ್ಡ ಹೋರಾಟಕ್ಕಾಗಿ ಕಲಬುರಗಿ ಹಾಗೂ ಬೀದರ್ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯ ಸಮೀಪದಲ್ಲಿಯೇ ಇರುವ ಬಿಜಾಪೂರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾಲೀಕತ್ವದ ಚಿಂಚೋಳಿ ಸಿದ್ದಶ್ರೀ ಇಥಿನಾಲ್ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ರೈತರು ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಿ ರೈತರಿಗೆ ಶಕ್ತಿ ತುಂಬ ಬೇಕೆಂದು ಹಿಂದು ಜಾಗೃತಿ ಸೇನೆಯ ಕಾಳಗಿ ತಾಲೂಕು ಘಟಕದ ಅಧ್ಯಕ್ಷ ಶಂಕರ ಚೋಕಾ ಪ್ರಕಟಣೆ ಮುಖಾಂತರ ಮನವಿ ಮಾಡಿದ್ದಾರೆ.

  ಕಳೆದ ಚಿಂಚೋಳಿ ವಿಧಾನಸಭೆ ಉಪಚುನಾವಣೆಯಲ್ಲಿ ಅತಿ ಹಿಂದುಳಿದ ತಾಲೂಕ ಚಿಂಚೋಳಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕಾರ್ಖಾನೆಯನ್ನು ಪ್ರಾರಂಭ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಚಿಂಚೋಳಿಯ ಸಿದ್ದಸಿರಿ ಇಥೆನಾಲ್ ಕಾರ್ಖಾನೆ ಬಂದ್ ಮಾಡಿಸಲಾಗಿದ್ದು, ಈ ಭಾಗದ ಕಬ್ಬು ಬೆಳೆಗಾರ ರೈತರಿಗೆ ತುಂಬಾ ತೊಂದರೆ ಆಗುತ್ತದೆ. ಸುಮಾರು 25000 ಎಕ್ಕರೆ ಗಿಂತ ಹೆಚ್ಚು ಭೂಮಿಯಲ್ಲಿ ರೈತರು ಕಬ್ಬು ಬೆಳೆಯಲಾಗಿದೆ. ರಾಜಕೀಯ ದುರುದ್ದೇಶದ ಕಾರಣಗಳಿಂದ ಬಂದು ಮಾಡಿಸಲಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿ ಕಾನೂನಾತ್ಮಕವಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಪರಿಣಾಮವಾಗಿ ಚಿಂಚೋಳಿ ರೈತರ ಹಿತ ದೃಷ್ಟಿಯಿಂದ ಹೈಕೋರ್ಟ್ ಪ್ರಾರಂಭ ಮಾಡಲು ಅನುಮತಿ ನೀಡಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೈಕೋರ್ಟ್ ಪ್ರಾರಂಭ ಮಾಡಲು ತಿಳಿಸಿದರು ಸಹ ಅನುಮತಿಸದೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಇದರಿಂದ ತಾಲೂಕಿನ ಕಬ್ಬು ಬೆಳೆಗಾರ ರೈತರಿಗೆ ತುಂಬಾ ಅನುಭವಿಸುವಂತಾಗಿದೆ. ಸಿದ್ದಸಿರಿ ಕಾರ್ಖಾನೆಯನ್ನು ನಂಬಿ ರೈತರು ಸಾಲ ಮಾಡಿ ಕಬ್ಬು ಬೆಳೆದಿದ್ದಾರೆ. ಪುನ್ಹ ಕಾರ್ಖಾನೆ ಪ್ರಾರಂಭಕ್ಕಾಗಿ ಕಬ್ಬು ಬೆಳೆಗಾರ ರೈತರು ನಿರಂತರವಾಗಿ ಒಂದು ತಿಂಗಳಿನಿಂದ ಹೊರಾಟ ಹಾದಿ ತುಳಿದು , ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಜಿಲ್ಲೆಯ ಸಚಿವರುಗಳು ಹಾಗೂ ಜಿಲ್ಲಾಧಿಕಾರಿಗಳು ಹೋರಾಟದ ಸ್ಥಳಕ್ಕೆ ಬಂದು ರೈತರಿಗೆ ಭೇಟಿ ನೀಡಿ ಸ್ಪಂದನೆ ಮಾಡೆದಿರುವುದು ಖಂಡನೀಯವಾಗಿದೆ. ಈ ಹಿನ್ನಲೆಯಲ್ಲಿ ನಾಳೆ ಡಿ. 4 ರಂದು ಕಲಬುರಗಿಗೆ ಆಗಮಿಸುತ್ತಿರುವ ಬಿಜೆಪಿ ರಾಜ್ಯ ಅಧ್ಯಕ್ಷ ವಿಜೇಯೇಂದ್ರ ಅವರು ರೈತರ ಬಗ್ಗೆ ಕಾಳಜಿ ವಹಿಸಿ ರಾಜಕೀಯ ಬಿಟ್ಟು ಚಿಂಚೋಳಿಯ ರೈತರ ಹಿತ ದೃಷ್ಟಿಯಿಂದ ಇಥೆನಾಲ್ ಕಾರ್ಖಾನೆ ಪ್ರಾರಂಭದ ಹೋರಾಟದಲ್ಲಿ ಭಾಗವಹಿಸಿ, ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು, ರೈತ ವಿರೋಧಿ ಸರ್ಕಾರದ ವಿರುದ್ಧ ಹೋರಾಟ ಮಾಡಿ ಚಿಂಚೋಳಿ ತಾಲೂಕಿನ ಜನತೆಗೆ ನ್ಯಾಯ ಒದಗಿಸಿ ಕೊಡಬೇಕೆಂದು ಶಂಕರ ಚೋಕೆ ಅವರು ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.