ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾಗಿ ಸಿದ್ದಣ್ಣ ಅಧಿಕಾರ ಸ್ವೀಕಾರ: ಅಭಿನಂದನೆ

ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾಗಿ ಸಿದ್ದಣ್ಣ ಅಧಿಕಾರ ಸ್ವೀಕಾರ: ಅಭಿನಂದನೆ

ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾಗಿ ಸಿದ್ದಣ್ಣ ಅಧಿಕಾರ ಸ್ವೀಕಾರ: ಅಭಿನಂದನೆ

ಕಲಬುರಗಿ: ಆಕಾಶವಾಣಿ ಕೇಂದ್ರದ ನೂತನ ಕಾರ್ಯಕ್ರಮ ಮುಖ್ಯಸ್ಥರಾಗಿ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಸಿದ್ದಣ್ಣ ಬಿ ಆಗಸ್ಟ್ ಒಂದರಂದು ಅಧಿಕಾರ ಸ್ವೀಕರಿಸಿದ್ದಾರೆ.

    ಸಿದ್ದಣ್ಣ ಅವರು ಮೂಲತಃ ಚಿತ್ರದುರ್ಗದವರಾಗಿದ್ದು 1996ರಲ್ಲಿ ಪ್ರಸಾರ ನಿರ್ವಾಹಕರಾಗಿ ಹುದ್ದೆಗೆ ಸೇರಿ 17 ವರ್ಷಗಳ ನಂತರ 2013ರಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಭಡ್ತಿ ಪಡೆದಿದ್ದರು 2023ರಿಂದ ನಿಯಮಿತ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಕಳೆದ ವರ್ಷ ಕಲಬುರಗಿ ಆಕಾಶವಾಣಿಗೆ ವರ್ಗಾವಣೆ ಹೊಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಮಶೇಖರ್ ಎಸ್ ರುಳಿ ಜುಲೈ 31ರಂದು ಕಾರ್ಯಕ್ರಮ ಮುಖ್ಯಸ್ಥರ ಸ್ಥಾನದಿಂದ ನಿವೃತ್ತಿ ಹೊಂದಿದ ನಂತರ ಸಿದ್ದಣ್ಣ ಅವರನ್ನು ನೂತನ ಕಾರ್ಯಕ್ರಮ ಮುಖ್ಯಸ್ಥರಾಗಿ ಬೆಂಗಳೂರಿನ ಉಪ ಮಹಾ ನಿರ್ದೇಶಕರ ನಿರ್ದೇಶನದ ಮೇರೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಉತ್ತಮ ಕಾರ್ಯಕ್ರಮ ನಿರ್ಮಾಪಕರಾದ ಸಿದ್ದಣ್ಣ ಅವರನ್ನು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮತ್ತು ಅನಿಲ್ ಕುಮಾರ್ ಎಚ್ ಎನ್ ಶಾಲು, ಹಾರ ಮತ್ತು ಕೃತಿ ನೀಡಿ ಸನ್ಮಾನಿಸಿದರು. ತಮ್ಮ ಅವಧಿಯಲ್ಲಿ ಆಕಾಶವಾಣಿಯಲ್ಲಿ ವಿನೂತನ ಕಾರ್ಯಕ್ರಮಗಳು ಬಿತ್ತರಗೊಂಡು ಈ ಭಾಗದ ಕಲೆ, ಸಂಸ್ಕೃತಿಯನ್ನು ಬೆಳೆಸುವ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾಗುವಂತೆ ನೂತನ ಕಾರ್ಯಕ್ರಮಗಳು ಬಿತ್ತರಗೊಳ್ಳಲಿ ಎಂದು ಡಾ.ಪೆರ್ಲ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿಶೇಷ ಅನುಭವ ಹೊಂದಿದ ಸಿದ್ದಣ್ಣ ಅವರ ಸೇವೆ ಈ ಭಾಗಕ್ಕೆ ಲಭಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅನಿಲ್ ಕುಮಾರ್ ಎಚ್ ಎನ್ ಶುಭಕೋರಿದರು. 

   ಈ ಸಂದರ್ಭದಲ್ಲಿ ಹಿರಿಯ ಉದ್ಘೋಷಕರಾದ ಶಾರದಾ ಜಂಬಲದಿನ್ನಿ, ಪ್ರಸಾರ ನಿರ್ವಾಹಕರಾದ ಸಂಗಮೇಶ ಜೊತೆಗಿದ್ದರು.