ಗೋವು ಪ್ರೇಮದ ರಾಜಕೀಯ ಲಾಭ ಎನ್ನುತ್ತಾರೆ ಸಚಿವ ಪ್ರಿಯಾಂಕ್ ಖರ್ಗೆ

ಗೋವು ಪ್ರೇಮದ ರಾಜಕೀಯ ಲಾಭ ಎನ್ನುತ್ತಾರೆ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಗೋಮಾತೆ ಮತ್ತು ಗೋಸಂರಕ್ಷಣೆ ಕುರಿತು ಪದೇ ಪದೇ ಮಾತನಾಡುವ ಬಿಜೆಪಿಯವರು, ನಿಜಕ್ಕೂ ಗೋವುಗಳ ಬಗ್ಗೆ ಎಷ್ಟು ಮಮತೆ ಹೊಂದಿದ್ದಾರೆ ಎಂಬುದು ಚರ್ಚಾಸ್ಪದ ವಿಷಯ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸದನದಲ್ಲಿ ಟೀಕಿಸಿದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗೋವುಗಳನ್ನು ದತ್ತು ಪಡೆಯುವ ಪುಣ್ಯಕೋಟಿ ಯೋಜನೆ ಘೋಷಿಸಲಾಗಿತ್ತು. ಆದರೆ, ಅದರಲ್ಲಿ ಎಷ್ಟು ಮಂದಿ ಬಿಜೆಪಿ ಶಾಸಕರು ಭಾಗಿಯಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸುವಂತೆ ಖರ್ಗೆ ಒತ್ತಾಯಿಸಿದರು.
ಯಾರೂ ಗೋವುಗಳನ್ನು ದತ್ತು ಪಡೆದುಕೊಂಡಿಲ್ಲ. ಅವರ ಗೋವು ಪ್ರೇಮವು ಕೇವಲ ತೋರ್ಪಡಿಕೆ ಹಾಗೂ ರಾಜಕೀಯ ಲಾಭಕ್ಕೆ ಮಾತ್ರ. ನಿಜವಾದ ಪ್ರೀತಿಯ ಅಳತೆ ಕಾರ್ಯಗಳಲ್ಲಿ ಕಂಡುಬರುತ್ತದೆ ಎಂದು ಅವರು ವಾಗ್ದಾಳಿ ನಡೆಸಿದರು.
ಗೋಸಂರಕ್ಷಣೆ ಕುರಿತಂತೆ ಬಿಜೆಪಿ ಮಾಡುತ್ತಿರುವ ರಾಜಕೀಯ ನಾಟಕ ಮತ್ತು ಪ್ರಚೋದನಾತ್ಮಕ ಹೇಳಿಕೆಗಳು ಸಾರ್ವಜನಿಕರಲ್ಲಿ ಮೂಢನಂಬಿಕೆ ಮೂಡಿಸುತ್ತಿವೆ ಎಂದು ಖರ್ಗೆ ಆರೋಪಿಸಿದರು.
- ಕಲಬುರಗಿ ವರದಿ