ಬೀಳವಾರದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸ ಭಕ್ತಿ ಭಾವದಿಂದ ಜರುಗಿತು

ಬೀಳವಾರದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸ ಭಕ್ತಿ ಭಾವದಿಂದ ಜರುಗಿತು
ಯಡ್ರಾಮಿ : 3 ಅ.ತಾಲೂಕಿನ ಬೀಳವಾರ ಗ್ರಾಮದಲ್ಲಿ ಮಹಿಮಾಪುರುಷ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ಜರುಗಿತು. ನೂರಾರು ಭಕ್ತರು ಭಜಂತ್ರಿ ಮೇಳದೊಂದಿಗೆ ದೇವರಿಗೆ ಗಂಗಸ್ಥಾನ ನೆರವೇರಿಸಿ ಪೂಜೆಯಲ್ಲಿ ಭಾಗವಹಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೀರಲಿಂಗೇಶ್ವರರ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು. ಭಕ್ತರು ದೇವರಿಗೆ ಕಾಯಿ, ಕರ್ಪೂರ ಹಾಗೂ ಜಲಾಭಿಷೇಕ ಅರ್ಪಿಸಿ ದೇವರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಶರಣು ಪೂಜಾರಿ ದೊಡ್ಮನಿ, "ಬೀರಲಿಂಗೇಶ್ವರ ಜಾತ್ರಾ ಮಹೋತ್ಸವವು ಜನತೆಗಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದೆ. ಎಲ್ಲಾ ಗ್ರಾಮಸ್ಥರ ಸಹಕಾರದಿಂದ ಈ ಮಹೋತ್ಸವ ಯಶಸ್ವಿಯಾಗಿ ನಡೆದಿದೆ," ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಮಾಜ ಸೇವಕರು ರಾಜೇಂದ್ರ ಪೂಜಾರಿ ದೊಡ್ಮನಿ, ಈರಪ್ಪ ಪೂಜಾರಿ ಹಿರೆ ಕುರುಬ, ಜಟ್ಟಪ್ಪ ಪೂಜಾರಿ ದೊಡ್ಮನಿ ಹಾಗೂ ಜೆಡಿಎಸ್ ಮುಖಂಡರು ಶರಣು ಪೂಜಾರಿ ಅಂಗಡಿ, ಸಂತೋಷ್ ಪೂಜಾರಿ ಮಲ್ಲಬಾದ, ದೇವೇಂದ್ರ ಪೂಜಾರಿ ಮಲ್ಲಬಾದ, ಸಿದ್ದು ಪೂಜಾರಿ ಸರಪಳಿ, ಮರಿಯಪ್ಪ ಪೂಜಾರಿ ಮಲ್ಲಬಾದ, ಅಯ್ಯಪ್ಪ ಪೂಜಾರಿ ದೇವರಹಳ್ಳಿ, ಹೊನ್ನಪ್ಪ ಪೂಜಾರಿ ಮಲ್ಲಬಾದಿ, ಈರಪ್ಪ ಮೋಯಲ್ಲಿ, ನಿಂಗಪ್ಪ ಪೂಜಾರಿ ಕಂಬಳಿ, ಜಟ್ಟಪ್ಪ ಪೂಜಾರಿ ಸರಪಳಿ, ಭೀಮಣ್ಣ ಪೂಜಾರಿ ದೇಸಾಯಿ ಮತ್ತು ಇನ್ನಿತರ ಗಣ್ಯರು ಭಾಗವಹಿಸಿ ಜಾತ್ರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
– ವರದಿ: ಜೆಟ್ಟೆಪ್ಪ ಎಸ್. ಪೂಜಾರಿ