ಸೇಡಂ:ಶಾಂಭವಿ ಮಹಿಳಾ ಸಂಘದಿಂದ ಮಹಿಳಾ ಜಾಗೃತಿ ಕಾರ್ಯಕ್ರಮ*
ಸೇಡಂ:ಶಾಂಭವಿ ಮಹಿಳಾ ಸಂಘದಿಂದ ಮಹಿಳಾ ಜಾಗೃತಿ ಕಾರ್ಯಕ್ರಮ
ಶಾಂಭವಿ ಮಹಿಳಾ ಸಂಘ ಸೇಡಂ, ಆಯೋಜಿಸಿರುವ ಮಹಿಳಾ ಜಾಗೃತಿ ಕಾರ್ಯಕ್ರಮವು ರುಕ್ಮಿಣಿ ಕಾಳಗಿ ಯವರ ಪ್ರಾಯೋಜಕತ್ವದಲ್ಲಿ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಪಲ್ಲವಿ ಪಾಟೀಲ್,ಮಾತೃ ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷರು,ಮಾತನಾಡುತ್ತ,ಇಂದು ಬಹುತೇಕ ತಾಯಂದಿರು ಟಿ.ವಿ.,ಮೊಬೈಲ್ನಲ್ಲಿ ಮುಳುಗಿ ಹೋಗುತ್ತಿರುವುದರಿಂದ ಮಕ್ಕಳು ತಪ್ಪು ದಾರಿತುಳಿಯುತ್ತಿದ್ದಾರೆ. ತಾಯಂದಿರು ಮಕ್ಕಳಿಗಾಗಿ ಒಂದಷ್ಟು ಸಮಯ, ಗಮನ ಹರಿಸಬೇಕಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವಂತಾದರೆ ಮಕ್ಕಳು ಕುಟುಂಬ ಹಾಗೂ ಸಮಾಜದ ಆಸ್ತಿಯಾಗುತ್ತಾರೆ ಎಂದರು. ತಾಲೂಕಾ ಬರಹಗಾರರ ಬಳಗ ಸೇಡಂನ ಅಧ್ಯಕ್ಷ ರಾದ ರುಕ್ಮಿಣಿ ಕಾಳಗಿಯವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಪ್ರತಿಯೊಬ್ಬ ಮಹಿಳೆ ಆರ್ಥಿಕವಾಗಿ ಸಬಲವಾಗಬೇಕು.ಧನಾತ್ಮಕ ಚಿಂತನೆ ಮೈಗೂಡಿಸಿಕೊಂಡು ಬದುಕು ಹಸನಾಗಿಸಿಕೊಳ್ಳಬೇಕೆಂದರು. ಶಾಂಭವಿ ಮಹಿಳಾ ಸಂಘ ದ ಅಧ್ಯಕ್ಷೆ ತಮ್ಮ ಪ್ರಾಸ್ಥಾವಿಕ ಭಾಷಣದಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಸಂಘವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿದೆ. ಕೀಳರಿಮೆಯಿಂದ ಹೊರಬಂದು, ಮಹಿಳೆಯರು ಸಾಮಾಜಿಕ, ,ಆರ್ಥಿಕ ಹಾಗೂ ಸಾಂಸ್ಕ್ರತಿಕವಾಗಿ ಸಬಲರಾಗಿದ್ದಾರೆ. ಸಂಘದ ಅನೇಕ ಮಹಿಳೆಯರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಇತರರಿಗೆ ಆದರ್ಶವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ವಸಂತಾ ದೊಂತಾ ಪ್ರಾರ್ಥಿಸಿದರು.ವಿಜಯಲಕ್ಷ್ಮಿ ಕೆರಳ್ಳಿ ಸ್ವಾಗತಿಸಿದರು.ಕವಿತಾ ಖಜೂರಿ ವಂದಿಸಿದರು. ಡಾ.ಅಮರಮ್ಮ ಪಾಟೀಲ್ ನಿರೂಪಿಸಿದರು.
*ಯುವ ಚೇತನ* ಪ್ರಶಸ್ತಿಗೆ ಭಾಜನರಾದ ಸಾಹಿತಿ ಆರತಿ ಕಡಗಂಚಿ ಹಾಗೂ *ಸಾಧಕ ವಿಭೂಷಣ* ಪ್ರಶಸ್ತಿಗೆ ಭಾಜನರಾದ ಸಾಹಿತಿ ಪ್ರೊ.ಶೋಭಾದೇವಿ ಚೆಕ್ಕಿ ಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಗದೇವಿ ಪರಗಿ,ಚಂದಮ್ಮ ಮೇಳಕುಂದಿ, ಮಾಧವಿ ಐನಾಪೂರ,ಈರಮ್ಮ ಹೆಡ್ಡಳ್ಳಿ,ಶಾರದಾಬಾಯಿ ಬೊಮ್ನಳ್ಳಿ,ಶಾಂತಾ,ಸುಮಾ ಐನಾಪೂರ,ರೂಪಾ ಬಂಗಾರ,ಜಗದೇವಿ,ಸಂಗಮ್ಮ ಕೊರಳ್ಳಿ,ಮಲ್ಲಮ್ಮ ಪತ್ರಿ, ಶಾಂತಲಾ ಸಜ್ಜನಶೆಟ್ಟಿ ಉಪಸ್ಥಿತರಿದ್ದರು.