ರಾಷ್ಟ್ರಕೂಟರ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪಿಸಿ: ಮಹಿಪಾಲರೆಡ್ಡಿ
ರಾಷ್ಟ್ರಕೂಟರ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪಿಸಿ: ಮಹಿಪಾಲರೆಡ್ಡಿ
ಕಲಬುರಗಿ, ಫೆ.೩- ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ `ಕವಿರಾಜಮಾರ್ಗ’ ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಾರ್ಗ ನೀಡಿದ ಕನ್ನಡದ ಪ್ರಖ್ಯಾತ ದೊರೆ ನೃಪತುಂಗ ಅಮೋಘವರ್ಷ ಆಡಳಿತದ `ರಾಷ್ಟçಕೂಟ’ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸುವಂತೆ ಹಿರಿಯ ಸಾಹಿತಿ, ಪತ್ರಕರ್ತ, ನಟ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಸೇಡಂ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರಕೂಟ ಸಾಮ್ರಾಜ್ಯದಲ್ಲಿ ಕನ್ನಡಕ್ಕೆ ಮೇರು ಕೀರ್ತಿ ತಂದಿರುವ ಶ್ರೀವಿಜಯನ ಕವಿರಾಜಮಾರ್ಗದ ಮೂಲಕ ಕನ್ನಡ ಸಾಹಿತ್ಯ ಮತ್ತು ಇತಿಹಾಸ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಎನಿಸಿದ್ದು, ಕನ್ನಡವನ್ನು ವಿಶ್ವಮಾನ್ಯತೆ ದರ್ಜೆಗೇರಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರಕೂಟ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಕನ್ನಡದ ಸಾರಸ್ವತಲೋಕದ ಕಾರ್ಯಗಳಿಗೆ ಇಂಬು ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಕಾವ್ಯ ಕ್ಷೇತ್ರಕ್ಕೊಂದು ರಾಜಮಾರ್ಗವನ್ನು ಹಾಕಿಕೊಟ್ಟ ರಾಷ್ಟ್ರಕೂಟ ಹೆಸರಿನಲ್ಲಿ ಸರಕಾರವು ಸಂಸ್ಥೆಯೊAದನ್ನು ಸ್ಥಾಪಿಸಿ, ಆ ಮೂಲಕ ಕಾವ್ಯ ಕ್ಷೇತ್ರವನ್ನು ಹಾಗೂ ಇತಿಹಾಸದ ಇನ್ನಷ್ಟು ಹೊಳಹುಗಳನ್ನು ಒಳಗೊಂಡAತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಬಹುದು. ಕನ್ನಡ ಸಾಹಿತ್ಯದ ಮೊದಲ ಲಾಕ್ಷಣಿಕ ಗ್ರಂಥ ಎಂಬ ಕಾರಣಕ್ಕಾಗಿ ಸಾಹಿತ್ಯ ಮತ್ತು ಇತಿಹಾಸ ಕ್ಷೇತ್ರದಲ್ಲಿ ರಾಷ್ಟçಕೂಟ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕು ಹಾಗೂ ರಾಷ್ಟ್ರಕೂಟರ ಆಡಳಿತದಲ್ಲಿ ರಾಜಧಾನಿಯಾಗಿದ್ದ ಮಳಖೇಡ (ಮಾನ್ಯಖೇಟ)ವನ್ನು ವಿಶ್ವಮಾನ್ಯತೆಯ ಮಟ್ಟಕ್ಕೆ ಅಭಿವೃದ್ಧಿಪಡಿಸಬೇಕು ಎಂದು ಅವರು ಕೋರಿದ್ದಾರೆ
.
