ಶ್ರೀ ಜೆ.ಪಿ. ನಾರಾಯಣಸ್ವಾಮಿ ಅವರ 74ನೇ ಹುಟ್ಟುಹಬ್ಬ ಆಚರಣೆ | ದಿವ್ಯಾಂಗ ಚೇತನ ಮಕ್ಕಳೊಂದಿಗೆ ಸಂಭ್ರಮ – ₹11.80 ಲಕ್ಷ ನೆರವು

ಬೆಂಗಳೂರು:ಜೆ ಪಿ ನಾರಾಯಣಸ್ವಾಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಷ್ಠಾನದ ಕೇಂದ್ರ ಸಮಿತಿಯ ವತಿಯಿಂದ ಬೆಂಗಳೂರಿನ ಕುಮಾರ ಪಾರ್ಕ್‌ನಲ್ಲಿರುವ ಮಾತೃಶ್ರೀ ಮನೋವಿಕಾಸ ಕೇಂದ್ರ (ರಿ.), ದಿವ್ಯಾಂಗ ಚೇತನ ಮಕ್ಕಳ ವಸತಿಯುತ ವಿಶೇಷ ಶಾಲೆಯಲ್ಲಿ ಶ್ರೀ ಜೆ.ಪಿ. ನಾರಾಯಣಸ್ವಾಮಿ ಅವರ 74ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶೇಷಾದ್ರಿಪುರಂನಲ್ಲಿರುವ ಮಾತೃಶ್ರೀ ಮನೋವಿಕಾಸ ಕೇಂದ್ರದಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದಲ್ಲಿ ದಿವ್ಯಾಂಗ ಚೇತನ ಮಕ್ಕಳೊಂದಿಗೆ ಕೇಕ್ ಕಟಿಂಗ್ ಮಾಡಿಸಿ ಸಿಹಿ ಹಂಚಲಾಯಿತು.

ಇದೇ ಸಂದರ್ಭದಲ್ಲಿ ವಸತಿಯಲ್ಲಿರುವ ಮಕ್ಕಳಿಗೆ ಒಂದು ವರ್ಷಕ್ಕೆ ಅಗತ್ಯವಿರುವ ಊಟ ಹಾಗೂ ಬಟ್ಟೆಗಳ ವ್ಯವಸ್ಥೆಗೆ ರೂ. 11,80,100/- ಮೊತ್ತದ ಚೆಕ್ ಅನ್ನು ಪ್ರತಿಷ್ಠಾನದ ವತಿಯಿಂದ ವಿತರಿಸಲಾಯಿತು.

ಇದೆ ಸಂದರ್ಭದಲ್ಲಿ ಮಾತನಾಡಿದ ಮನೋ ವಿಕಾಸ ಕೇಂದ್ರದ ಅಧ್ಯಕ್ಷರಾದ ಬೆಟ್ಟೆ ಗೌಡ್ರು ಈ ನೆರವು ಮಕ್ಕಳ ಸಮಗ್ರ ಆರೈಕೆ ಹಾಗೂ ಸೌಲಭ್ಯಗಳಿಗೆ ಮಹತ್ವದ ಸಹಕಾರವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಜೆ.ಪಿ. ಸುಧಾಕರ್, ಮಹಾಪೋಷಕರಾದ ಲತಾ ಸುಧಾಕರ,ಉಪಾಧ್ಯಕ್ಷರಾದ ಮಂಜಪ್ಪ ಜಿ, ಕಾರ್ಯದರ್ಶಿಯಾದ ಕುಸುಮ ಅಜಯ್‌, ಟ್ರಸ್ಟಿಗಳಾದ ಎಂ ಆರ್‌ ಪೂರ್ಣೇಶ್‌, ಜೆ ಎಸ್. ಭವಿಷ್ ಹಾಗೂ ಮನೋವಿಕಾಸ ಕೇಂದ್ರದ ಕಾರ್ಯದರ್ಶಿಯಾದ ಬಸವರಾಜ್ ಎಸ್, ಮೇಲ್ವಿಚಾರಕರಾದ ಸ್ವರ್ಣ ಉಪಸ್ಥಿತರಿದ್ದರು.

ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಸೇವೆ, ಸಹಾನುಭೂತಿ ಮತ್ತು ಮಾನವೀಯತೆಯ ಸಂದೇಶವನ್ನು ನೀಡಿದರು.

ವರದಿ ಕಾಶಿಬಾಯಿ ಸಿ ಗುತ್ತೇದಾರ್