ಚರಲಿಂಗ ಮಹಾಸ್ವಾಮಿಗಳಿಂದ ಸಂಸ್ಕಾರ ಸದ್ಭಾವನಾ ಪಾದಯಾತ್ರೆ

ಚರಲಿಂಗ ಮಹಾಸ್ವಾಮಿಗಳಿಂದ ಸಂಸ್ಕಾರ ಸದ್ಭಾವನಾ ಪಾದಯಾತ್ರೆ

ಸ್ವಾಮಿಗಳ ನಡೆ ಭಕ್ತರ ಮನೆಕಡೆ” — ವಿದ್ಯಾನಗರದಲ್ಲಿ ಸಂಸ್ಕಾರ ಸದ್ಭಾವನಾ ಪಾದಯಾತ್ರೆ

ಕಲಬುರಗಿ, ಆ.3:ವಿದ್ಯಾನಗರ ವೆಲ್‌ಫೇರ ಸೊಸೈಟಿಯ ಆಶ್ರಯದಲ್ಲಿ, ಗದ್ದುಗೆ ಮಠದ ಪೂಜ್ಯ ಮ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳ ನೇತ್ರತ್ವದಲ್ಲಿ “ಸ್ವಾಮಿಗಳ ನಡೆ ಭಕ್ತರ ಮನೆಕಡೆ” ಎಂಬ ಸಂಸ್ಕಾರ ಸದ್ಭಾವನಾ ಪಾದಯಾತ್ರೆಯು ಆ.4ರಂದು ಆರಂಭವಾಗುತ್ತಿದೆ.

ಈ ಪವಿತ್ರ 2ನೇ ಶ್ರಾವಣ ಸೋಮವಾರದಿಂದ ಪ್ರತಿದಿನ ಬೆಳಿಗ್ಗೆ 7ರಿಂದ 8 ಗಂಟೆಯವರೆಗೆ ವಿದ್ಯಾನಗರ ಕಾಲೋನಿಯ ಭಕ್ತರ ಮನೆಗಳಿಗೆ ಸ್ವಾಮಿಜಿಯವರು ಪಾದಯಾತ್ರೆ ಮೂಲಕ ಭೇಟಿ ನೀಡಿ, ರುದ್ರಾಕ್ಷಿ ಧಾರಣ ಕಾರ್ಯಕ್ರಮ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪೂಜ್ಯರ ಅಮೃತ ಹಸ್ತದಿಂದ ರುದ್ರಾಕ್ಷಿ ಸ್ವೀಕರಿಸಲು ಭಕ್ತರಿಗೆ ಅವಕಾಶ ಇರುತ್ತದೆ.

ಈ ವಿಭಿನ್ನ ಧಾರ್ಮಿಕ ಕಾರ್ಯಕ್ರಮದಲ್ಲಿ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಉಪಾಧ್ಯಕ್ಷ ಉಮೇಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ ಮತ್ತು ತರುಣ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಳೆದ 19 ವರ್ಷಗಳಿಂದ ನಡೆಯುತ್ತಿದ್ದ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಈ ವರ್ಷ ಪ್ರಥಮ ಬಾರಿಗೆ ಹಾನಗಲ್ ಶಿವಕುಮಾರ ಮಹಾಸ್ವಾಮಿಗಳ ಪುರಾಣ ಪ್ರವಚನಕ್ಕೆ ಚಾಲನೆ ಸಿಗಲಿದೆ.

ಸೋಸೈಟಿಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ನಡೆಯುತ್ತಿರುವ ಈ ವಿಶಿಷ್ಟ ಧಾರ್ಮಿಕ ಪಾದಯಾತ್ರೆಯಲ್ಲಿ ಭಕ್ತರು ತಮ್ಮ ಮನೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕೆಂದು ಕಾರ್ಯದರ್ಶಿ ಶಿವರಾಜ ಅಂಡಗಿಯವರು ಮನವಿ ಮಾಡಿದ್ದಾರೆ.