ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸಿದ ಚರಬಸವೇಶ್ವರು

ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸಿದ ಚರಬಸವೇಶ್ವರು

ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸಿದ ಚರಬಸವೇಶ್ವರು

ಕಲಬುರಗಿ : ಮಹಾತ್ಮರಲ್ಲಿ ಮಹಾತ್ಮನೀತ ಚರಬಸವೇಶ್ವರ ಪೂಜ್ಯ ಬಸವಯ್ಯ ಶರಣರು ಹುಟ್ಟುತ್ತಲೇ ಯಾರು ಶರಣರಾಗುವುದಿಲ್ಲ, ಅನುಭಾವಿಗಳಾಗುವುದಿಲ್ಲ, ಅವಧೂತರಾಗುವುದಿಲ್ಲ, ಅವರ ನಡವಳಿಕೆ, ಸುತ್ತಲಿನ ಸಮಾಜಕ್ಕೆ ಅವರು ನೀಡುವ ಕಾಣಿಕೆ, ಸಮಾಜದ ಜನರನ್ನು ತಮ್ಮೊಡೆಗೆ ತಿರುಗಿಸಿಕೊಂಡು ಅವರನ್ನು ಸತ್ಕಾರಕ್ಕೆ ಬಳಸಿಕೊಳ್ಳುವ ರೀತಿ ಜ್ಯಾತ್ಯಾತಿತರಾಗಿ, ಧರ್ಮಾತೀತರಾಗಿ ಬಡವ-ಬಲ್ಲಿದ ಎನ್ನದೆ ಎಲ್ಲರ ಕಲ್ಯಾಣಕ್ಕಾಗಿ ಚಿಂತಿಸುವವನೇ ಸಂತನಾಗುತ್ತಾನೆ, ಮಹಾತ್ಮಾನಾಗುತ್ತಾನೆ. ಅಂತಹ ಸಂತರಲ್ಲಿ ಇತ ಸಂತ, ಅವಧೂತರಲ್ಲಿ ಅವಧೂತ, ಮಹಾತ್ಮಾರಲ್ಲಿ ಮಹಾತ್ಮಾನೀತ ಮಹಾತ್ಮಾ ಬಸವೇಶ್ವರ.

ಬಸವಕಲ್ಯಾಣದ ಬಸವಣ್ಣನ ಹಾಗು ಕಲಬುರಗಿ ಶರಣಬಸವೇಶ್ವರರ ಪ್ರಭಾವಕ್ಕೆ ಒಳಗಾಗಿ ಶ್ರೀ ಚರಬಸವ ಶರಣರು ತಮ್ಮನ್ನು ಕಾಯಕ್ಕೆ ಹಾಗು ದಾಸೋಹಕ್ಕೆ ಅರ್ಪಿಸಿಕೊಂಡು ಶರಣರು ಸಂತರು ಆದ ಚರಬಸವೇಶ್ವರರು. ಎನ್ನುತ ನಿಮ್ಮ ವಿದ್ಯಾನಗರದಲ್ಲಿ ವಿದ್ಯಾವಂತರು ಕೂಡಿ ಚರಬಸವೇಶ್ವರ ಪುರಾಣ ಪ್ರವಚನ ಹಚ್ಚಿದ್ದು ಬಹಳ ಸಂತೋಷ ತಾವೆಲ್ಲರೂ ನಮ್ಮ ಶರಣರು ಹೇಳಿದಂತೆ ನಮ್ಮ ಜೀವನದಲ್ಲಿ ಧಾನ-ಧರ್ಮ ಬೆಳೆಸಿಕೊಳ್ಳಿ ಎನ್ನುತ ಪಾಲಕರು ಮಕ್ಕಳಿಗೆ ಅಧ್ಯಾತ್ಮಿಕ ಹಾಗು ನಮ್ಮ ಸಂಸ್ಕೃತಿ ಹೇಳಿಕೊಡಬೇಕೆಂದು ಶಹಾಪೂರಿನ ಈಗಿನ ಚರಬಸವೇಶ್ವರ ಶರಣ ಸಂಸ್ಥಾನದ ಪೀಠಾಧಿಕಾರಿಗಳಾದ ಪೂಜ್ಯ ಬಸವಯ್ಯ ಶರಣರಿಗೆ ಭಕ್ತರಿಗೆ ಆಶಿರ್ವಚನ ನೀಡಿದರು. 

ವಿದ್ಯಾನಗರ ವೆಲ್‌ಫೇರ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಪದಾಧಿಕಾರಿಗಳಾದ ಬಸವಂತರಾವ ಜಾಬಶೆಟ್ಟಿ, ಗುರುಲಿಂಗಯ್ಯ ಮಠಪತಿ, ವಿಶ್ವನಾಥ ರಟಕಲ್, ಸುಭಾಷ ಮಂಠಾಳೆ, ಶಾಂತಯ್ಯ ಬೀದಿಮನಿ, ನಾಗರಾಜ ಹೆಬ್ಬಾಳ, ಆದಪ್ಪ ಸಿಕೇದ ಹಾಗು ಇತರರು ಉಪಸ್ಥಿತರಿದ್ದರು.