ಜಿಲ್ಲೆ ಯಲ್ಲಿ ಭೌದ ಧಮ೯ ಪ್ರಚಾರ ಕಾಯ೯ವಾಗಬೇಕು..
ಜಿಲ್ಲೆ ಯಲ್ಲಿ ಭೌದ ಧಮ೯ ಪ್ರಚಾರ ಕಾಯ೯ವಾಗಬೇಕು..
ಆಳಂದ :
ಜಿಲ್ಲೆ ಯಲ್ಲಿ ಭೌದ ಧಮ೯ ಪ್ರಚಾರ ಕಾರ್ಯ ಹೆಚ್ಚಾಗಿ ನಡೆಯಬೇಕೆಂದು ಗುಲಬಗಾ೯ ವಿಶ್ವವಿದ್ಯಾಲಯದ ಸಂಗಿತ ಪ್ರಧ್ಯಾಪಕ ಸಿದ್ದಾರ್ಥ್ ಚಿಮಾಇದಲಾಯಿ ಅವರು ಹೇಳಿದರು.
ಧಂಗಾಪುರ ದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸೇವಾ ಸಂಘ ಆಶ್ರಯದಲ್ಲಿ ತೇಲ್ಕರ್ ಪರಿವಾರದೊಂದಿಗೆ ನಡೆದ ಮೂರನೇ ನಮ್ಮ ದೀಪೋತ್ಸವ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ನೆರವೇರಿಸಿ ಮಾತನಾಡಿದವರು ಜಿಲ್ಲೆಯಲ್ಲಿ ವಿಶಾಲವಾದ ಬುದ್ಧ ವಿಹಾರ ನಿರ್ಮಾಣಗೊಂಡು ಕೆಲವು ವರ್ಷ ಕಳೆದರೂ ಕೂಡ ಜಿಲ್ಲೆಯಲ್ಲಿ ಬೌದ್ಧ ಧರ್ಮ ಕುರಿತು ಪ್ರಚಾರ ಕಾರ್ಯ ನಡೆಯಬೇಕಾಗಿತ್ತು. ಆದರೆ ಆ ಕಾರ್ಯ ಆಗ್ತಾ ಇಲ್ಲ . ಬರಿ ತೋರಣಿಗೆ ಮಾತ್ರ ಬೌದ್ಧ ಧರ್ಮದ ಹೆಸರು ಹೇಳುವುದು ಬೇಡ ಎಲ್ಲಾ ಧರ್ಮಗಳನ್ನು ಧಿಕ್ಕರಿಸಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ವೀಕರಿಸಿದ ಈ ಧರ್ಮ ಹೆಚ್ಚು ಪ್ರಚಾರವಾಗಬೇಕು ನಗರ ಗ್ರಾಮೀಣ ಭಾಗಗಳನ್ನು ನೋಡಿದಾಗ ದಮ್ಮ ದೀಪೋತ್ಸವ ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿದೆ ಇದಕ್ಕೆ ಇನ್ನೂ ಹೆಚ್ಚು ಒತ್ತುಕೊಟ್ಟು ಧರ್ಮ ಪ್ರಚಾರ ಕಾರ್ಯ ನಡೆಯಬೇಕು. ಧಂಗಾಪುರ ದಲ್ಲಿ ತೇಲ್ಕರ್ ಪರಿವಾರದೊಂದಿಗೆ ನಡೆಯುತ್ತಿರುವ ದಮ್ಮ ದೀಪುತ್ಸವ ಕಾರ್ಯಕ್ರಮ ನೋಡಿದರೆ ಈ ಗ್ರಾಮವು ಜಿಲ್ಲೆಯಲ್ಲಿ ಮಾದರಿ ಗ್ರಾಮ ವಾದರೂ ತಪ್ಪಾಗಲಾರದು ಇಲ್ಲಿಯ ಜನರ ವಿಚಾರ ನೋಡಿದರೆ ಬುದ್ಧ ಬಸವ ಡಾ. ಅಂಬೇಡ್ಕರ್ ತತ್ವ ವಾದಿಗಳು ಎಂದು ಹೇಳಬಹುದು.ಚಿಕ್ಕ ಗ್ರಾಮವದರು ಡಾ: ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಬುದ್ಧನ ವಿಚಾರಗಳು ಸಮಾಜಕ್ಕೆ ಬಿತ್ತರಿಸುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ದೀಪುತ್ಸವದ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಿದ ಡಾ:ಬಿ.ಆರ್. ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ತೇಲ್ಕರ್ ಸಭೆಯ ಅಧ್ಯಕ್ಷತೆ ಮಾತನಾಡಿದವರು ನಮ್ಮ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಮೂರು ತಿಂಗಳು ಕಳೆದಿದೆ ನಮ್ಮ ಯುವಕರಲ್ಲಿ ಪರಿಜ್ಞಾನ ಮೂಡಿದೆ ದುಷ್ಟಚೇಟಗಳಿಂದ ದೂರ ಸರಿಯುತ್ತಿದ್ದಾರೆ. ನಮ್ಮ ಸಮಾಜ ಪರಿವರ್ತನೆ ಹೊಂದುತ್ತಿದೆ ಯಾಕೆಂದರೆ ಎರಡು ಕುಟುಂಬಗಳ ಮಧ್ಯಪಾನ ಬಿಟ್ಟು ಸುಖಕರ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಶಿವಲಿಂಗ.ತೇಲ್ಕರ್.ವಿಶಾಲಾ.ತೇಲ್ಕರ್. ಹಾಗು ಪರಿವಾರದವರು ಸೇರಿದಂತೆ ಗ್ರಾಮದ ಮುಖಂಡರಾದ ಶರಣಬಸಪ್ಪ ಕಾಂಬಳೆ. ಕೃಷ್ಣ ಮೇಲಕೆರಿ. ವಿಠಲ ಪಟ್ಟಣ. ಅಮೃತ.ಮೇಲಕೆರಿ. ಕೃಷ್ಣ ಕಾಂಬಳೆ. ಕಾಶಿನಾಥ್ ವಾಗ್ಮರೆ. ಶರಣಬಸವ ಕೋರೆ. ಶಿವಕುಮಾರ್ ಮೇಲಕೆರಿ. ಪ್ರಕಾಶ್ ಕಾಂಬಳೆ. ಸೇರಿದಂತೆ ಮಹಿಳೆಯರು ತೇಲ್ಕರ್ ಮನೆಯಿಂದ ದಮ್ಮ ದೀಪೋತ್ಸವ ಡಾಕ್ಟರ್ ಅಂಬೇಡ್ಕರ್ ಪ್ರತಿಮೆ ಅವರಿಗೆ ಮೇಣದ ಬತ್ತಿಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ಕಾರ್ಯಕ್ರಮ ದಲ್ಲಿ ಸಿದ್ದಾರ್ಥ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು ನಂತರ ಎಲ್ಲರಿಗೂ ಊಟದ ವ್ಯವಸ್ಥೆ ಉಡಿವ ನೀರಿನ ವ್ಯವಸ್ಥೆ ಅರ್ಪಿಸಲಾಗಿತ್ತು.