ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ನಾಳೆಯಿಂದ ಆರಂಭ

ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ನಾಳೆಯಿಂದ ಆರಂಭ

ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ನಾಳೆಯಿಂದ ಆರಂಭ

ಕಲಬುರಗಿ: ತಾಲೂಕಿನ ಹತಗುಂದಾ ಗ್ರಾಮದಲ್ಲಿ ಪ್ರತಿ 3 ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ಜೂನ 21 ರಿಂದ 23 ರವರೆಗೆ ನಡೆಯಲಿದೆ. ಜೂನ 21 ರಂದು ಸಾಯಂಕಾಲ 9 ಗಂಟೆಗೆ ಗುರುನಾಥ ಸುತಾರ ಮನೆಯಿಂದ ಭವ್ಯ ಮೆರವಣಿಗೆ‌ ಮುಖಾಂತರ ಮಹಾಲಕ್ಷ್ಮೀ ಮಂದಿರಕ್ಕೆ ಬರುವುದು.ಜೂನ 22 ರವಿವಾರ ಗ್ರಾಮಸ್ಥರಿಂದ ಮಂದಿರದಲ್ಲಿ ದೇವಿ ದರ್ಶನ ಮತ್ತು ಪೂಜೆ ಹಾಗೂ ಗೀಗೀ ಪದಗಳು ಮತ್ತು ವಿವಿಧ ಕಾರ್ಯಕ್ರಮಗಳು ಜರುಗುವವು. 23 ರಂದು ಸೋಮವಾರ ಮದ್ಯಾಹ್ನ 12.30 ನಿಮಿಷಕ್ಕೆ ನಾಡಿನ ಪ್ರಸಿದ್ಧ ಪೈಲ್ವಾನರಿಂದ ಜಂಗಿ ಕುಸ್ತಿ ನಡೆಸಲಾಗುವುದು.ಮತ್ತು ಸಾಯಂಕಾಲ ನಾಲ್ಕು ಗಂಟೆಗೆ ದೇವಿಯ ಮೂರ್ತಿ ಗ್ರಾಮಸ್ಥರ ಸಮ್ಮುಖದಲ್ಲಿ ಮೆರವಣಿಗೆಯ ಮೂಖಾಂತರ ಊರ ಸೀಮೆಯವರೆಗೆ ತಲುಪಿಸಲಾಗುವುದು ಎಂದು‌ ಬೀರಪ್ಪ ಎಸ್‌.ನಾಯ್ಕೋಡಿ, ರಾಜಕುಮಾರ ಬಸವರಾಜ ಹಂಗರಗಿ ಅವರು ಪ್ರತಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.