ಪ್ರಣವಾನಂದ ಶ್ರೀಗಳ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಗಂಗಾವತಿಗೆ ಈಡಿಗರ ನಾಯಕ ದಂಡು

ಪ್ರಣವಾನಂದ ಶ್ರೀಗಳ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಗಂಗಾವತಿಗೆ ಈಡಿಗರ ನಾಯಕ ದಂಡು

ಪ್ರಣವಾನಂದ ಶ್ರೀಗಳ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಗಂಗಾವತಿಗೆ ಈಡಿಗರ ನಾಯಕ ದಂಡು

ಕಲಬುರಗಿ : ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಕರದಾಳ ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಅವರು ಆರಂಭಿಸಿದ 700 ಕೀ ಮೀ.ಪಾದಯಾತ್ರೆ ಜ. 21ರಂದು ಗಂಗಾವತಿ ಪಟ್ಟಣಕ್ಕೆ ಪ್ರವೇಶ ಮಾಡಲಿದ್ದು ಪಾದಯಾತ್ರೆ ಹಾಗೂ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲು ಕಲಬುರಗಿ ಜಿಲ್ಲಾ ಈಡಿಗ ನಾಯಕರ ತಂಡ ತೆರಳಲಿದೆ. 

    ಜ. 21ರಂದು ಗಂಗಾವತಿ ಪಟ್ಟಣದಲ್ಲಿ ಸಾಯಂಕಾಲ 5 ಗಂಟೆಗೆ ಈಡಿಗ ಮುಂದಾಳು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್.ಆರ್ ಶ್ರೀನಾಥ್ ಧಣಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಕಲಬುರಗಿಯ ಈಡಿಗ ನಾಯಕರು, ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಪದಾಧಿಕಾರಿಗಳು, ಕರದಾಳ ಶಕ್ತಿಪೀಠದ ಟ್ರಸ್ಟಿಗಳು ಭಾಗವಹಿಸಲು ತೆರಳುತ್ತಿದ್ದಾರೆ.

   ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಟ್ರಸ್ಟಿ ಸದಸ್ಯರಾದ ಮಹಾದೇವ ಗುತ್ತೇದಾರ್, ವೆಂಕಟೇಶ ಎಂ ಕಡೇಚೂರ್, ಯಾದಗಿರಿಯ ವೆಂಕಟೇಶ ಗುಂಡಾನೂರು, ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್ ಉಪಾಧ್ಯಕ್ಷರಾದ ಕುಪೇಂದ್ರ ಗುತ್ತೇದಾರ್ ನಾಗೂರ, ಅಶೋಕ್ ಗುತ್ತೇದಾರ್ ಬಡದಾಳ್, ರಾಜೇಶ್ ದತ್ತು ಗುತ್ತೇದಾರ್, ಈಡಿಗ ಮುಖಂಡರಾದ ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್ ನಾರಾಯಣ ಗುತ್ತೇದಾರ್ ಬೆಳಗಾವಿ, ಇ.ತಿಮ್ಮಪ್ಪ ಗಂಗಾವತಿ, ಆನಂದ ಬಳೂರ್ಗಿ , ಸಂತೋಷ್ ಚೌಧರಿ, ಬಿಲ್ಲವ ಮುಖಂಡರಾದ ಪ್ರವೀಣ್ ಜತ್ತನ್, ಡಾ. ಸದಾನಂದ ಪೆರ್ಲ ಮತ್ತಿತರರು ಪಾದಯಾತ್ರೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ. 

   ಗಂಗಾವತಿ ಪಟ್ಟಣದಲ್ಲಿ ಜ.21 ರಂದು ಸಾಯಂಕಾಲ 5 ಗಂಟೆಗೆ ನಡೆಯುವ ಬಹಿರಂಗ ಸಭೆಯಲ್ಲಿ ಸಮಾಜದ ಮುಖಂಡರು ಹಾಗೂ ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಲಿರುವರು. ಪ್ರಣವಾನಂದ ಶ್ರೀಗಳ ಜೊತೆಗೆ ಹಿಂದುಳಿದ ವರ್ಗಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ