ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ : ಸಿಡಿಪಿಒ ಕಚೇರಿಗೆ ಮುತ್ತಿಗೆ :..

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ : ಸಿಡಿಪಿಒ ಕಚೇರಿಗೆ ಮುತ್ತಿಗೆ :..
ಶಹಾಬಾದ : - ಕರ್ತವ್ಯದಲ್ಲಿ ಲೋಪ ಮಾಡಿರುವ ಶಹಾಬಾದ ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಿಡಿಪಿಒ ಕಛೇರಿ ಮುತ್ತಿಗೆ ಹಾಕಿ ಸಾಂಕೇತಿಕ ಧರಣಿ ಮಾಡಲಾಗುವದು ಎಂದು ದಸಂಸ ರಾಜ್ಯ ಸಂ.ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಹೇಳಿದರು.
ಅ. 28 ರಂದು ಗುರುವಾರ ಬಸವೇಶ್ವರ ನಗರದಲ್ಲಿರುವ ಸಿಡಿಪಿಒ ಕಚೇರಿಗೆ ಮುತ್ತಿಗೆ ಹಾಕಿ ಸಿಡಿಪಿಒ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಲಾಗುವುದು ಎಂದರು
2021 22 ರಲ್ಲಿ 5 ಅಂಗನವಾಡಿ ಸಹಾಯಕರ ಅರ್ಜಿಗಳನ್ನು ಕರೆಯಲಾಗಿತ್ತು, ಅರ್ಜಿಗಳನ್ನು ಸ್ವೀಕರಿಸಿ ಅವರನ್ನು ಅಪಾಂಟ್ ಅಥವಾ ರಿಜೇಕ್ಟ ಮಾಡದೆ 3-4 ವರ್ಷ ಅರ್ಜಿಗಳನ್ನ ಹಾಗೆ ಉಳಿಸಿಕೊಂಡಿದ್ದಾರೆ, ಈಗಾಗಲೇ ಅರ್ಜಿದಾರರ ಪ್ರಕ್ರೀಯೆ ಯಲ್ಲಿ ಪ್ರಮಾಣ ಪತ್ರಗಳನ್ನು, ಅಭ್ಯರ್ಥಿಗಳ ಫೋಟೋ, ಜಿಪಿಎಸ ನ್ನು ನಗರ ಸಭೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಪೂರ್ಣ ಗೊಳಿಸಿದ್ದಾರೆ ಆದರೆ ಸುಮಾರು ವರ್ಷಗಳಿಂದ ಕಾರ್ಯನಿರ್ಸಿತ್ತಿರುವ ಮೇಲ್ವಿಚಾರಕಿ ಮೀನಾಕ್ಷಿ ಹಾಗೂ ಸಿಡಿಪಿಒ ಕುತಂತ್ರದಿಂದಾಗಿ ಹೊಸ ಆಯ್ಕೆ ಆಗಿರುವುದಿಲ್ಲ, ಅಂಗನವಾಡಿ ಮಕ್ಕಳಿಗೆ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಅಪರಾಪ್ತ ಬಾಲಕಿಯರಿಗೆ ನೀಡುತ್ತಿರುವ ಮೊಟ್ಟೆ ಹಾಗೂ ಆಹಾರ ಧಾನ್ಯಗಳು ನೀಡುವಲ್ಲಿ ವಂಚಿಸಿದ್ದಾರೆ ಎಂದರು.
ಸಿಡಿಪಿಒ ಅವರನ್ನು ಸಸ್ಪೆಂಡ್ ಮಾಡುವವರೆಗೂ ಹೋರಾಟ ನಿಲ್ಲುವುದಿಲ್ಲ ಡಿ.ಡಿ ಮತ್ತು ಡಿ.ಸಿ ಅವರು ಬರೆಯುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು
ಪತ್ರಿಕಾ ಗೋಷ್ಠಿಯಲ್ಲಿ ಮಲ್ಲಣ್ಣ ಮಸ್ಕಿ, ಸತೀಶ್ ಕೋಬಾಳಕರ, ನರಸಿಂಹಲು ರೈಚೂರ್ಕರ, ಮಲ್ಲಣ್ಣ ಮರ್ತೂರ, ಚಂದ್ರಕಾಂತ್ ಪಾಟೀಲ, ಸುಭಾಷ್ ಸಾಕ್ರೆ, ಮೋಹನ ಹಳ್ಳಿ, ವೆಂಕಟೇಶ್ ಕುಶಾಲೆ, ಶಿವಶಾಲ್ ಪಟ್ಟನ್ಕರ, ಮನೋಹರ್ ಕೋಳೂರು, ಮಲ್ಲಿಕಾರ್ಜುನ್ ಹಳ್ಳಿ ಇದ್ದರು.