ಗಂಗನಪಳ್ಳಿ ಅವರಿಗೆ ಬೀದರಕ್ಕೆ ಸೀಮಿತಗೊಳಿಸದಿರಿ- ಡಾ.ಗವಿಸಿದ್ಧಪ್ಪ ಪಾಟೀಲ

ಗಂಗನಪಳ್ಳಿ ಅವರಿಗೆ ಬೀದರಕ್ಕೆ ಸೀಮಿತಗೊಳಿಸದಿರಿ- ಡಾ.ಗವಿಸಿದ್ಧಪ್ಪ ಪಾಟೀಲ

ಗಂಗನಪಳ್ಳಿ ಅವರಿಗೆ ಬೀದರಕ್ಕೆ ಸೀಮಿತಗೊಳಿಸದಿರಿ- ಡಾ.ಗವಿಸಿದ್ಧಪ್ಪ ಪಾಟೀಲ

       ಬೀದರ: ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿ ದವರು.ಅವರ ಬದುಕು- ಬರಹ ಕೂಡಾ ಒಂದೇ ಆಗಿದೆ.ಅವರ ಕಾವ್ಯದಲ್ಲಿ ನಾಡು,ನುಡಿ,ಭಾಷೆ,ಪ್ರಾದೇಶಿಕ ಭಾಷೆ,ಕನ್ನಡ ಪದಗಳ ಬಳಸುವ ಕ್ರಮದಿಂದ ನಾಡಿಗೆ ಸಲ್ಲುವ ವ್ಯಕ್ತಿತ್ವ. ಹೀಗಾಗಿ ಬೀದರಕ್ಕೆ ಮಾತ್ರ ಸೀಮಿತಗೊಳಿ ಸದೇ ವಿಶಾಲ ದೃಷ್ಟಿಯಿಂದ ನೋಡಲು ಹಿರಿಯ ಸಾಹಿತಿ, ಡಾ.ಗವಿಸಿದ್ಧಪ್ಪ ಪಾಟೀಲ ನುಡಿದರು.

  ‌‌‌‌‌‌ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಗಂಗನಪಳ್ಳಿ ಪರಿವಾರದವರು ಏರ್ಪಡಿಸಿದ ಗಂಗನಪಳ್ಳಿ ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಅವರಿಗೆ ಸಲ್ಲಬೇಕಾದ ಗೌರವ ಪುರಸ್ಕಾರ ಮೀರಿ ಬರೆದ ಕವಿ,ಸಾಹಿತಿ ಎಂದರು.

     ಬೀದರ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಪರಮೇಶ್ವರ ನಾಯಕ ಉದ್ಘಾಟಿಸಿ ರಾಮರಾವ್ ಮತ್ತು ಮಾಣಿಕ ಗಂಗನಪಳ್ಳಿ ಅವರ ಸೇವೆ ಸಾಹಿತ್ಯ ಆಧ್ಯಾತ್ಮ, ಸಮಾಜದ ಕೊಡುಗೆ ಅಪಾರವೆಂದರು. ಎಂ.ಜಿ.ಗಂಗನಪಳ್ಳಿ ಅವರ ಬದುಕು- ಬರಹ ಕುರಿತು ಡಾ.ಸುನೀತಾ ಕೂಡ್ಲೀಕರ ಮತ್ತು ರಾಮರಾವ್ ಗಂಗನಪಳ್ಳಿ ಅವರ ಕುರಿತು ದೇವಿದಾಸ ಜೋಶಿ ಉಪನ್ಯಾಸ ನೀಡಿದರು

ವಚನಾಮೃತ ವೇದಿಕೆ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿ ಮಾಡೆ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಡಿ,ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ,ಸಾಹಿತಿ ವಿದ್ಯಾವತಿ ವಿಸಾಜಿ,ರಾಮರಾವ್ ಗಂಗನಪಳ್ಳಿ ಯುವ ಪ್ರಶಸ್ತಿ ಪುರಸ್ಕೃತ ಡಾ.ಸಂಗಪ್ಪ ತೌಡಿ ಮಾತನಾಡಿದರು.

     ಶಂಭುಲಿಂಗ ವಾಲ್ದೊಡ್ಡಿ ಮತ್ತು ರೇಣುಕಾ ಎನ್.ಬಿ.ಗಂಗನಪಳ್ಳಿ ಕಾವ್ಯ ಹಾಡಿದರು.ಸ್ವಾಗತ ಪ್ರಾಸ್ತಾವಿಕ ನುಡಿಯನ್ನು ಜಾಲಿಂದರ ಗಂಗನಪಳ್ಳಿ ಕೋರಿದರು.ಲಕ್ಷ್ಮಣ ಮೇತ್ರೆ ನಿರೂಪಿಸಿದರು‌

ಕವಿಗೋಷ್ಠಿಯಲ್ಲಿ: ಎಸ್.ಎಸ್.ಹೊಡಮನಿ,ಸುಬ್ಬಣ್ಣ ಕರಕನಳ್ಳಿ,ಕೀರ್ತಿಲತಾ ಹೊಸಳ್ಖಿ,ಎಂ.ಮಕ್ತುಂಬಿ,ಸಿದ್ದಮ್ಮ ಬಸವಣ್ಣೋರ್,,ರಾಮಚಂದ್ರ ಗಣಾಪುರ,ಮುರಳಿನಾಥ ಮೇತ್ರೆ, ಆತ್ಮಾನಂದ ಬಂಬಳಗಿ,ದೀಪಿಕಾ ಶೀಲವಂತರ ಮೊದಲಾದವರು ಕವನ ವಾಚಿಸಿದರು.ಅಶೋಕ ಗಂಗನಪಳ್ಳಿ, ಡಾ.ದತ್ತಪ್ರಸಾದ ಗಂಗನಪಳ್ಳಿ, ಶಿವಕುಮಾರ ಕಟ್ಟೆ,ಎಸ್.ಎಂ.ಜನವಾಡಕರ,ಗುರುನಾಥ ಅಕ್ಕಣ್ಣ, ಮೊದಲಾದ ಸಾಹಿತಿಗಳು ಇದ್ದರು‌