ಸೆ.೧ ಭೂಮಿ ಪೂಜೆ, ಮುತೈದೆಯರಿಗೆ ಉಡಿ ತುಂಬುವದು, ಸೆ.೨ ಪಲ್ಲಕ್ಕಿ, ಧರ್ಮಸಭೆ

ಸೆ.೧ ಭೂಮಿ ಪೂಜೆ, ಮುತೈದೆಯರಿಗೆ ಉಡಿ ತುಂಬುವದು, ಸೆ.೨ ಪಲ್ಲಕ್ಕಿ, ಧರ್ಮಸಭೆ :..
ಶಹಾಬಾದ : - ನಗರದ ಹಳೆ ಶಹಾಬಾದ ರಮಣಾದೇವಿ ದೇವಸ್ಥಾನದ ಬಳಿ ಇರುವ ಶ್ರೀ ರಾಯಚೋಟಿ ವೀರಭದ್ರೇಶ್ವರ ಆಶ್ರಮದಲ್ಲಿ ಸೆ. ೧ ರಂದು ಬೆಳಗ್ಗೆ ೧೧ ಗಂಟೆಗೆ ಭೂಮಿ ಪೂಜೆ ಮತ್ತು ಮುತೈದೆ ಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವದು
ಸೆ.೨ ರಂದು ಬೆಳಗ್ಗೆ ೭ ಗಂಟೆಗೆ ಪಲ್ಲಕ್ಕಿ ಉತ್ಸವ, ಮದ್ಯಾಹ್ನ ೧ ಗಂಟೆಗೆ ಧರ್ಮ ಸಭೆ ನಡೆಯುವದು ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ೧೧.೩೦ಕ್ಕೆ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇವಸ್ಥಾನದ ಭೂಮಿ ಪೂಜೆ ನಡೆಯಲಿದ್ದು, ನಂತರ ೨೫೧ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಸಂಜೆ ೫ ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯುವದು.
ಮಂಗಳವಾರ ಬೆಳಗ್ಗೆ ೭ ಗಂಟೆ ಶ್ರೀಮಠದಿಂದ ವಿವಿಧ ವಾಧ್ಯವೃಂದ, ಪುರವಂತರ ಸೇವೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ, ಲಕ್ಷ್ಮೀ ಗಂಜನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ತಲುಪಿ, ಹಿಂತಿರುಗಲಿದೆ.
ಮಧ್ಯಾಹ್ನ ೧ ಗಂಟೆಗೆ ಧರ್ಮ ಸಭೆ ನಡೆಯಲಿದ್ದು, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರು, ತೊನಸನಳ್ಳಿ(ಎಸ್)ನ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಅಫಜಲ್‌ಪೂರನ ಮಳೇಂದ್ರ ಶಿವಾಚಾರ್ಯರು, ಚಿನ್ಮಯ ಗಿರಿಯ ವೀರಮಹಾಂತ ಶಿವಾಚಾರ್ಯರು, ಮಳಖೇಡದ ವಿರೂಪಾಕ್ಷೇಶ್ವರ ಶಿವಾಚಾರ್ಯರು, ಅಳ್ಳೊಳ್ಳಿಯ ಸಂಗಮನಾಥ ದೇವರು ಸಾನಿಧ್ಯ ವಹಿಸಲಿದ್ದಾರೆ.
ಮಠದ ಪೂಜ್ಯರಾದ ಶಂಕ್ರಯ್ಯ ಸ್ವಾಮಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಬಸವರಾಜ ಮತ್ತಿಮಡು, ಅಲ್ಲಮಪ್ರಭು ಪಾಟೀಲ, ಕುರಿ, ಉಣ್ಣೆ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಪೂಜಾರಿ, ಜಿಪಂ.ಮಾಜಿ ಸದಸ್ಯ ಶಿವಾನಂದ ಪಾಟೀಲ, ಉದ್ಯಮಿ ನರೇಂದ್ರ ವರ್ಮಾ ಉಪಸ್ಥಿತರಿರುವರು.
ಅತಿಥಿಗಳಾಗಿ ಡಾ.ಎಂಎ.ರಶೀದ, ಚಂಪಾಬಾಯಿ ಮೇಸ್ತ್ರಿ, ಪಾತೀಮಾ ಬೇಗಂ, ಡಾ.ಕೆ.ಗುರುಲಿಂಗಪ್ಪ ಶಂಕರಗೌಡ ಪಾಟೀಲ, ಮರಿಯಪ್ಪ ಹಳ್ಳಿ ಡಾ.ಗುಂಡಣ್ಣ ಬಾಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.