ರಾಜ್ಯಮಟ್ಟದ ಸಾಧಕ ಶ್ರೀ ಪ್ರಶಸ್ತಿಗೆ ಹೋರಾಟಗಾರ ಡಾ.ಲಿಂಗರಾಜ ಸಿರಗಾಪೂರ ಆಯ್ಕೆ
ರಾಜ್ಯಮಟ್ಟದ ಸಾಧಕ ಶ್ರೀ ಪ್ರಶಸ್ತಿಗೆ ಹೋರಾಟಗಾರ ಡಾ.ಲಿಂಗರಾಜ ಸಿರಗಾಪೂರ ಆಯ್ಕೆ
ಕಲಬುರಗಿ: ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಬಿಸಿಲನಾಡು ಪ್ರಕಾಶನ ವತಿಯಿಂದ ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ ಸಾಧಕ ಶ್ರೀ ಪ್ರಶಸ್ತಿಗೆ ಹೋರಾಟ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕನ್ನಡ ಪರ ಹೋರಾಟಗಾರ ಡಾ.ಲಿಂಗರಾಜ ಸಿರಗಾಪೂರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಪ್ರಭುಲಿಂಗ ನಿಲೂರೆ ಅವರು ತಿಳಿಸಿದ್ದಾರೆ.
ಸುಮಾರು ಎರಡುವರೆ ದಶಕಗಳಿಂದ ಪ್ರಾಮಾಣಿಕವಾಗಿ ಹೋರಾಟ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ ಸಿರಗಾಪೂರ ಅವರಿಗೆ ಡಿ.28 ರಂದು ಕಲಬುರ್ಗಿಯಲ್ಲಿ ನಡೆಯಲಿರುವ ಪ್ರಶಸ್ತಿ ಸಮಾರಂಭದಲ್ಲಿ ರಾಜ್ಯಮಟ್ಟದ ಸಾಧಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
