ಪರಿಸರ ಉಳಿದರೆ ಮಾತ್ರ ನಮ್ಮ ಉಳಿವು : ಕಮಲಾಕ್ಷ
ಪರಿಸರ ಉಳಿದರೆ ಮಾತ್ರ ನಮ್ಮ ಉಳಿವು : ಕಮಲಾಕ್ಷ
ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಟ್ಟು ಪೋಷಿಸಿ ಮರವನ್ನಾಗಿ ಮಾಡಬೇಕು. ಪರಿಸರ ಉಳಿದರೆ ಮಾತ್ರ ನಾವು ಬದುಕಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಯಾದಗಿರಿ ಜಿಲ್ಲಾ ನಿರ್ದೇಶಕ ಕಮಲಾಕ್ಷ ಹೇಳಿದರು.
ಅವರು ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಟ್ರಸ್ಟ್ ವತಿಯಿಂದ ನಡೆದ ಸಾಮಾಜಿಕ ಅರಣ್ಯಕರಣ ಕಾರ್ಯಕ್ರಮ ದಲ್ಲಿ ಸಸಿಗೆ ನಿರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ಒಂದೊಂದು ಮರವನ್ನು ಬೆಳೆಸುವ ಸಂಕಲ್ಪ ಮಾಡಬೇಕು ಅಂದಾಗ ಮಾತ್ರ ಪರಿಸರದಲ್ಲಿ ಮರಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಶುದ್ಧ ಆಮ್ಲಜನಕ, ಹಣ್ಣು, ನೆರಳು, ನೀರು, ಮಣ್ಣು ಎಲ್ಲವೂ ಸಿಗುತ್ತದೆ. ಇವತ್ತು ಕಾಡು ಪ್ರಾಣಿಗಳು ನಾಡಿಗೆ ಬರುತ್ತಿರುವುದನ್ನು ಕಾಣುತ್ತಿದ್ದೇವೆ. ಏಕೆಂದರೆ ಅವುಗಳಿಗೆ ಕಾಡು ನಾಶವಾಗಿದೆ ತಿನ್ನಲು ಏನೂ ಸಿಗುತ್ತಿಲ್ಲ ಆದ್ದರಿಂದ ಆಹಾರವನ್ನು ಹುಡುಕಿ ನಾಡಿಗೆ ಬರುತ್ತಿವೆ. ಅಂತರ್ಜಲ ಹೆಚ್ಚಾಗಲು ಕಾಡು ಬೇಕು. ಮಳೆ ಹೆಚ್ಚಾಗಲೂ ಕಾಡು ಬೇಕು, ಪ್ರಾಣಿ ಪಕ್ಷಿ ಸಂಕುಲದ ಉಳಿವಿಗೆ ಮತ್ತು ಮಾನವ ಜನಾಂಗದ ಉಳುವಿಗೆ ಅರಣ್ಯ ಬೆಳೆಸುವ ಮತ್ತು ಅದನ್ನು ರಕ್ಷಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕೆಂದು ಹೇಳಿದರು.
ತಾಲೂಕ ಯೋಜನಾ ಅಧಿಕಾರಿ ಗುರುರಾಜ್ ಎಸ್ ಮಾತನಾಡಿ ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ಸಂಕಲ್ಪದಂತೆ ಸಾಮಾಜಿಕ ಅರಣ್ಯಕರಣ ಯೋಜನೆ ಅಡಿಯಲ್ಲಿ ನಾಡಿನಲ್ಲಿ ಪರಿಸರದ ಉಳುವಿಗಾಗಿ ಲಕ್ಷಾಂತರ ಸಸಿಗಳನ್ನು ಸ್ವಸಹಾಯ ಸಂಘದ ಸದಸ್ಯರಿಗೆ, ಶಾಲೆ ಕಾಲೇಜುಗಳ ಮಕ್ಕಳಿಗೆ, ಸಾರ್ವಜನಿಕರಿಗೆ ನೀಡುವ ಮೂಲಕ ಮರಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ನೂರಕ್ಕೂ ಹೆಚ್ಚು ಮರಗಳನ್ನು ಸಂಘದ ಸದಸ್ಯರಿಗೆ ವಿತರಣೆ ಮಾಡಲಾಯಿತು. ಹತ್ತಾರು ಹಣ್ಣಿನ ಸಸಿಗಳನ್ನು ಪೂಜ್ಯರ ನೇತೃತ್ವದಲ್ಲಿ ನೆಡಲಾಯಿತು.
ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿದ್ದರು. ಸಮಾಜ ಸೇವಕ ಶಿವಕಾಂತ ಮಹಾಜನ, ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ, ಅರಣ್ಯ ಮೇಲ್ವಿಚಾರಕ ಕೃಷ್ಣಕುಮಾರ್, ಮೇಲ್ವಿಚಾರಕ ಆನಂದ ಬಿ. ಕೆ ಉಪಸ್ಥಿತರಿದ್ದರು.
ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿದರು, ಬಸವರಾಜ ರಾಠೋಡ ಸ್ವಾಗತಿಸಿದರು, ಶರಣು ಸಜ್ಜನ್ ವಂದಿಸಿದರು.