ಅರ್ಥಪೂರ್ಣವಾಗಿ ಶರಣ ಸಂಗಮೇಶ ಎನ್ ಜವಾದಿ ಜನ್ಮದಿನಾಚರಣೆ.

ಅರ್ಥಪೂರ್ಣವಾಗಿ ಶರಣ ಸಂಗಮೇಶ ಎನ್ ಜವಾದಿ ಜನ್ಮದಿನಾಚರಣೆ.

ಅರ್ಥಪೂರ್ಣವಾಗಿ ಶರಣ ಸಂಗಮೇಶ ಎನ್ ಜವಾದಿ ಜನ್ಮದಿನಾಚರಣೆ.

ಚಿಟಗುಪ್ಪ: ಪರಿಸರವಾದಿ , ಸಾಹಿತಿ, ಪತ್ರಕರ್ತರು, ಹೋರಾಟಗಾರರಾದ ಶರಣ ಸಂಗಮೇಶ ಎನ್ ಜವಾದಿ ರವರ 41ನೇ ಜನ್ಮದಿನಾಚರಣೆಯನ್ನು ಕಂದಗೋಳ ಗ್ರಾಮದ ಪೂಜ್ಯ ಚನ್ನಬಸವ ಪಟ್ಟದ್ದೇವರು ಗುರುಕುಲ ಪ್ರಾಥಮಿಕ ಮತ್ತು ಪ್ರೌಢ ಆವರಣದಲ್ಲಿ ಸಸಿ ನೆಡುವ ಮುಖಾಂತರ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮುಖ್ಯ ಗುರುಗಳಾದ ರೇಖಾ ಮಂಜುನಾಥ ಮಾತನಾಡಿ ಸಂಗಮೇಶ ಎನ್ ಜವಾದಿ ರವರು ಅತ್ಯಂತ ಸರಳ ವ್ಯಕ್ತಿತ್ವದವರು, ಸದಾ ಸಮಾಜದ ಅಭಿವೃದ್ಧಿ ಬಗೆ ಚಿಂತನೆ ನಡೆಸುತ್ತಾರೆ. ವೈಚಾರಿಕ ಬರಹಗಳಲ್ಲಿ ತೊಡಗಿಸಿಕೊಂಡಂತಹ ಜನಪರ ಪ್ರಗತಿಪರ ಚಿಂತಕರು, ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪರಿಸರ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವ ನಿಸ್ವಾರ್ಥಕರು. ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಂಸ್ಕೃತಿಗಾಗಿ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ವಿಶೇಷವಾಗಿ ನಮ್ಮ ಗುರುಕುಲದ ಬಗೆ ಅಪಾರ ಗೌರವ ಹೊಂದಿದ್ದಾರೆ. ಇಂತಹ ತ್ಯಾಗ ಸೇವಕರ ಜನ್ಮದಿನಾಚರಣೆ ಈ ನಮ್ಮ ಗುರುಕುಲದಲ್ಲಿ ಆಚರಣೆ ಮಾಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಸೇವೆಗಳನ್ನು ಮಾಡಿ ಶರಣ ಸಂಗಮೇಶ ಎನ್ ಜವಾದಿ ರವರು ನಾಡಿಗೆ ಮಾದರಿಯಾಗಲೆಂದು ಶುಭ ಹಾರೈಸಿದರು.

ಗುರುಕುಲ ಸ್ಥಳೀಯ ಆಡಳಿತ ಮಂಡಳಿ ಹಿರಿಯ ಸದಸ್ಯ ಬಂಡೆಪ್ಪಾ ಮೂಲಗೆ ಮಾತನಾಡಿ ಸಂಗಮೇಶ ಎನ್ ಜವಾದಿ ರವರ ಚಿಂತನೆಗಳು ಎಲ್ಲರಿಗೂ ಸ್ಫೂರ್ತಿದಾಯಕವಾದವು. ಸದಾ ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ಭಾಗದಲ್ಲಿ ಬಸವ ತತ್ವ ಬೆಳೆಸುವಲ್ಲಿ ಇವರ ನಿಸ್ವಾರ್ಥ ಸೇವೆ ದೊಡ್ಡದು. ಪರಿಸರ ಸಂರಕ್ಷಣೆ, ಸಾಹಿತ್ಯ ರಚನೆಗಾಗಿ ಸದಾ ದುಡಿಯುತ್ತಿರುವ ಶ್ರೀಯುತ ಸಂಗಮೇಶ ಎನ್ ಜವಾದಿ ರವರ ನಿಷ್ಕಳಂಕ ಸೇವೆ ಕರುನಾಡಿಗೆ ಪ್ರೇರಣದಾಯಕವಾಗಿದೆ. ಇನ್ನು ಮುಗಿಲೆತ್ತರಕ್ಕೆ ಇವರ ಸೇವೆ ಸಾಗಲಿ ಎಂದು ಹರಸಿ, ಶುಭ ಕೋರಿದರು.

ರಾಷ್ಟ್ರೀಯ ಬಸವ ದಳದ ತಾಲೂಕಾಧ್ಯಕ್ಷ ರಾಜಶೇಖರ ದೇವಣಿ ಮಾತನಾಡಿ ಸಂಗಮೇಶ ಎನ್ ಜವಾದಿ ರವರು ಒಬ್ಬ ಅಪ್ರತಿಮ ಹೋರಾಟಗಾರರು. ಬಡವರ, ಅನಾಥರ, ರೈತರ, ಕೂಲಿಕಾರ್ಮಿಕರ ಉನ್ನತಿಗಾಗಿ ದುಡಿಯುತ್ತಿರುವ ಮೇಧಾವಿಗಳು.ಎಂತಹದೇ ಸಂಕಷ್ಟ ಸಮಯದಲ್ಲಿಯೂ ಜನರ ಜೊತೆ ನಿಂತು,ಅವರ ಸಮಸ್ಯೆಗಳಿಗೆ ಸ್ವಂದಿಸುವ ಎದೆಗಾರಿಕೆ ಉಳ್ಳವರು. ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ಧ ಸದಾ ಹೋರಾಟ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜಲ, ವಾಯು,ಶಬ್ದ ಮಾಲಿನ್ಯದಿಂದ ಆಗುವ ದುಷ್ಪರಿಣಾಮದ ಬಗೆ ಜನರಿಗೆ ತಿಳುವಳಿಕೆ ನೀಡಿ ಅಭಿಯಾನಗಳು ಸದ್ದುಗದ್ದಲವಿಲ್ಲದೆ ಮಾಡುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ. ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ. ಸರ್ವರ ನೋವಿಗೆ ಮಿಡಿಯುವ ಇವರ ಹೃದಯವೈಶಾಲ್ಯತೆ ದೊಡ್ಡದು. ಜವಾದಿಯವರ ಜನಪರ ಕಾರ್ಯಚಟುವಟಿಕೆಗಳ ಸೇವೆ ಅಜರಾಮರವಾದದ್ದು.ಈ ಸಂದರ್ಭದಲ್ಲಿ ಸಂಗಮೇಶ ಎನ್ ಜವಾದಿ ರವರಿಗೆ ಹೃತ್ಪೂರ್ವಕ ಶುಭಾಶಯಗಳು ಕೋರುತ್ತೇವೆ ಎಂದು ತಿಳಿಸಿದರು.

ಸಸಿ ನೆಟ್ಟು,ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಗಮೇಶ ಎನ್ ಜವಾದಿ ರವರು ಮಾನವೀಯ ಮೌಲ್ಯ ಹಾಗೂ ಮಾನವೀಯತೆ ಸಂಬಂಧದೊಂದಿಗೆ ಇನ್ನಷ್ಟು ಜನಪರ ಕೆಲಸಗಳು ಮಾಡಲು ಈ ಸನ್ಮಾನ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ. ಕನ್ನಡ ನಾಡು ನುಡಿ ಭಾಷೆ ನೆಲ ಜಲ ಗಡಿ ಪರವಾಗಿ ಸದಾ ಹೋರಾಟ ಮಾಡುತ್ತೇವೆ.ಪರಿಸರ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡಲಾಗುವುದು. ಬಿಡುವಿನ ಸಮಯದಲ್ಲಿ ವೈಚಾರಿಕ ಬರಹಗಾರರು ಬರೆಯುವ ಮುಖಾಂತರ ಸಮಾಜಕ್ಕೆ ಎಚ್ಚರಿಸುವಂತಹ ಕೆಲಸ ಖಂಡಿತವಾಗಿಯೂ ಮಾಡಲಾಗುತ್ತಿದೆ. ಎಂತದೇ ಕಷ್ಟ ಬಂದರೂ ಸಹ ಜನರೊಂದಿಗೆ ನಿಂತುಕೊಂಡು ಜನರ ಸಮಸ್ಯೆಗೆ ಖಂಡಿತವಾಗಿಯೂ ಸ್ಪಂದಿಸುತ್ತೇವೆ ಎಂದು ಹೇಳಿದರು.

ಶಿಕ್ಷಕ ಮಾಹಾದೇವ ಶೆಟ್ಟಿಗಾರ್ ನಿರೂಪಿಸಿದರು. ಮಂಜುನಾಥ ಶಿಕ್ಷಕರು ವಂದಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು - ಶಿಕ್ಷಕಿಯರು, ಗಣ್ಯರು, ನಾಗರಿಕರು, ಮಾತೆಯರು, ವಿಧ್ಯಾರ್ಥಿಗಳು, ಮಕ್ಕಳು ಹಾಜರಿದ್ದರು.