ಸ್ನೇಹ ಶಾಶ್ವತ

ಸ್ನೇಹ ಶಾಶ್ವತ
ಮನದ ಕಳೆಯನು ಕಳೆಯೋಣ
ಮನವನು ಹಸನುಗೊಳಿಸೋಣ
ಪ್ರೀತಿಯ ಬೀಜವ ಬಿತ್ತೋಣ
ಸ್ನೇಹದ ಹನಿ ಸಿಂಪಡಿಸೋಣ
ಪ್ರೀತಿಯ ಹೂವನು ಅರಳಿಸೋಣ
ಸುಸಂಬಂಧದ ಸುಗಂಧವ ಹರಡೋಣ
ಕಹಿನೆನಪುಗಳನು ಮರೆಯೋಣ
ಸಿಹಿ ಸಂಗತಿಗಳ ಸ್ಮರಿಸೋಣ
ಕಷ್ಟವ ದೂರ ಸರಿಸೋಣ
ಧೈರ್ಯದಿ ಮುಂದೆ ಸಾಗೋಣ
ಸಿಟ್ಟನು ನಾವು ಅಳಿಸೋಣ
ಎಲ್ಲರೂ ಒಂದಾಗಿ ಬಾಳೋಣ
ದೇವರ ಸ್ಮರಣೆಯ ಮಾಡೋಣ
ಮನ ಶಾಂತಿಯ ಪಡೆಯೋಣ
ನಗುತಲಿ ನಾವು ಬಾಳೋಣ
ಸ್ನೇಹವು ಶಾಶ್ವತ ಎನ್ನೋಣ
ಪ್ರೊ.ಶೋಭಾದೇವಿ ಚೆಕ್ಕಿ ಸೇಡಂ