ಔರಾದ್‌ನಲ್ಲಿ ಶಾಸಕ ಪ್ರಭು ಚವ್ಹಾಣರಿಂದ ಸಾಹಿತಿ ಸಂಗಮ ಕಾರ್ಯಕ್ರಮ ಜರಗಿತು

ಔರಾದ್‌ನಲ್ಲಿ ಶಾಸಕ ಪ್ರಭು ಚವ್ಹಾಣರಿಂದ ಸಾಹಿತಿ ಸಂಗಮ ಕಾರ್ಯಕ್ರಮ  ಜರಗಿತು

  ಔರಾದ್‌ನಲ್ಲಿ ಶಾಸಕ ಪ್ರಭು ಚವ್ಹಾಣರಿಂದ ಸಾಹಿತಿ ಸಂಗಮ ಕಾರ್ಯಕ್ರಮ ಜರಗಿತು 

ಔರಾದ(ಬಿ), ಕಮಲನಗರ ಸಾಹಿತಿಗಳಿಗೆ ವಿಶೇಷ ಸನ್ಮಾನ 

ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನ.21ರಂದು ಔರಾದ(ಬಿ) ಪಟ್ಟಣದ ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗದಲ್ಲಿ ಸಾಹಿತಿ ಸಂಗಮ ಕಾರ್ಯಕ್ರಮದಡಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಕನ್ನಡ ಸಾಹಿತಿಗಳಿಗೆ ಸನ್ಮಾನಿಸಿದರು. 

ಸಾಹಿತಿಗಳಾದ ನಾಗಯ್ಯ ಸ್ವಾಮಿ, ಬಸವರಾಜ ಸ್ವಾಮಿ, ರೇಣುಕಾ ಮಠ, ಶಿಲ್ಪಾ ರಾಜನಾಳೆ, ಅಶ್ವಿನಿ ಸುಂದಾಳೆ, ಜ್ಯೋತಿ.ಡಿ ಬುಮ್ಮ, ತುಕಾರಾಮ ರಾಜನಾಳೆ, ಸಂಗಮೇಶ.ಕೆ ಬೆಲ್ದಾಳ, ನಾಗೇಶ ಮಡಿವಾಳ, ಜಯಪ್ರಕಾಶ ಅಲ್ಮಾಜೆ, ಪೂಜಾ.ಎಸ್ ಪಟ್ನೆ, ರಾಜೇಂದ್ರ ಯರನಾಳೆ, ಪರಮೇಶ.ಡಿ ವಿಲಾಸಪುರೆ, ಬಸವರಾಜ ಪಾಂಚಾಳ, ಪ್ರಕಾಶ ದೇಶಮುಖ, ಬಲಭೀಮ ಕುಲಕರ್ಣಿ, ನಂದಾದೀಪ ಬೋರಾಳೆ, ಬಾಲಾಜಿ ಕುಂಬಾರ, ಪುಷ್ಪವತಿ ಚಿಕುರ್ತೆ, ಮಾಣಿಕಾದೇವಿ ಪಾಟೀಲ, ರಾಜಕುಮಾರ ಬಿರಾದಾರ, ಕಾಶಿನಾಥ ಬಾವಗೆ, ವಿಶಾಲ ಮಹಾಜನ, ಡಾ.ವಿಶ್ವನಾಥ ಕಿವಡೆ, ರಾಜಶೇಖರ ಅಜ್ಜಾ, ಸಂಗಮೇಶ ಮುರ್ಕೆ, ವಿಶ್ವನಾಥ ಡೋಣಗಾಪುರೆ, ಶಿವಾಜಿ ಆರ್.ಎಚ್ ಅವರನ್ನು ಗೌರವಿಸಲಾಯಿತು. 

ಸಾಹಿತಿಗಳಿಗೆ ಶಾಲು, ಹೂಮಾಲೆ ತೊಡಿಸಿ ಸಾಹಿತ್ಯ ಸಿರಿ ಪ್ರಶಸ್ತಿಯ ಜೊತೆಗೆ ವೀರಲೋಕ ಪ್ರಕಾಶನದ ನಿನ್ನ ಧ್ಯಾನದ ನೂರೊಂದು ಹಣತೆ (ವಾಸುದೇವ ನಾಡಿಗ್), ಗಿಳಿಯು ಬಾರದೆ ಇರದು (ಪಿ.ಎಸ್.ಶ್ರೀಧರನ್ ಪಿಳ್ಳ), ಗಾಯಗೊಂಡ ಸಾಲುಗಳು (ಸದಾಶಿವ ಸೊರಟುರು), ಸತ್ಯದ ಅನಾವರಣ (ಕೆ.ಎಸ್ ರಮಾಸುಂದರಿ), ಇತ್ತ ಹಾಯಲಿ ಚಿತ್ತ (ಕವಿತಾ ಹೆಗಡೆ ಅಭಯಂ), ಹಕ್ಕಿ ಮತ್ತು ಹುಡುಗಿ (ಪ್ರಜಾವಾಣಿ ಬಳಗ), ಕಾದಂಬರಿ (ಡಾ.ವಾಸುದೇವ ಶೆಟ್ಟಿ), ನೀಲಿ ಶಾಯಿಯ ಕಡಲು(ಗೀತಾ ದೊಡ್ಮನಿ) ಪರಿಮಳದ ಪಡಸಾಲೆ (ವಾಸುದೇವ) ಪುಸ್ತಕಗಳು, ವಿತರಿಸಿ ಗೌರವ ಸಲ್ಲಿಸಿದರು. 

ಈ ವೇಳೆ ಮಾತನಾಡಿದ ಶಾಸಕರು, ಕನ್ನಡ ಭಾಷೆಯ ರಕ್ಷಣೆಗಾಗಿ ನಿರಂತರ ಶ್ರಮಿಸುವ ಸಾಹಿತಿಗಳಿಗೆ ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತಿಗಳು ಮತ್ತು ಕಲಾವಿದರ ಮನೆಗೆ ಭೇಟಿ ನೀಡಿ ಸನ್ಮಾನಿಸುತ್ತಾ ಬಂದಿದ್ದೇನೆ. ಕನ್ನಡಕ್ಕಾಗಿ ದುಡಿಯುವರನ್ನು ಗೌರವಿಸುವುದು ನನ್ನ ಸೌಭಾಗ್ಯವೆಂದು ಭಾವಿಸಿದ್ದೇನೆ ಎಂದರು. 

ಗಡಿ ಭಾಗವಾದ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಕನ್ನಡದ ಅಭಿವೃದ್ಧಿಗೆ ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದೇನೆ. ನನ್ನ ಮನೆಯ ಭಾಷೆ ಬಂಜಾರಾ ಆದರೂ ಮಾತೃಭಾಷೆ ಕನ್ನಡವೇ ಆಗಿದೆ. ನನ್ನ ತನು, ಮನಗಳಲ್ಲಿ ಕನ್ನಡ ಅಡಗಿದೆ. ಅನಿವಾರ್ಯ ಕಾರಣಗಳಿಂದ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಆದರೆ ಮುಂದಿನ ಪೀಳಿಗೆಗೆ ಸಮಸ್ಯೆಯಾಗಬಾರದೆಂದು ಬಹಳಷ್ಟು ಕಡೆಗಳಲ್ಲಿ ಕನ್ನಡ ಶಾಲೆಗಳನ್ನು ತೆರೆಯುವ ಕೆಲಸ ಮಾಡಿದ್ದೇನೆ. ಜಿಲ್ಲಾ, ತಾಲ್ಲೂಕು ಮತ್ತು ವಲಯ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದೇನೆ. ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹೇಳಿದ ಎಲ್ಲ ಕನ್ನಡದ ಕೆಲಸಗಳನ್ನು ಮಾಡಿದ್ದೇನೆ ಆದರೆ ಕೆಲವರು ಅನಗತ್ಯ ಆರೋಪಗಳನ್ನು ಮಾಡುತ್ತಾರೆ. ಕನ್ನಡದ ಕೆಲಸಗಳಿಗೆ ನನ್ನ ಸಂಪೂರ್ಣ ಸಹಕಾರವಿರುತ್ತದೆ. ಆದರೆ ವಿನಾಕಾರಣ ಪೀಡಿಸಿದರೆ ಸಹಿಸಲಾಗದು. ಅಂಥವುಗಳಿಗೆ ತಲೆಕೆಡಿಸಿಕೊಳ್ಳದೇ ನನ್ನ ಕೆಲಸಗಳನ್ನು ನಿರಂತರವಾಗಿ ಮುಂದುವರೆಸುವೆ ಎಂದು ತಿಳಿಸಿದರು. 

ನಾನು ಕನ್ನಡದ ಕೆಲಸಗಳಿಗೆ ಕಟಿಬದ್ದನಾಗಿದ್ದು, ಕನ್ನಡಕ್ಕೆ ಸಂಬAಧಿಸಿದ ಏನೆ ಕೆಲಸವಿರಲಿ. ನೇರವಾಗಿ ತಿಳಿಸಿ ಖಂಡಿತವಾಗಿ ಕೆಲಸ ಮಾಡಿಕೊಡುತ್ತೇನೆ. ಕನ್ನಡ ಭಾಷೆಯ ಹಿತದೃಷ್ಟಿಯಿಂದ ಕಸಾಪ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ನಾನು ಸಾಹಿತ್ಯ ಪರಿಷತ್ತಿನ ಜೊತೆಗಿದ್ದೇನೆ ಎಂದು ಹೇಳಿದರು. 

ಕಸಾಪ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಮಾತನಾಡಿ, ಕನ್ನಡ ನಾಡು, ನುಡಿಯ ರಕ್ಷಣೆಗೆ ಎಲ್ಲರೂ ಶ್ರಮಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಸುಂದರ ಕನ್ನಡ ಭವನ ನಿರ್ಮಾಣಗೊಂಡಿದೆ. ಅದರಂತೆ ಎಲ್ಲ ತಾಲ್ಲೂಕುಗಳಲ್ಲಿಯೂ ಕನ್ನಡ ಭವನಗಳನ್ನು ನಿರ್ಮಿಸುವ ಅವಶ್ಯಕತೆಯಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು. 

ಶಾಸಕರಿಗೆ ಸಾಹಿತ್ಯ ಸಂವರ್ಧಕ ಪ್ರಶಸ್ತಿ: ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾಸಕರಾದ ಪ್ರಭು.ಬಿ ಚವ್ಹಾಣ ಅವರಿಗೆ ಸಾಹಿತ್ಯ ಸಂವರ್ಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸರುಬಾಯಿ ಘೂಳೆ, ಸಾಹಿತಿಗಳಾದ ರಾಜೇಂದ್ರ ಯರನಾಳೆ, ಜ್ಯೋತಿ ಬೊಮ್ಮಾ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಟಿ.ಎಮ್.ಮಚ್ಚೆ, ತಾಲೂಕಾಧ್ಯಕ್ಷರಾದ ಡಾ.ಶಾಲಿವಾನ್ ಉದಗಿರೆ, ಪ್ರಶಾಂತ ಮಠಪತಿ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಶಿವಣಕರ, ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗೀರಾ, ಅಂಬಾದಾಸ ನೇಳಗೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಸಚಿನ ರಾಠೋಡ್, ಬಸವರಾಜ ಹಳ್ಳೆ, ಜಗನ್ನಾಥ ದೇಶಮುಖ, ಮಲ್ಲಿಕಾರ್ಜುನ ಟಂಕಸಾಲೆ, ಅಶೋಕ ಶೆಂಬೆಳ್ಳೆ ಸೇರಿದಂತೆ ಇತರರಿದ್ದರು. ಶಿವಲಿಂಗ ಹೇಡೆ ನಿರೂಪಿಸಿದರು.