ಚಿಂಚೋಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕದಿಂದ ವಿಶೇಷ ಪೂಜೆ ಸಲ್ಲಿಕೆ ಭಾರೀತಯ ಸೈನಿಕರ ಒಳತಿಗಾಗಿ: ಹನುಮಾನ ಚಾಲಿಸ ಪಠಣ

ಚಿಂಚೋಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕದಿಂದ ವಿಶೇಷ ಪೂಜೆ ಸಲ್ಲಿಕೆ ಭಾರೀತಯ ಸೈನಿಕರ ಒಳತಿಗಾಗಿ: ಹನುಮಾನ ಚಾಲಿಸ ಪಠಣ

ಚಿಂಚೋಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕದಿಂದ ವಿಶೇಷ ಪೂಜೆ ಸಲ್ಲಿಕೆ

ಭಾರೀತಯ ಸೈನಿಕರ ಒಳತಿಗಾಗಿ: ಹನುಮಾನ ಚಾಲಿಸ ಪಠಣ 

ಚಿಂಚೋಳಿ : ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಭಾರತೀಯರ ಸಾವಿನ ಪ್ರತಿಯಾಗಿ, ಉಗ್ರವಾದಕ್ಕೆ ಉತ್ತೇಜನ ನೀಡುತ್ತಿರುವ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ನುಗ್ಗಿ, ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಮೂಲಕ ಯಶಸ್ವಿ ಕಾರ್ಯಾಚರಣೆ ಕೈಗೊಂಡು ಉಗ್ರ ರಾಷ್ಟ್ರಕ್ಕೆ ಸೈನ್ಯ ತಕ್ಕ ಉತ್ತರ ನೀಡಿ, ಶತ್ರು ರಾಷ್ಟ್ರ ಪಾಕಿಸ್ತಾನದ ಸೊಕ್ಕು ಅಡಗಿಸಲು, ದಮನಗೊಳಿಸಲು ಭಾರತೀಯ ಸೈನ್ಯಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿ, ಕರ್ನಾಟ ಸರಕಾರದ ಸಾರಿಗೆ ಮತ್ತು ಮುಜುರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ಅವರು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ. ವೆಂಕಟೇಶ ಎಂ.ಬಿ ಸರಕಾರಿ ಆದೇಶದ ಸುತ್ತೋಲೆ ಹೊರಡಿಸಲಾಗಿತು. 

ಅದರಂತೆ ದೇಶದ ಭಾರತೀಯ ನಾಗರೀಕರು ನಮ್ಮ ಸೈನಿಕರ ಸುರಕ್ಷತೆಗೆ ಹಾಗೂ ಅವರ ಒಳಿತಿಗಾಗಿ ಚಿಂಚೋಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕದ ವತಿಯಿಂದ ಚಂದಾಪುರದ ಶ್ರೀ ಹನುಮಾನ ದೇವಾಲಯದಲ್ಲಿ ಹನುಮಾನ ಚಾಲಿಸ ಪಠಣ ಮಾಡಿ, ವಿಶೇಷ ಪೂಜೆಯನ್ನು ನೆರವೆರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶರಣುಪಾಟೀಲ ಮೋತಕಪಳ್ಳಿ, ಕಾರ್ಯದರ್ಶಿ ಪ್ರೊ.ಮಲ್ಲಿಕಾರ್ಜುನ ಪಾಲಮೂರ, ಪಿಎಲ್.ಡಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಜಗದೀಶಸಿಂಗ್ ಠಾಕೂರ್, ನೀಲಕಂಠ ಸಿಳ್ಳಿನ್, ಶಿವುಕುಮಾರ ಸ್ವಾಮಿ, ಮಲ್ಲಿಕಾರ್ಜುನ್ ಯಲ್ಮಡಗಿ, 

ಸಂತೋಷ ಕಶೆಟ್ಟಿ, ಆಕಾಶ ಕೊಳ್ಳೂರ್, ರಾಜು ಮುಸ್ತರಿ, ವೀರಶ ಯಂಪಳ್ಳಿ, ನಾಗೇಶ ಮಾಸೂಲ್ ಸೇರಿದಂತೆ ದೇಶ ಅಭಿಮಾನಿಗಳು, ಭಕ್ತರು ಇದ್ದರು.