ಆಳಂದ ಶ್ರಾವಣ ಸಂಜೆ ಉಪನ್ಯಾಸ ಜು.25ರಿಂದ ಆರಂಭ

ಆಳಂದ ಶ್ರಾವಣ ಸಂಜೆ ಉಪನ್ಯಾಸ ಜು.25ರಿಂದ ಆರಂಭ
ಆಳಂದ: ತಾಲ್ಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸುವ 13ನೇ ವರ್ಷದ ಶ್ರಾವಣ ಸಂಜೆ ಉಪನ್ಯಾಸವು ಜು.25ರಿಂದ ಆಗಸ್ಟ್ 24ರವರೆಗೆ ಜರುಗಲಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದರು.
ಜುಲೈ.25ಕ್ಕೆ ಸಾಯಂಕಾಲ 5 ಗಂಟೆಗೆ ಆಳಂದ ಅನುಭವ ಮಂಟಪದ ಸಂಚಾಲಕ ಶ್ರೀ ಕೋರಣೇಶ್ವರ ಸ್ವಾಮೀಜಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿವರು. ಶರಣ ಚಿಂತಕ ಸಂಜಯ ಮಾಕಲ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಾಜಿ ಶಾಸಕ ಸುಭಾಷ ಗುತ್ತೇದಾರ್, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ವಡ್ಡನಕೇರಿ, ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕಾಧ್ಯಕ್ಷ ಶರಣಬಸಪ್ಪ ಪಾಟೀಲ ಉಪಸ್ಥಿತರಿರುವರು. ತಾಲ್ಲೂಕಾಧ್ಯಕ್ಷ ಸಂಜಯ ಪಾಟೀಲ ಅಧ್ಯಕ್ಷತೆವಹಿಸಲಿದ್ದಾರೆ.
ಶ್ರಾವಣಮಾಸದಲ್ಲಿ 30 ದಿನ ಸಾಯಂಕಾಲ 6ಕ್ಕೆ ಶರಣರ ವಿಚಾರ, ಚಿಂತನೆ ಹಾಗೂ ಶರಣ ಸಾಹಿತ್ಯದ ಸಂರಕ್ಷಣೆಗೈದ ವ್ಯಕ್ತಿ ಗಳುಮತ್ತು ಪ್ರಸಾರದ ಮಹತ್ವದ ಕುರಿತು 30
ಜನ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಜರುಗಲಿವೆ.
ಆಗಸ್ಟ್ 25ರಂದು ಸಮಾರೋಪ ಕಾರ್ಯಕ್ರಮ ಜರುಗಲಿದೆ.
ಪಟ್ಟಣದ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ನಡೆಯಲಿದೆ. ಕಲಾವಿದ ಶಿವಶರಣಪ್ಪ ಪೂಜಾರಿ, ಬಸವರಾಜ ಆಳಂದ ಅವರಿಂದ ವಚನ ಗಾಯನ ಹಾಗೂ ವಿದ್ಯಾರ್ಥಿಗಳಿಂದ ವಚನ ಪ್ರಸ್ತುತಿ, ಪಠಣ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪಟ್ಟಣದ ವಿವಿಧ ಸಂಘಟನೆಗಳ ಪ್ರಮುಖರು, ವಿಚಾರವಂತರು ಹಾಗೂ ಬಸವಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೋಳಲು ತಿಳಿಸಿದ್ದಾರೆ.
ಕಾರ್ಯದರ್ಶಿ ರಾಮಣ್ಣ ಸುತಾರ, ಬಾಬುರಾವ ಮಡ್ಡೆ. ಪ್ರಭಾಕರ ಸಲಗರೆ, ರಮೇಶ ಮಾಡಿಯಾಳಕರ, ಅಪ್ಪಾಸಾಹೇಬ ತೀರ್ಥೆ, ಮಲ್ಲಿನಾಥ ವಚ್ಚೆ ಮುಂತಾದವರು ಉಪಸ್ಥಿತರಿದ್ದರು.
ವರದಿ ಡಾ.ಅವಿನಾಶ S ದೇವನೂರ