ಡಾ.ಅಂಬೇಡ್ಕರ ಅಂದರೆ ಓದು-ಬರಹ ,ಜ್ಞಾನದ ಸಂಕೇತ- ಡಾ.ಬಂಧು

ಡಾ.ಅಂಬೇಡ್ಕರ ಅಂದರೆ  ಓದು-ಬರಹ ,ಜ್ಞಾನದ ಸಂಕೇತ- ಡಾ.ಬಂಧು

ಡಾ.ಅಂಬೇಡ್ಕರ ಅಂದರೆ ಓದು-ಬರಹ ,ಜ್ಞಾನದ ಸಂಕೇತ- ಡಾ.ಬಂಧು..

ಕಲಬುರಗಿ:- ಡಾ. ಬಾಬಾಸಾಹೇಬ ಅಂಬೇಡ್ಕರ ಅಂದರೆ ಕೇವಲ ಮೂರ್ತಿ,ಪ್ರತಿಮೆ ಅಲ್ಲ! ಡಾ.ಅಂಬೇಡಕರ ಅಂದರೆ ಓದು ಬರಹ ಮತ್ತು ವಿದ್ಯೆ ಯ ಆರಾಧಕರು, ಬುದ್ಧ ವಿಶ್ವ ಶಾಂತಿ ಭಂಡಾರಿ,ಬಸವಣ್ಣ ವಿಶ್ವ ಭಕ್ತಿ ಭಂಡಾರಿ,ಡಾ.ಅಂಬೇಡಕರ ವಿಶ್ವ ಜ್ಞಾನ ಭಂಡಾರದ ಸಂಕೇತ ರಾಗಿದ್ದಾರೆಂದು ನಿವೃತ್ತ ಉಪನ್ಯಾಸಕರಾದ ಡಾ.ಕೆ.ಎಸ ಬಂಧು.ಸಿದ್ದೇಶ್ವರ ರವರು ನುಡಿದರು. ಅವರು ಜೇವರಗಿ ಕಾಲೋನಿಯ,ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ, ಬುದ್ಧ, ಬಸವ , ಡಾ.ಅಂಬೇಡಕರ ವಿಚಾರ ವೇದಿಕೆಯಲ್ಲಿ ಬಾಬಾಸಾಹೇಬ ರ 68ನೇ ಮಹಾಪರಿ ನಿರ್ವಾಣ ಕಾರ್ಯಕ್ರಮ ದ ಅತಿಥಿಗಳಾಗಿ ಮಾತನಾಡುತ್ತ...ಮಹಿಳಾ ದಿನದಂದು ಅನೇಕರು ಮಹಿಳೆಯರ ಸೌಂದರ್ಯ ವರ್ಣಿಸಿದರೆ, ಮಹಿಳೆಯರ ಹಕ್ಕಿಗಾಗಿ.ಮತದಾನ ಹಕ್ಕು, ಆಸ್ತಿ ಹಕ್ಕು ವಿದ್ಯೆಯ ಹಕ್ಕು.ಸ್ಥಾನಮಾನ ಗೌರವ ಹಕ್ಕಿಗಾಗಿ ಕಾನೂನು ಬರೆದವರು ಡಾ.ಅಂಬೇಡಕರ ಒಬ್ಬ ರು..ಅಲ್ಲದೆ ಮಹಿಳೆಯರಿಗಾಗಿ ಹಿಂದು ಕೋಡ ಬಿಲ್ಲ್ ಮಸೂದೆ ಒಪ್ಪದಿದಕ್ಕೆ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ ಮಹಿಳಾ ವಿಮೋಚಕ ಎಂದರು. ಪೆನ್ನು ಪುಸ್ತಕದಿಂದ ,ಮನುಸ್ಮ್ರತಿ ಲಕ್ಷಾಂತರ ಜನರನ್ನು ಗುಲಾಮರಾಗಿ ಮಾಡಿದರೇ ಡಾ.ಅಂಬೇಡಕರ ಬರೆದ ಭಾರತೀಯ ಸಂವಿಧಾನ ಕೋಟ್ಯಾಂತರ ಜನ ರಿಗೆ ಮಾನವರಾಗಿ ಮಾಡಿ,ಮಹಿಳೆಯರಿಗೆ ಗೌರವದ ರಾಷ್ಟ್ರವತಿ ಮಾಡಿದ ಮಹಾಪುರುಷ ಡಾ.ಅಂಬೇಡಕರ ಅವರ ಆಚಾರ- ವಿಚಾರ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಋಣ ತೀರಿಸಲು ಡಾ. ಬಂಧು.ಸಿದ್ದೇಶ್ವರ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು ಸಮಾರಂಭದ ಅಧ್ಯಕ್ಷ ವಹಿಸಿದ, ಪ್ರಾಚಾರ್ಯರಾದ ಡಾ.ಪ್ರಕಾಶ ಮಾರ್ಗೇ ರವರು ಡಾ.ಅಂಬೇಡಕರ ಜಗತ್ತಿನ.ಮಹಾಮಾನವತಾವಾದಿ, ಮಹಾನ ನಾಯಕರು,ಅವರ ಆದರ್ಶಗಳನ್ನು ವಿದ್ಯಾರ್ಥಿನೀಯರು ಜೀವನದಲ್ಲಿ ಅನುಸರಿಸುವಂತೆ ನುಡಿದರು.ಮೊದಲಿಗೆ ಭಾವಚಿತ್ರದ ಪೂಜೆ. ನಂತರ ಮಕ್ಕಳು ತ್ರಿಸರಣ ಪಂಚಶೀಲ ಪಠಿಸಿ,ಮೌನಾಚರಣೆ ಮಾಡಿದರು. ವೇದಿಕೆಯ ಮೇಲೆ ಹಿರಿಯ ಪ್ರಾಧ್ಯಾಪಕರಾದ ಡಾ. ಮಹಾದೇವ ಬಡಗೇರ,ಡಾ.ವಿದ್ಯಾವತಿ ಚೆಕ್ಕಿ . ಮಾತನಾಡಿದರು. ಡಾ.ರಾಜು ಶ್ಯಾಮ ರಾವ ಕಾರ್ಯಕ್ರಮ ನಿರೂಪಿಸಿದರು, ಡಾ. ಹಾಜೀಮೇಡಂ ಸ್ವಾಗತ ಕೋರಿದರು ನೀತಾ ವಿದ್ಯಾರ್ಥಿನಿಯು ಸ್ವಾಗತ ಗೀತೆ ಹಾಡಿದರೇ , ಬುದ್ಧ ಬಸವ ಅಂಬೇಡಕರ ವೇದಿಕೆಯ ಸಂಚಾಲಕರಾದ ಡಾ.ಪದ್ಮಾವತಿ ಧನ್ನಿ ವಂದನಾರಪಣೆ ಗೈದರು. ಕಾಲೇಜಿನ ಡಾ.ಅರವಿಂದ ಧ್ಯಾಮಾ ,ಡಾ.ಸುನಂದಾ,ಡಾ.ಕೆ.ಜ್ಯೋತಿ ಡಾ.ವಿಜಯಕುಮಾರ ಹೆಬ್ಬಾಳ್ಕರ. ಡಾ.ಪ್ರಕಾಶ ಬಡಿಗೇರ.ಡಾ.ಮಹಾದೇವ , ನೀತಿಶ ಎಲ್ಲ ಉಪನ್ಯಾಸಕರು.ವಿದ್ಯಾರ್ಥಿನೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.