ಚಿಂಚೋಳಿಯಲ್ಲಿ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ 83ನೇ ಹುಟ್ಟುಹಬ್ಬದ ನಿಮಿತ್ಯವಾಗಿ ಹಣ್ಣು ಹಂಪಲು ವಿತರಣೆ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಮಂತ್ರಿ ಆಗುವ ಶಕ್ತಿ ಸಾಮರ್ಥ್ಯ ಹೊಂದಿರುವ ದೊಡ್ಡ ನಾಯಕ : ಪುರಸಭೆ ಅಧ್ಯಕ್ಷ ಆನಂದ ಟೈಗರ್

ಚಿಂಚೋಳಿಯಲ್ಲಿ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ 83ನೇ ಹುಟ್ಟುಹಬ್ಬದ ನಿಮಿತ್ಯವಾಗಿ ಹಣ್ಣು ಹಂಪಲು ವಿತರಣೆ

ಡಾ.ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಮಂತ್ರಿ ಆಗುವ ಶಕ್ತಿ ಸಾಮರ್ಥ್ಯ ಹೊಂದಿರುವ ದೊಡ್ಡ ನಾಯಕ : ಪುರಸಭೆ ಅಧ್ಯಕ್ಷ ಆನಂದ ಟೈಗರ್ 

ಚಿಂಚೋಳಿ : ಪುರಸಭೆ ಅಧ್ಯಕ್ಷ ಆನಂದಕುಮಾರ ನಾಗೇಂದ್ರಪ್ಪ ಟೈಗರ್ ಅವರ ನೇತೃತ್ವದಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ 83ನ ಹುಟ್ಟುಹಬ್ಬದ ನಿಮಿತ್ಯವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ಕೇಕ್ ಕತ್ತರಿಸಲಾಯಿತು. 

ಬಳಿಕ ಮಾತನಾಡಿ, ಡಾ. ಮಲ್ಲಿಕಾರ್ಜುನ ಖರ್ಗೆ ಅವರು 9 ಬಾರಿ ಶಾಸಕರಾಗಿ ರಾಜ್ಯ ಸರಕಾರಗಳಲ್ಲಿ ಹಲವು ಖಾತೆಗಳಿಗೆ ಸಚಿವರಾಗಿ ರಾಜ್ಯ ಮತ್ತು ಜಿಲ್ಲೆಗೆ ಬಹುದೊಡ್ಡ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಕೇಂದ್ರ ರೈಲ್ವೆ ಮತ್ತು ಕಾರ್ಮಿಕ ಖಾತೆಗಳ ಸಚಿವರಾಗಿ ಕಲ್ಯಾಣ ಕರ್ನಾಟಕ ಭಾಗದ ಕುಡು ಬಡವರಿಗೆ ಒಳ್ಳೆಯ ಆರೋಗ್ಯ ಸೇವೆ ಸಿಗಲಿ ಎಂಬ ದೃಷ್ಠಿಯಿಂದ ಬೃಹತಕಾರವಾಗಿ ಕಾರ್ಮಿಕರಿಗಾಗಿ ಇಎಸ್ ಐ ಆಸ್ಪತ್ರೆ ನಿರ್ಮಾಣ ಮಾಡಿ ಸೇವೆಗೆ ಅರ್ಪಿಸಿದರು. ಈ ಭಾಗದ ಶಿಕ್ಷಣ ಮತ್ತು ಉದ್ಯೋಗ ವೃದ್ಧಿಗೊಳಿಸಲು 371 ಜೆ ಕಾಯ್ದೆ ಜಾರಿಗೆ ತಂದು ಪ್ರತಿಯೊಬ್ಬರಿಗೂ ಮೀಸಲಾತಿಯನ್ನು ಕಲ್ಪಿಸಿ ಉನ್ನತ ಮಟ್ಟದ ವ್ಯಾಸಂಗ ಮತ್ತು ಹುದ್ದೆಗಳು ಅಲಂಕರಿಸಲು ಅನುವು ಮಾಡಿಕೊಟ್ಟಿರುವ ಮಹಾನ ನಾಯಕರು ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಆಗಿದ್ದು, ದೇಶದ ಪ್ರಧಾನಿ ಮಂತ್ರಿ ಹುದ್ದೆ ಅಲಂಕರಿಸುವ ಶಕ್ತಿ ಸಾಮರ್ಥ್ಯ ಹೊಂದಿದ್ದಾರೆ. ಖರ್ಗೆ ಅವರ ರಾಜಕೀಯ ಸಿದ್ದಾಂತಗಳು ಮತ್ತು ಅಭಿವೃದ್ಧಿ ಪರ ಚಿಂತನೆ ದೃಷ್ಠಿಕೋನಗಳು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದರು. 

ಕಾಂಗ್ರೆಸ ಪಕ್ಷ ಹಿರಿಯ ಮುಖಂಡ ಬಾಬುರಾವ ಪಾಟೀಲ, ಬ್ಲಾಕ್ ಅಧ್ಯಕ್ಷ ಬಸವರಾಜ ಮಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಟಿಎಚ್ಓ ಡಾ. ಗಫಾರ್, ಜಗನ್ನಾಥ ಗುತ್ತೇದಾರ, ನಾಗೇಶ ಗುಣಾಜಿ, ವಿಶ್ವನಾಥ ಹೊಡೆಬೀರನಳ್ಳಿ, ಜಗನ್ನಾಥ ಕಟ್ಟಿ, ಆರ್ ಗಣಪತರಾವ, ಲಕ್ಷ್ಮಣ ಆವಂಟಿ, ಸುರೇಶ ಭಂಟ, ಸಂತೋಷ ಗುತ್ತೇದಾರ, ಹಾದಿ, ಅಯೂಬ್ ಖಾನಸಾಬ್, ಶಬೀರ್, ಮಾಸ್ತನ್ ಹಾಸೊಳ್ಳಿ, ಮಸೂದ್ ಸೌದಾಗಾರ, ಶೇಕ್ ಫರೀದ್, ಸೋಮಶೇಖರ ಕರಕಟ್ಟಿ, ಗೋಪಾಲ ಗಾರಂಪಳ್ಳಿ,ಚಾಂದ ಪಾಶಾ ಅವರು ಉಪಸ್ಥಿತರಿದರು.