ಮಾತೃ ಸುರಕ್ಷಾ ಆಯಪ್ ಉದ್ಘಾಟನೆ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ನೆರವೇರಿಸಿದರು

ಮಾತೃ ಸುರಕ್ಷಾ ಆಯಪ್ ಉದ್ಘಾಟನೆ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ನೆರವೇರಿಸಿದರು

ಮಾತೃ ಸುರಕ್ಷಾ ಆಯಪ್ ಉದ್ಘಾಟನೆ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ನೆರವೇರಿಸಿದರು

ಕಲಬುರಗಿ: ನಗರದ ಬಿ.ಟಿ.ಜಿ.ಎಚ್. ಅಡಿಟೋರಿಯಮ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ *ಮಾತೃ ಸುರಕ್ಷಾ ಆಯಪ್*‌ನ್ನು ಕಲಬುರಗಿಯ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಡಾ. ಅನೀತಾ ಗೌರಾ ಕೋಣಿನ್, ಡಾ. ಶರಣಬಸಪ್ಪ ಹರವಾಳ, ಡಾ. ಕಿರಣ ದೇಶಮುಖ ಸೇರಿದಂತೆ ಹಲವಾರು ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಆಯಪ್ ಮೂಲಕ ಗರ್ಭಿಣಿಯರು ಮತ್ತು ಹೆತ್ತಮಕ್ಕಳ ಆರೋಗ್ಯದ ಮೇಲ್ವಿಚಾರಣೆಯು ಸುಗಮವಾಗಲಿದ್ದು, ತಾಂತ್ರಿಕ ಸಹಾಯದೊಂದಿಗೆ ತ್ವರಿತ ಸೇವೆಗಳು ಲಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---