ಪುರಾಣ ಪ್ರವಚನ ಕೇಳುವುದರಿಂದ ನಮ್ಮ ಬಾಳು ಹಸನಾಗುತ್ತದೆ:ಬಸವರಾಜ ದೇಶಮುಖ

ಪುರಾಣ ಪ್ರವಚನ ಕೇಳುವುದರಿಂದ ನಮ್ಮ ಬಾಳು ಹಸನಾಗುತ್ತದೆ:ಬಸವರಾಜ ದೇಶಮುಖ
ಕಲಬುರಗಿ: ಮನುಷ್ಯನಲ್ಲಿ ಭಕ್ತಿ ಭಾವನೆ ಮೂಡಬೇಕಾದರೆ ಒಂದು ತಿಂಗಳ ಪ್ರಯಂತ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಬೇಕು ಪುರಾಣ ಪ್ರವಚನ ಕೇಳಬೇಕು,ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾದ ಬಸವರಾಜ್ ದೇಶಮುಖ ಹೇಳಿದರು, ಅವರು ಇಲ್ಲಿನ ಬ್ರಹ್ಮಪುರ ಬಡಾವಣೆಯ ನಿಜಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ ಗಂಗಾನಗರ ವತಿಯಿಂದ ಶ್ರಾವಣ ಮಾಸ ಅಂಗವಾಗಿ ಒಂದು ತಿಂಗಳ ಪರ್ಯಂತ ನಡೆಯಲಿರುವ ಸೊಲ್ಲಾಪುರದ (ಸೊನ್ನಲಗಿ) ಶಿವಯೋಗಿ ಸಿದ್ದರಾಮೇಶ್ವರ ಪುರಾಣ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು , ಇಲ್ಲಿ ನಡೆಯುತ್ತಿರುವ ಸೋಲಾಪುರ ಶಿವಯೋಗಿ ಸಿದ್ದರಾಮೇಶ್ವರ ಪುರಾಣ ಕೇಳುವುದರಿಂದ ದೇವರ ಆಶೀರ್ವಾದ ಪಡೆಯುವುದರ ಜೊತೆಗೆ ನಮ್ಮ ಬಾಳು ಸಹ ಹಸನಾಗುತ್ತದೆ ಎಂದರು.
ಇಲ್ಲಿನ ಗಂಗಾ ನಗರದ ಜೈ ಹನುಮಾನ ದೇವಸ್ಥಾನ ಆವರಣದಲ್ಲಿ ಸಂಗೀತ ವೈಭವದೊಂದಿಗೆ ಗುರುವಾರ ಸಂಜೆ ಮಹಾಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯೆಯರಾದ ಶ್ರೀಮತಿ ಅನುಪಮ ಆರ್. ಕಮಕನೂರ, ಅಭಿಷೇಕ್ ಅಲ್ಲಮ ಪ್ರಭು ಪಾಟೀಲ್. ರೇಣುಕಾ ಆರ್. ಗುಮ್ಮಟ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸುಂಟನೂರಿನ ರೇವಣಯ್ಯ ಶಾಸ್ತ್ರಿಗಳು, ಮಾಜಿ ಮಹಾನಗರ ಪಾಲಿಕೆ ಸದಸ್ಯ ರಾದ ರಮೇಶ ಕಮಕನೂರ ಉಪಸ್ಥಿತರಿದ್ದರು.
ಗದಗನ ವೀರೇಶ್ವರ ಪುಣ್ಯಾಶ್ರಮದ ಪಂಡಿತ ವೀರೇಶ ಶಾಸ್ತ್ರೀಗಳು ಮಲಕೂಡ ಪುರಾಣ ಪ್ರವಚನ ನಡೆಸಿಕೊಟ್ಟರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ, ಸಂಗೀತ ಸೇವೆ, ಮಹಾಂತೇಶ ಹರವಾಳ ತಬಲಾ ಸಾತ ನೀಡಿದರು, ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ ಗಂಗಾನಗರ ಅಧ್ಯಕ್ಷರಾದ ಅಶೋಕ ಬಿದನೂರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕೂಡಿ, ಶ್ರೀಕಾಂತ ಆಲೂರ, ಸಂತೋಷ ಹುಳಗೇರಿ, ಅಮೃತ ಎಚ್. ಡಿಗ್ಗಿ, ರಾಯಪ್ಪ ಹೊನಗುಂಟಿ, ಜಗದೇವಪ್ಪ ನಡುವಿನಹಳ್ಳಿ, ಶಾಂತಪ್ಪ ಕೂಡಿ, ವಿಜಯಕುಮಾರ ಹದಗಲ್, ಮಹಾದೇವಪ್ಪ ಮಣ್ಣುರ,ಶರಣಪ್ಪ ಗುಡೂರ್, ಅನಿಲ್ ಎನ್ ಕೂಡಿ, ಶರಣು ಎಸ್ ಕೌಲಗಿ. ಬಾಬಾ ಸಾಹೇಬ್ ಎಸ್ ಕೂಡಿ, ಉಮೇಶ್ ವಿ.ಹದಗಲ್, ಸೇರಿ ಅನೇಕರು ಇದ್ದರು.