ಅರಣಾ ನರೇಂದ್ರರ ಎರಡು ಕೃತಿ ಲೋಕಾರ್ಪಣೆ ಪರಿಸರದಿಂದ ಉತ್ತಮ ಸಾಹಿತ್ಯ ಸಾಧ್ಯ-ಪ್ರೊ.ಕೆ. ರವೀಂದ್ರನಾಥ

ಅರಣಾ ನರೇಂದ್ರರ ಎರಡು ಕೃತಿ ಲೋಕಾರ್ಪಣೆ  ಪರಿಸರದಿಂದ ಉತ್ತಮ ಸಾಹಿತ್ಯ ಸಾಧ್ಯ-ಪ್ರೊ.ಕೆ.  ರವೀಂದ್ರನಾಥ

ಅರಣಾ ನರೇಂದ್ರರ ಎರಡು ಕೃತಿ ಲೋಕಾರ್ಪಣೆ

ಪರಿಸರದಿಂದ ಉತ್ತಮ ಸಾಹಿತ್ಯ ಸಾಧ್ಯ-ಪ್ರೊ.ಕೆ. 

ರವೀಂದ್ರನಾಥ

ಕೊಪ್ಪಳ: ಸಮಾಜ,ಶಿಕ್ಷಣ,ಮನೆತನದ ಮೂಲಕ ಸಾಹಿತ್ಯ ರಚಿಸಿದ ಅರುಣಾ ನರೇಂದ್ರ ಪಾಟೀಲ ಅವರ ಕಾರ್ಯ ಸ್ತುತ್ತ್ಯಾರ್ಹ.ಅವರ‌ ಮೇಲೆ ವಚನ,ಕೀರ್ತನೆ,ತತ್ವಪದ,ಅನು ಭಾವಿಕ‌ ನೆಲೆಗಳು ಪ್ರಭಾವ ಬೀರಿವೆ.ಉತ್ತಮ ಸಾಹಿತ್ಯ ರಚನೆಗೆ ಅವರ ಪರಿಸರ ಕಾರಣ ಎಂದು ವಿಶ್ರಾಂತ ಪ್ರಾಧ್ಯಾಪಕ,ವಿದ್ವಾಂಸರಾದ ಪ್ರೊ.ಕೆ.ರವೀಂದ್ರನಾಥ ಅಭಿಮತ ವ್ಯಕ್ತಪಡಿಸಿದರು

       ತಾಲೂಕು ಪಂಚಾಯತ ಸಭಾಂಗಣದಲ್ಲಿ ಸಿದ್ಧಾರ್ಥ ಪ್ರಕಾಶನ ಏರ್ಪಡಿಸಿದ ಅರುಣಾ ನರೇಂದ್ರ ಅವರ ಎರಡು ಕೃತಿಗಳ ಲೋಕಾರ್ಪಣೆ, ಸನ್ಮಾನ,ಮತ್ತು ಕವಿಗೋಷ್ಠಿ ಸಮಾರಂಭದಲ್ಲಿ ಎರಡು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ ಮನುಷ್ಯ ಸಂಬಂಧ ಪ್ರಚಲಿತ,ವಸ್ತು,ವಿಷಯ, ಸಾಮಾಜಿಕ ಚಿಂತನೆಯ ಗಜಲ್ ಮಕ್ಕಳ ಕೃತಿ ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದರು.

      ಚಂದಿರನಿಲ್ಲದ ಬಾನಿನಲ್ಲಿ ಗಜಲ್ ಕೃತಿಯಲ್ಲಿನ ಗಜಲ್ 

ಇವುಗಳಲ್ಲಿ ಸಾಮಾಜಿಕ, ವಿರಹದ ವೇದನೆ,ಪ್ರೀತಿ,ಗಜಲ್ ಮಾಗಿದ ಅನುಭವಗಳು ವ್ಯಕ್ತವಾಗಿವೆ ಎಂದು ಗಜಲ್ ಕವಿ ಅಬ್ದುಲ್ ಹೈ ತೋರಣಗಲ್ಲ ನುಡಿದರು.

        ಕಮಲಿಯ ಕುರಿಮರಿ ಮಕ್ಕಳ ಕವನದಲ್ಲಿ ಇಂದಿನ ಪ್ರಚಲಿತ ವಸ್ತು,ವಿಷಯದ ವೈವಿಧ್ಯಮಯ ಮಕ್ಕಳ ಕಾವ್ಯ ಪ್ರಾಸ,ಲಯ,ಹಾಡುಗಾರಿಕೆಯ ಮೂಲಕ ಸರಳ,ಭಾಷೆ ಯಿಂದ ಗಮನಸೆಳೆಯುವ ಸಂಕಲನವೆಂದು ಡಾ.ಗವಿಸಿದ್ಧ ಪ್ಪ ಪಾಟೀಲ ನುಡಿದರು

        ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಗಜಲ್ ಪ್ರೀತಿ,ಪ್ರೇಮ,ಸಖಿ ಮೂಲಕ ಅಂತರಂಗ ಪ್ರವೇಶಿಸುವ ಕಾವ್ಯದ ರಾಣಿ ಎಂದರು ಮಂಜುನಾಥ ಗೊಂಡಬಾಳ ಮಾತನಾಡಿ ಸಮಕಾಲೀನ ಸ್ಪಂದನೆಯ ಕೃತಿ ಮಹತ್ವ ಎಂದರು.

   ಖ್ಯಾತ ಪ್ರಬಂಧಕಾರ ಬೆಂಗಳೂರಿನ ಈರಪ್ಪ ಕಂಬಳಿ ಗಜಲ್ ಮತ್ತು ಮಕ್ಕ ಳ ಕಾವ್ಯ ಏಕಕಾಲದಲ್ಲಿ ಪ್ರಖರ ಸಾಹಿತಿಗಳಾದ ಅರುಣಾ ಅವರ ಸೃಜನಶೀಲ ಕಾವ್ಯ ಗಮನ ಸೆಳೆಯುವುದು ಅವರಿಂದ ಬರವಣಿಗೆ ನಿರೀಕ್ಷೆಯಲ್ಲಿದ್ದೇವೆ ಎಂದರು

    ರಾಜಕೀಯ ಧುರೀಣವ ಜಗದೀಶ ಸಿಂಗನಾಳ ಸಸಿಗೆ ನಿರೇವವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವನಾಥ ಅಗಡಿ,ಗವಿಸಿದ್ಧಪ್ಪ ಸಳವಂಡಿ ವೇದಿಕೆ ಮೇಲೆ ಉಪಸ್ಥಿತಿ ಇದ್ದರು.ಕವಯತ್ರಿ ಅರುಣಾ ನರೇಂದ್ರ ಸ್ವಾಗತಿಸಿ- ಪ್ರಾಸ್ತಾವಿಕ ನುಡಿ ಆಡಿದರು.ಅನ್ನಪೂರ್ಣ ಮನ್ನಾಪೂರ,ಮೈಲಾರಪ್ಪ ಬೂದಿ ಹಾಳ,ಪದ್ಮಾ ಜೆ.ಕಬಾಡಿ ಪ್ರಾರ್ಥನೆ, ಹಾಡು ಆಡಿದರು. ಡಾ.ಪಾರ್ವತಿ ಕನಕಗಿರಿ ನಿರೂಪಿಸಿ ವಂದಿಸಿದರು.

ಕವಿಗೋಷ್ಠಿಯಲ್ಲಿ ಸಿಕಿಂದರ್ ಮೀರ್ ಅಲಿ,ಶಿಲ್ಪಾ ಮ್ಯಾಗೇ ರಿ,ರುದ್ರಪ್ಪ ಭಂಡಾರಿ ಮಾತನಾಡಿದರು.ನೂರ್ ಜಹಾನ್,ಮೈಲಾರಪ್ಪ ಬೂದಿಹಾಳ,ಖಾಜಾಬಿ,ನೀಲಮ್ಮ ಅಂಗಡಿ,ಸಿ.ಎಂ.ಚನ್ನಬಸಪ್ಪ, ಪದ್ಮಾ ಜೆ.ಕಬಾಡಿ,ರೇಖಾ ನಾಲ್ವಾಡ,ಅನಸೂಯಾ ಜಾಗೀರದಾರ,ಡಾ.ಮಹಾಂತೇಶ ನೆಲಗಡೆ,ಡಾ.ಕವಿತಾ ಹ್ಯಾಟಿ,ಅನ್ನಪೂರ್ಣ ಪದ್ಮಶಾಲಿ, ಶಿವ ಪ್ರಸಾದ ಹಾದಿಮನಿ,ಬಾಲನಾಗಮ್ಮ,ಮಹಾಂತೇಶ ಬೆರಗಣ್ಣನವರ,ಪುಪ್ಪಲತಾ ಏಳುಬಾವಿ,ಮಂಜುಳಾ ಸ್ಯಾವಿ ಸುಮಂಗಲಾ ಹಂಚಿನಾಳ,ಸೋಮಲಿಂಗಪ್ಪ ಬೆಣ್ಣೆ,ಸುರೇಶ ಕಂಬಳಿ,ಅನ್ನಪೂರ್ಣ ಮನ್ನಾಪುರ,ವೀರೇಶ ಕುರಿ, ನಿಂಗಮ್ಮ ಪಟ್ಟಣಶೆಟ್ಟಿ, ಎ.ಪಿ.ಅಂಗಡಿ,ಈರಪ್ಪ ಬಿಜಲಿ,ಶಾರದಾ ರಜತಪೂರ,ಗಂಗಾಧರ ಖಾನಾಪುರ, ಹನುಮವ್ಬ,ಡಾ.ಪಾರ್ವತಮ್ಮ ಕನಕಗಿರಿ,ಬಸವರಾಜ ಚೌಡ್ಕಿ,ಗೀತಾ ಹಂಚಿ,ಶರಣಬಸಪ್ಪಬಿಳಿಮಲೆ,ಕುಬೇರ ಮಜ್ಜಗಿ,ಶಿಲ್ಪ ಗಣಾಚಾರಿ,ಕಸ್ತೂರಬಾಯಿ,ಅನಸೂಯಾ ಮೊದಲಾದವರು ಕವನ ವಾಚಿಸಿದರು.

      ಅಧ್ಯಕ್ಷತೆ ವಹಿಸಿದ ಸಾಹಿತಿ ಅಕ್ಬರ್ ಸಿ.ಕಾಲಿಮಿರ್ಚಿ ಸೃಜನಶೀಲ ಕಾವ್ಯ ಧ್ಯಾನಸ್ಥ ಮನಸ್ಸಿನಿಂದ ಕಾವ್ಯ ರಚಿಸಿ ದರೆ ಕಾವ್ಯ ಕನ್ನಿಕೆ ಒಲಿಯುವಳು ಎಂದರು.ಇಲ್ಲಿಯ ಕವಿಗಳು ವಾಚ್ಯತೆ ಬಿಟ್ಟರೆ ಉಳಿದೆಲ್ಲ ಕಾವ್ಯ ಓದುಗರ ಗಮನಸೆಳೆದಿವೆ ಎಂದರು. ಪವನ ಕಮ್ಮಾರ‌ ನಿರೂಪಿಸಿದರು ಸಂಚಾಲಕ ನರೇಂದ್ರ ಪಾಟೀಲ ವಂದಿಸಿದರು.