ಹಿಂದವಿ ಹೃದಯ ಸಾಮ್ರಾಟ್ ಬಾಳಾ ಸಾಹೇಬ್ ಠಾಕ್ರೆ ಕೃತಿ ಲೋಕಾರ್ಪಣೆ
ಹಿಂದವಿ ಹೃದಯ ಸಾಮ್ರಾಟ್ ಬಾಳಾ ಸಾಹೇಬ್ ಠಾಕ್ರೆ ಕೃತಿ ಲೋಕಾರ್ಪಣೆ
“ಹಿಂದವಿ ಹೃದಯ ಸಾಮ್ರಾಟ್ ಬಾಳಾ ಸಾಹೇಬ್ ಠಾಕ್ರೆ” ಕೃತಿ ಬಿಡುಗಡೆ
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಕೇಂದ್ರ ಕಚೇರಿಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಅಂಗವಾಗಿ, ಅಂಬುಜಾತನಯ ಅವರ ರಚನೆಯ “ಹಿಂದವಿ ಹೃದಯ ಸಾಮ್ರಾಟ್ ಬಾಳಾ ಸಾಹೇಬ್ ಠಾಕ್ರೆ” ಕೃತಿಯನ್ನು ಪರಿಷತ್ ರಾಜ್ಯಾಧ್ಯಕ್ಷರಾದ ಎಸ್. ಸುರೇಶ್ ರಾವ್ ಸಾಟೆ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಪರಿಷತ್ ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಎಸ್.ಆರ್. ಸಿಂಧೆ, ಪ್ರಧಾನ ಕಾರ್ಯದರ್ಶಿ ಸುನಿಲ್ ರಾವ್ ಚೌಹಾಣ್, ಖಜಾಂಚಿ ವೆಂಕಟರಾವ್ ಚೌಹಾಣ್, ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್, ಮರಾಠ ಪತ್ರಿಕೆಯ ಸಂಪಾದಕ ವಿಠಲ್ ರಾವ್ ಗಾಯಕವಾಡ್,ಹಿರಿಯ ಲೇಖಕ ಆನೇಕಲ್ ನ ಎಸ್. ಜಗನ್ನಾಥ್ ರಾವ್ ಬಹುಳೆ,ಸಾಧನಾ ಪ್ರಕಾಶನದ ಕೆ. ರವಿಚಂದ್ರರಾವ್ ಹಾಗೂ ಪರಿಷತ್ತಿನ ಬೆಂಗಳೂರು ವಿಭಾಗದ ಸದಸ್ಯರು ಉಪಸ್ಥಿತರಿದ್ದರು.
ಕೃತಿ ಕುರಿತು
ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಹಿಂದವಿ ರಾಷ್ಟ್ರದ ದೃಷ್ಟಾಂತವಾಗಿ ಅಳವಡಿಸಿಕೊಂಡು, ಮಹಾರಾಷ್ಟ್ರದ ಹಿತಕ್ಕಾಗಿ ಶಿವಾಜಿ ಪಾಲನೆಯನ್ನು ಅನುಸರಿಸಿದ ಬಾಳಾ ಸಾಹೇಬ್ ಠಾಕ್ರೆ ಅವರು ದೇಶ ಕಂಡ ವರ್ಣರಂಜಿತ ಹಾಗೂ ಪ್ರಭಾವಶಾಲಿ ವ್ಯಕ್ತಿತ್ವವಾಗಿದ್ದರು. ಈ ಕೃತಿಯಲ್ಲಿ ಅವರ ರಾಜಕೀಯ–ಸಾಂಸ್ಕೃತಿಕ ದೃಷ್ಟಿಕೋನಗಳು, ಮಹಾರಾಷ್ಟ್ರ–ಕರ್ನಾಟಕ ಬಾಂಧವ್ಯ ಸೇರಿದಂತೆ ವಿವಿಧ ಆಯಾಮಗಳಿಂದ ವ್ಯಕ್ತಿತ್ವ ವಿಶ್ಲೇಷಣೆ ನಡೆಸಲಾಗಿದೆ. ಜನ್ಮ ಶತಮಾನದ ಸಂಭ್ರಮದಲ್ಲಿರುವ ಠಾಕ್ರೆ ಬದುಕಿನ ಅನೇಕ ಆಯಾಮಗಳಿಗೆ ಈ ಕೃತಿ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತದೆ ಎಂಬ ಅಭಿಪ್ರಾಯವನ್ನು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ವ್ಯಕ್ತಪಡಿಸಿದ್ದಾರೆ .
