ಕ್ಷೌರಿಕ ಸಮಾಜದ ಹೇರ್ ಸಲೂನ್‌ಗಳು ಜುಲೈ 22ರಂದು ತೆರೆದಿರಲಿವೆ ಶ್ರಾವಣ ಮಾಸದ ನಾಗರ ಅಮಾವಾಸ್ಯೆ ಹಿನ್ನೆಲೆ

ಕ್ಷೌರಿಕ ಸಮಾಜದ ಹೇರ್ ಸಲೂನ್‌ಗಳು ಜುಲೈ 22ರಂದು ತೆರೆದಿರಲಿವೆ ಶ್ರಾವಣ ಮಾಸದ ನಾಗರ ಅಮಾವಾಸ್ಯೆ ಹಿನ್ನೆಲೆ

ಕ್ಷೌರಿಕ ಸಮಾಜದ ಹೇರ್ ಸಲೂನ್‌ಗಳು ಜುಲೈ 22ರಂದು ತೆರೆದಿರಲಿವೆ

ಶ್ರಾವಣ ಮಾಸದ ನಾಗರ ಅಮಾವಾಸ್ಯೆ ಹಿನ್ನೆಲೆ

ಕಲಬುರಗಿ: ಶ್ರಾವಣ ಮಾಸದ ಪ್ರಯುಕ್ತ ಜುಲೈ 24, ಗುರುವಾರದಂದು ನಾಗರ ಅಮಾವಾಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ, ಕಲಬುರಗಿ ಜಿಲ್ಲೆಯಲ್ಲಿ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಎಲ್ಲ ಹೇರ್ ಸಲೂನ್ ಅಂಗಡಿಗಳು ಜುಲೈ 22, ಮಂಗಳವಾರದಂದು ತೆರೆದಿರಲಿವೆ ಎಂದು ಜಿಲ್ಲಾ ಸಂಘಟನೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಮಂಗಳವಾರದಂದು ಬಾಗಿಲು ಮುಚ್ಚುವ ಪದ್ಧತಿಯು ಇದ್ದರೂ ಈ ಬಾರಿ ಶ್ರಾವಣ ಮಾಸದ ಆಚರಣೆಯ ಹಿನ್ನೆಲೆಯಲ್ಲಿ ಅಸಾಧಾರಣ ಕ್ರಮವಾಗಿ ಒಂದು ದಿನ ಮಾತ್ರ - ಜುಲೈ 22ರಂದು  ಕಾರ್ಯನಿರ್ವಹಿಸಲಿವೆ.

ಈ ನಿರ್ಧಾರವನ್ನು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಅಧ್ಯಕ್ಷ ಈರಣ್ಣಾ ಸಿ. ಹಡಪದ (ಸಣ್ಣೂರ), ಗೌರವಾಧ್ಯಕ್ಷ ಬಸವರಾಜ ಹಡಪದ (ಸುಗೂರ ಎನ್.), ಕಾರ್ಯಾಧ್ಯಕ್ಷ ಭಗವಂತ ಹಡಪದ (ಕಿರಣಗಿ), ಪ್ರಧಾನ ಕಾರ್ಯದರ್ಶಿ ರಮೇಶ್ ನೀಲೂರ, ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಹಾಗೂ ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ ಅವರ ಸಲಹೆ ಮೇರೆಗೆ ತೆಗೆದುಕೊಳ್ಳಲಾಗಿದೆ.

ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ (ಸುಗೂರ ಎನ್.) ಅವರು ಈ ಬಗ್ಗೆ ಮಾಹಿತಿ ನೀಡಿದ್ದು, “ನಾಗರ ಅಮಾವಾಸ್ಯೆ ದಿನದಂದು ಜನಸಾಮಾನ್ಯರಿಗೆ ಸಮಯಕ್ಕೆ ಸೇವೆ ಲಭ್ಯವಾಗಬೇಕೆಂಬ ಉದ್ದೇಶದಿಂದ ಜುಲೈ 22 ಮಂಗಳವಾರದಂದು ಎಳ್ಳೂ ಕ್ಷೌರಿಕ ಅಂಗಡಿಗಳು ತೆರೆದಿರುತ್ತವೆ. ನಂತರದ ಮಂಗಳವಾರಗಳಲ್ಲಿ ಎಂದಿನಂತೆ ಅಂಗಡಿಗಳು ಬಂದ್ ಇರುತ್ತವೆ,” ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸಿ ಈ ಆಚರಣಾ ಕಾಲದಲ್ಲಿ ಸಮಾಜದ ನಿರ್ಣಯಗಳಿಗೆ ಬೆಂಬಲ ನೀಡಬೇಕೆಂದು ಸಂಘಟನೆಯವರು ಮನವಿ ಮಾಡಿದ್ದಾರೆ.