ಖರ್ಗೆ ಸಾಹೇಬರ 83ನೇ ಜನ್ಮದಿನದ ಅಂಗವಾಗಿ NSUI ವತಿಯಿಂದ ರಕ್ತದಾನ ಶಿಬಿರ

ಖರ್ಗೆ ಸಾಹೇಬರ 83ನೇ ಜನ್ಮದಿನದ ಅಂಗವಾಗಿ NSUI ವತಿಯಿಂದ ರಕ್ತದಾನ ಶಿಬಿರ
ಕಲಬುರಗಿ: ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ (AICC) ಅಧ್ಯಕ್ಷರು ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು NSUI ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಭಾನುವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ಶಿಬಿರದ ಉದ್ವೇಶ್ಯ ಮಾತ್ರ ರಕ್ತದಾನವಲ್ಲದೆ, ಅದರ ಮಹತ್ವವನ್ನು ಜನತೆಗೆ ಅರಿವು ಮೂಡಿಸಾಯಿತು.“ಒಬ್ಬ ವ್ಯಕ್ತಿಯ ರಕ್ತದಾನದಿಂದ ಮೂರು ಜೀವಗಳನ್ನು ಉಳಿಸಬಹುದು. ಇದು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ, ಕ್ಯಾನ್ಸರ್ ಹಾಗೂ ಬಿಪಿ ನಿಯಂತ್ರಣದಲ್ಲಿ ಇಡಬಹುದು, ದೇಹದ ತೂಕವನ್ನು ನಿಯಂತ್ರಿಸಬಹುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು” ಎಂಬ ಅರಿವು ಶಿಬಿರದ ಮೂಲಕ ಪ್ರಚಾರ ಮಾಡಲಾಯಿತು.
NSUI ಜಿಲ್ಲಾಧ್ಯಕ್ಷ ಡಾ. ಗೌತಮ ಕರಿಕಲ್ ಮಾತನಾಡಿ, “ದಾನಿಗಳು ಸ್ವಯಂಪ್ರೇರಿತರಾಗಿ ಈ ಶಿಬಿರದಲ್ಲಿ ಭಾಗವಹಿಸಿದ್ದು ಖರ್ಗೆ ಸಾಹೇಬರ ಹುಟ್ಟುಹಬ್ಬಕ್ಕೆ ನಿಜವಾದ ಸಾಮಾಜಿಕ ಉಡುಗೊರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ GDA ಅಧ್ಯಕ್ಷ ಮಜರ್ ಅಲಂಖಾನ್, HKE ಸೊಸೈಟಿಯ ಸದಸ್ಯ ಡಾ. ಕಿರಣ್ ದೇಶಮುಖ್, ಅಭಿಷೇಕ್ ಅಲ್ಲಮಪ್ರಭು ಪಾಟೀಲ್, ಮಹಿಳಾ ಅಧ್ಯಕ್ಷ ರೇಣುಕಾ ಸಿಂಗೆ, ಕಾಂಗ್ರೆಸ್ ಮುಖಂಡರು ನೀಲಕಂಠರಾವ್ ಮೂಲಗೆ, ಪ್ರವೀಣ ಪಾಟೀಲ್ ಹರವಾಳ, ಮಾಜಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಈರಣ್ಣ ಜಳಕಿ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ, ಡಾ. ಸತೀಶ್ ಬೆಲಗಟ್ಟಿ, ಭೀಮರಾವ್ ಮೇಳಕುಂದ, ಶಕೀಲ್ ಸರಡಗಿ, ಮಹೇಂದ್ರ ನಾಯ್ಡು, ಬ್ಲಾಕ್ ಯುವ ಅಧ್ಯಕ್ಷ ರಾಜು ಮಾಳಗೆ, ಉಪಾಧ್ಯಕ್ಷ ಸಂಪೂರ್ಣ ಪಾಟೀಲ್, ಫಾರುಕ್ ಮನಿಯಾರ್, ಸಂಜಯ್ ಪಾಟೀಲ್, NSUI ಪದಾಧಿಕಾರಿಗಳಾದ ಅಂಕಿತಾ (ಚಿಂಚೋಳಿ), ಶ್ರೀಶೈಲ್ (ಜೇವರ್ಗಿ), ನಾಗರಾಜ (ಕಮಲಾಪುರ) ಸೇರಿದಂತೆ ಹಲವರು ಭಾಗವಹಿಸಿದ್ದರು.
ಇತಡಾಗಿ, ಡಾ. ಅತ್ತರ್, ಡಾ. ಐಶ್ವರ್ಯ, ಡಾ. ಅನೀಲ್, ಡಾ. ಅಬ್ದುಲ್ ಹಕಿಂ ಅತ್ತರ್, ಪ್ರದೀಪ್ ಮತ್ತು ಇಎಸ್ಐಸಿ ಮೆಡಿಕಲ್ ಕಾಲೇಜಿನ ಸಿಬ್ಬಂದಿ ವರ್ಗ, ಮುಖಂಡರು, ಸಮಾಜ ಸೇವಕರು, ಹೋರಾಟಗಾರರು, ಖರ್ಗೆ ಅಭಿಮಾನಿಗಳು, ಗುಲ್ಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ NSUI ಕಾರ್ಯಕರ್ತರು ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
NSUI ಕಲಬುರಗಿ ಜಿಲ್ಲಾ ಘಟಕ