ತಾಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶ ಕುಸಿತಕ್ಕೆ ಜಿಲ್ಲಾ ಮಟ್ಟದ ಅಧಿಕಾರಿ ಮತ್ತು ಶಿಕ್ಷಕ ವರ್ಗವೇ ಕಾರಣ

ತಾಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶ ಕುಸಿತಕ್ಕೆ ಜಿಲ್ಲಾ ಮಟ್ಟದ ಅಧಿಕಾರಿ ಮತ್ತು ಶಿಕ್ಷಕ ವರ್ಗವೇ ಕಾರಣ

ತಾಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶ ಕುಸಿತಕ್ಕೆ ಜಿಲ್ಲಾ ಮಟ್ಟದ ಅಧಿಕಾರಿ ಮತ್ತು ಶಿಕ್ಷಕ ವರ್ಗವೇ ಕಾರಣ 

ಚಿಂಚೋಳಿ :   ಪ್ರತಿವರ್ಷ ಚಿಂಚೋಳಿ ತಾಲೂಕಿನ 10ನೇ ತರಗತಿ ಫಲಿತಾಂಶ, ಸತತವಾಗಿ ಕುಸಿತ ಕಂಡರು ಸಹಿತ ಜಿಲ್ಲಾ ಮಟ್ಟದ ಅಧಿಕಾರಿಗಳು ಚಿಂಚೋಳಿ ಕಡೆಗೆ ಗಮನಿಸಿ, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಾಲೂಕ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಅವರು ದೂರಿದ್ದಾರೆ. 

ವೈಜ್ಞಾನಿಕ ಶಿಕ್ಷಣ ಬೋಧನೆಗೆ ಶಿಕ್ಷಕರು ಗಮನಹರಿಸುತಿಲ್ಲ. ಕೇವಲ ಬೀಸಿ ಉಟದ ಜವಾಬ್ದಾರಿ ಕೊಟ್ಟಿದ್ದರಿಂದ, ಶಿಕ್ಷಕರು ಅದರಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಮತ್ತು ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದ್ದರೂ ಸರ್ಕಾರ ಶಿಕ್ಷಕರನ್ನು ಕಳುಹಿಸುತ್ತಿಲ್ಲ. ಇದ್ದ ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಂಡು ಭೋದನೆ ಮಾಡದೇ ಇರುವ ಕಾರಣಕ್ಕಾಗಿ, ಆರ್ಥಿಕವಾಗಿ ಬಲಿಷ್ಠರು ಇರುವವರು ಬೇರೆ ಜಿಲ್ಲೆಗಳಿಗೆ ತಮ್ಮ ಮಕ್ಕಳನ್ನು ಶಿಕ್ಷಣಕ್ಕೆ ಕಳುಹಿಸುತ್ತಿದ್ದಾರೆ. ಬಡವರ ಮಕ್ಕಳು ಏನು ಮಾಡಬೇಕು ? ಲಕ್ಷ ಲಕ್ಷ ಸಂಬಳ ತೆಗೆದುಕೊಳ್ಳುವ ಶಿಕ್ಷಕರು ಕೇವಲ ಕಾಟಾಚಾರಕ್ಕೆ ಶಾಲೆಗೆ ಬಂದು ಬೋದನೆ ಮಾಡಿ, ತಮ್ಮ ಜವಾಬ್ದಾರಿಯಿಂದ ಮುಕ್ತರಾಗುತಿದ್ದಾರೆ. ಒಟ್ಟಾರೆಯಾಗಿ ತಾಲೂಕಿನ ಫಲಿತಾಂಶ ಕುಸಿಯಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರೇ ಕಾರಣ. ತಾಲೂಕಿನ ಗುಣಮಟ್ಟದ ಶಿಕ್ಷಣ ಬೋದನೆಯಿಂದ ವಂಚಿತಗೊಳ್ಳುತ್ತಿರುವುದರ ಬಗ್ಗೆ ಸಾರ್ವಜನಿಕರು, ಸಂಬಂಧಪಟ್ಟ ಶಿಕ್ಷಣ ಪ್ರೇಮಿಗಳು ಹೀಗೆ ಬಿಟ್ಟರೆ ತಾಲೂಕಿನ ಶಿಕ್ಷಣ ಹಾಳಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಪ್ರಕಟಣೆ ಮೂಲಕ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.