ಹೋರಾಟಗಾರ ಸುರೇಶ ಮೆಂಗನ ರವರ ಷಷ್ಠಪೂರ್ತಿ ಸಮಾರಂಭ | ಅಭಿನಂದನಾ ಗ್ರಂಥಕ್ಕೆ ಲೇಖನಗಳ ಆಹ್ವಾನ :..

ಹೋರಾಟಗಾರ ಸುರೇಶ ಮೆಂಗನ ರವರ ಷಷ್ಠಪೂರ್ತಿ ಸಮಾರಂಭ |  ಅಭಿನಂದನಾ ಗ್ರಂಥಕ್ಕೆ ಲೇಖನಗಳ ಆಹ್ವಾನ :..

| ಹೋರಾಟಗಾರ ಸುರೇಶ ಮೆಂಗನ ರವರ ಷಷ್ಠಪೂರ್ತಿ ಸಮಾರಂಭ |

ಅಭಿನಂದನಾ ಗ್ರಂಥಕ್ಕೆ ಲೇಖನಗಳ ಆಹ್ವಾನ :..

ಶಹಾಬಾದ : - ರಾಜ್ಯದ ದಲಿತ ಪರ ಹೋರಾಟಗಾರ/ಸಂಘಟನಾಕಾರ ಸುರೇಶ ಮೆಂಗನ ರವರ ಸೆಪ್ಟಂಬರ 15ರಂದು ಷಷ್ಠಪೂರ್ತಿ ಕಾರ್ಯಕ್ರಮದ ಅಂಗವಾಗಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದು, ಅದರ ಅಂಗವಾಗಿ ಅಭಿನಂದನಾ ಗ್ರಂಥಕ್ಕಾಗಿ ಕವನ, ಲೇಖನಗಳನ್ನು ಆಹ್ವಾನಿಸಲಾಗಿದೆ ಎಂದು ಸಂಪಾದಕ ಮಂಡಳಿಯ ಪ್ರಧಾನ ಸಂಪಾದಕರಾದ ಡಾ.ಪಿ.ಎಸ ಕೋಕಟನೂರ ತಿಳಿಸಿದ್ದಾರೆ.

ಲೇಖಕರು ದಲಿತ ಪರ, ರೈತ ಪರ, ಕಾರ್ಮಿಕ ಪರ, ಕನ್ನಡ ಪರ, ನಾಡು-ನುಡಿ ನೆಲ-ಜಲ, ಕಲೆ, ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಮೂರು ಪುಟಗಳಿಗೆ ಮೀರದಂತೆ ಅಥವಾ ಕವನ, ಚುಟುಕು, ಹನಿಗವನಗಳು, ಕನ್ನಡ ನುಡಿ ಮುತ್ತುಗಳು ಇತ್ಯಾದಿಗಳನ್ನು ಕಳಿಸುವವರು ಟೈಪ್ ಮಾಡಿದ ಬರಹಗಳನ್ನು ಜತೆಗೆ ಲೇಖಕರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿರಬೇಕು, ಲೇಖನಗಳನ್ನು ಸ್ವೀಕರಿಸಲು ಆಗಷ್ಠ 05ರ ಕೊನೆಯ ದಿನವಾಗಿರುತ್ತದೆ, ಲೇಖನಗಳ ಆಯ್ಕೆ ಬಗ್ಗೆ ಸಂಪಾದಕ ಮಂಡಳಿಯ ತೀರ್ಮಾನವೆ ಅಂತಿಮ ನಿರ್ಧಾರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿಗದಿತ ಸಂಪಾದಕರಿಗೆ ನಿಮ್ಮ ಕವನ ಅಥವಾ ಲೇಖನವನ್ನು ಕಳಿಸಬಹುದು, ಅದನ್ನು ಈಮೇಲ್ ಅಥವಾ ಮುದ್ರಿತ ಪ್ರತಿಯಾಗಿ ನೀಡಲು 9845139416, 9901359410, 9743168044 ನಂಬರಗೆ ಕಳುಹಿಸಬಹುದಾಗಿದೆ.

ಸುರೇಶ ಮೆಂಗನ ರವರ ವ್ಯಕ್ತಿತ್ವದ ಅಭಿನಂದನೆಗಾಗಿ ಕವನ, ಲೇಖನಗಳ ಆಹ್ವಾನಿಸಲಾಗುತ್ತಿದ್ದು ನಿಮ್ಮ ಅನಿಸಿಕೆ, ಅನುಭವ, ನಿಮ್ಮ ಸಂಪರ್ಕ, ಪ್ರಭಾವ – ಯಾವುದರ ಕುರಿತೂ ಮತ್ತು ಕೃತಜ್ಞತೆಯನ್ನು ಕವನ-ಗದ್ಯದ ಮೂಲಕ ಹಂಚಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದರು.

ಕವನ/ಲೇಖನಗಳು ಕನ್ನಡದಲ್ಲಿರಲಿ, ನಿಮ್ಮ ಹೆಸರು, ಸಂಪರ್ಕ ವಿವರಗಳೊಂದಿಗೆ ಆಗಷ್ಠ 05 ರ ದಿನಾಂಕದೊಳಗೆ ಕಳಿಸಬಹುದಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಸಂಪಾದಕ ಮಂಡಳಿಯ ಸದಸ್ಯರಾದ ಗಿರಿಮಲ್ಲಪ್ಪ ವಳಸಂಗ, ಭರತ ಧನ್ನಾ, ಮರಲಿಂಗ ಯಾದಗಿರ, ಮಲ್ಲಿನಾಥ ಪಾಟೀಲ, ಪ್ರವೀಣ ರಾಜನ, ಶಶಿಕಾಂತ ಮಡಿವಾಳ, ಖಾಜಾ ಪಟೇಲ, ಶಂಕರ ಜಾನಾ, ನಿಂಗಣ್ಣ ಜಂಬಗಿ, ಹಣಮತ ಕುಂಬಾರ ಹಾಗೂ ಮಲ್ಲಿಕಾರ್ಜನ ಜಲಂದರ ಇದ್ದರು.