ವಿಧಾನಸಭೆ ಸಮಾವೇಶಕ್ಕೆ ರಾಜ್ಯಪಾಲರಿಂದ ಕರೆ

ವಿಧಾನಸಭೆ ಸಮಾವೇಶಕ್ಕೆ ರಾಜ್ಯಪಾಲರಿಂದ ಕರೆ
ವಿಧಾನಸಭೆ ಸಮಾವೇಶಕ್ಕೆ ರಾಜ್ಯಪಾಲರಿಂದ ಕರೆ

ವಿಧಾನಸಭೆ ಸಮಾವೇಶಕ್ಕೆ ರಾಜ್ಯಪಾಲರಿಂದ ಕರೆ

ಬೆಂಗಳೂರು, ಜುಲೈ 18: ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಅವರು ಭಾರತದ ಸಂವಿಧಾನದ 174ನೇ ಅನುಚ್ಛೇದದ (1)ನೇ ಉಪಖಂಡದಡಿಯಲ್ಲಿ ಸ್ವತಃ ಅವರಿಗೆ ನೀಡಲಾಗಿರುವ ಅಧಿಕಾರವನ್ನು ಉಪಯೋಗಿಸಿ ರಾಜ್ಯ ವಿಧಾನಸಭೆಯ ಸಮಾವೇಶವನ್ನು ಕರೆಯುವ ಆದೇಶ ಹೊರಡಿಸಿದ್ದಾರೆ.

ರಾಜ್ಯಪಾಲರು ನೀಡಿದ ಆದೇಶದನ್ವಯ, 2025ರ ಆಗಸ್ಟ್ 11ರಂದು ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಸಭೆಯು ಸಮಾವೇಶಗೊಳ್ಳಲಿದೆ.

ಈ ಬಗ್ಗೆ ಅಧಿಕೃತ ಪ್ರಕಟಣೆಯಲ್ಲಿ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ. ಶ್ರೀಧರ್ ಅವರು ರಾಜ್ಯಪಾಲರ ಆದೇಶಾನುಸಾರ ಈ ಮಾಹಿತಿಯನ್ನು ಹೊರಹಾಕಿದ್ದಾರೆ.