ವಚನಗಳು ಪಚನವಾದರೆ ಸಮಾಜ ಪರಿವರ್ತನೆಯಾಗುತ್ತದೆ : ಪ್ರೊ.ಶಿವರಾಜ ಪಾಟೀಲ

ವಚನಗಳು ಪಚನವಾದರೆ ಸಮಾಜ ಪರಿವರ್ತನೆಯಾಗುತ್ತದೆ : ಪ್ರೊ.ಶಿವರಾಜ ಪಾಟೀಲ
ಕಲಬುರಗಿ : ವಚನಗಳು ಪಚನವಾದರೆ ಸಮಾಜ ಪರಿವರ್ತನೆಯಾಗುತ್ತದೆ. ವಚನ ಸಾಹಿತ್ಯ ಮೌಲಿಕವಾದುದು ಹಾಗೂ ಅರ್ಥಪೂರ್ಣವಾದದ್ದು ಸಮಾಜ ಪರಿವರ್ತನೆಗೆ ದಿವ್ಯ ಔಷಧಿಯಂತಿದೆ ಶರಣರು ಸಮಾಜ ಚಿಕಿತ್ಸಕರು ವಚನ ಸಾಹಿತ್ಯದಿಂದ ಸಮಾಜವನ್ನು ತಿದ್ದಿ ಪರಿವರ್ತಿಸಲು ಹೊರಟವರು ಸಾಹಿತ್ಯ ನಮ್ಮೆಲ್ಲರಿಗೆ ಪ್ರಚಲವಾದರೆ ಸಮಾಜ ಪರಿವರ್ತನೆ ಯಾಗುವುದರಲ್ಲಿ ಸಂದೇಹವಿಲ್ಲ ವಚನಗಳು ಆತ್ಮಸಾಕ್ಷಿ ಮನಸ್ಸಾಕ್ಷಿಯಾಗಿ ನುಡಿದ ನುಡಿಗಳು ಅಂತರಂಗ ಬಹಿರಂಗ ಶುದ್ಧಕ್ಕೆ ಸಾಕ್ಷಿಯಾಗಿವೆ ನಡೆ ನುಡಿ ಒಂದಾಗಿರಬೇಕು ಅಂದಾಗ ಅವ್ವ ವಚನಗಳಾಗುತ್ತವೆ ಇಲ್ಲದಿದ್ದರೆ ರಚನೆಗಳಾಗಿ ಉಳಿಯುತ್ತವೆ ಎಂದು ಪ್ರೊಫೆಸರ್ ಶಿವರಾಜ್ ಪಾಟೀಲ್ ಹೇಳಿದರು ಅವರು ಜಾಗತಿಕ ಲಿಂಗಾಯತ ಮಹಾಸಭಾ ಶ್ರಾವಣ ಮಾಸ ನಿಮಿತ್ಯ ಏರ್ಪಡಿಸಿದ ಎಸ್ ಎಲ್ ಪಾಟೀಲ್ ಮನೆಯಲ್ಲಿ ಸಭೆಯನ್ನು ಉದ್ದೇಶಿಸಿ ವಚನ ಸಾಹಿತ್ಯದಲ್ಲಿ ಮೌಲ್ಯಗಳು ಕುರಿತು ಮಾತನಾಡುತ್ತಿದ್ದರು ಮೌಲಿಕವಾದದ್ದು ಜನಪ್ರಿಯ ವಾಗುವುದಿಲ್ಲ ಜನಪ್ರಿಯತೆ ಇದ್ದಿದ್ದು ಮೌಲಿಕವಲ್ಲ ಎಂಬ ಮಾತನ್ನು ಹೇಳುತ್ತಾ ವಚನಗಳು ಶ್ರೀಸಾಮಾನ್ಯರನ್ನು ಆಕರ್ಷಿಸಿದರು ಪಂಡಿತರನ್ನು ಗಮನದಲ್ಲಿರಿಸಿಕೊಂಡು ಬರೆಯದೆ ಶ್ರೀಸಾಮಾನ್ಯರನ್ನು ಗಮನದಲ್ಲಿರಿಸಿಕೊಂಡು ಬರೆದವುಗಳಾಗಿವೆ ಸಂಸ್ಕೃತ ತಿಳಿಯದಿದ್ದಾಗ ಅದು ದೇವ ಭಾಷೆ ಎಂದು ಹೇಳುತ್ತಿದ್ದಾಗ ದೇವ ಭಾಷೆ ಜನಾ ಭಾಷೆಯಾಗಿ ಪರಿವರ್ತನೆ ಯಾಗದಿದ್ದಾಗ ಶರಣರು ಜಲ ಭಾಷೆಯನ್ನೇ ದೇವ ಭಾಷೆಯನ್ನಾಗಿ ಪರಿವರ್ತಿಸಿದರು ಭಗವಾನ್ ಬುದ್ಧ ಪ್ರಾಕೃತವನ್ನು ತಿಳಿಯದಿದ್ದಾಗ ಪಾಳಿ ಭಾಷೆಯಲ್ಲಿ ತನ್ನ ಉಪದೇಶಗಳನ್ನು ಬೋಧಿಸಿದ ಅದೇ ರೀತಿ ಸಂಸ್ಕೃತ ತಿಳಿಯದ ಜನರಿಗೆ ಅಚ್ಚು ಕನ್ನಡದಲ್ಲಿ ಸ್ವಚ್ಛವಾಗಿ ಬಿಚ್ಚು ಮನಸ್ಸಿಗೆ ಹೇಳಿದ ಅವರ ಮಾತುಗಳೇ ವಚನಗಳಾಗಿವೆ ಸಮಾಜಕ್ಕೆ ವಚನವಾಗಬೇಕಾಗಿದೆ ಪಚನವಾದರೆ ಸಮಾಜದಲ್ಲಿ ಕೂ ಕೃತ್ಯಗಳು ಅಪರಾಧಿಕರಣ ನಿಂತು ಹೋಗುತ್ತದೆ ಎಲ್ಲಿಯೂ ಯಾರು ಕೆಟ್ಟ ಕೆಲಸವನ್ನು ಮಾಡಲು ಹೋಗುವುದಿಲ್ಲ ಹಾಗೆ ಈ ವಚನಗಳು ನಮ್ಮ ಮನಸ್ಸನ್ನು ಸಂಸ್ಕರಿಸುತ್ತವೆ ಅದಕ್ಕಾಗಿ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದೆ ಅನುಭವ ಮಂಟಪದಲ್ಲಿ 335 ವಚನಕಾರರು ಭಾಗವಹಿಸುತ್ತಿದ್ದರು ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ತು ಮುಕ್ತವಾಗಿ ಮಾತನಾಡುತ್ತಿದ್ದರು. ಸಮಾನತೆ ಸೋದರತ್ತೆ ಆತ್ಮೀಯತೆ ಮನವಿಯತೆ ಇವು ಅವರ ವಚನದ ಮೂಲ ಸತ್ವಗಳಾಗಿದ್ದು ಸರ್ವರೂ ಉದ್ಧಾರವಾಗಬೇಕು ಅಂತ್ಯೋದಯವಾಗಬೇಕು ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಸಿಗಬೇಕು ಎಂದು ಹೇಳಿದ ಮಾತನ್ನೇ ಪ್ರಧಾನಿ ಮೋದಿ ಅವರು ಸಬ್ಕ ಸಾತ್ ಸಬ್ಕ ವಿಕಾಸ್ ಎಂಬ ಮಾತನ್ನು ಹೇಳುವುದರ ಮೂಲಕ ಬಸವ ತತ್ವವನ್ನು ಗೌರವಿಸಿದ್ದಾರೆ ಇದುವರೆಗೆ ಯಾವುದೇ ಪ್ರಧಾನಿ ಈ ವಿಷಯವನ್ನು ಪ್ರಸ್ತಾಪಿಸಿಲ್ಲ ಮೋದಿಯವರು ಪ್ರಸ್ತಾಪಿಸಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ ಆಡಳಿತ ಅಧಿಕಾರ ಇರುವವರು ಬಸವ ತತ್ವ ಪಾಲನೆ ಮಾಡಿದರೆ ಖಂಡಿತ ಕಲ್ಯಾಣ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಅವರು ವಿಶ್ಲೇಷಣೆ ಮಾಡಿದರು ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಅವರು ಅಧ್ಯಕ್ಷತೆ ವಹಿಸಿದ್ದರು ಪ್ರೊಫೆಸರ್ ಎಸ್ ಎಲ್ ಪಾಟೀಲರು ಪ್ರಸ್ತಾವಿಕವಾಗಿ ಮಾತನಾಡಿದರು ಬಸವರಾಜ್ ಕೊನೆ ನವರು ಕಾರ್ಯಕ್ರಮ ನಿರೂಪಿಸಿದರು ಶರಣೆ ನೀಲಮ್ಮ ತಾಯಿಯವರು ವಚನ ಗಾಯನ ಪ್ರಾರ್ಥಿಸಿದರು