ಹೊಸ ಉದ್ಯೋಗ ಸೃಷ್ಟಿಸಲು ಹೈ. ಕ. ಶಿ. ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ : ಪಾಟೀಲ

ಹೊಸ  ಉದ್ಯೋಗ ಸೃಷ್ಟಿಸಲು ಹೈ. ಕ. ಶಿ. ಸಂಸ್ಥೆ ಮಾಡುತ್ತಿರುವ  ಕಾರ್ಯ ಶ್ಲಾಘನೀಯ : ಪಾಟೀಲ

ಕಲಬುರಗಿ : ಹೊಸ ಹೊಸ ಉದ್ಯೋಗ ಸೃಷ್ಟಿಸಲು ಹೈ. ಕ. ಶಿ. ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ದಕ್ಷಣ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ಕಲಬುರಗಿ ದಕ್ಷಣ ಶಾಸಕ ಅಲ್ಲಮ ಪ್ರಭು ಪಾಟೀಲ್ ರವರು ಉದ್ಘಾಟಿಸಿ ಮಾತನಾಡಿದರು.

ನಿರುದ್ಯೋಗಿ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸ಼ೃಷ್ಟಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕತೆಯಿದೆ , ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ ಉದ್ದಿಮೆಗಳಿಗೆ ಈ ಕಾರ್ಯಕ್ರಮ ಮೆಟ್ಟಿಲಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮ ಅದ್ಯಕ್ಷತೆ ವಹಿಸಿದ ಸಹ ಆಯೋಜಕ ಸಂಸ್ಥೆಯಾದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅದ್ಯಕ್ಷರಾದ ಶ್ರೀ ಶಶೀಲ್ ಜಿ ನಮೋಶಿ ಅವರು ಮಾತನಾಡಿ ನವೋದ್ಯಮಗಳ ಉತ್ತೇಜನ ಮತ್ತು ಹೊಸ ಉದ್ಯೋಗ ಸೃಷ್ಟಿಸಲು ನಮ್ಮ ಸಂಸ್ಥೆ ಬ್ಯಸಿನೆಸ್ ಇನ್ಕಿಬ್ಯೇಶನ್ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರದ ಯೋಜನೆಗೆ ಮನವಿ ಸಲ್ಲಿಸಲಾಗುವುದು ಹಾಗು ಈಗಾಗಲೇ ಹೊಸ ಉದ್ಯಮಗಳಿಗೆ ಎದುರಾಗಿರುವ ಪ್ರಾಥಮಿಕ ತೊಂದರೆಗಳನ್ನು ಹೊಡೆದುಹಾಕಲು ನಮ್ಮ ಸಂಸ್ಥೆ ಈ ಭಾಗದ ಯುವ ವುದ್ಯೆಮಿಗಳ ಜೊತೆ ಎಂದಿಗೂ ನಿಂತಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಹೊಸ ಉದ್ಯಮಗಳ ಸೃಷ್ಟಿಸಲು ಬೇಕಾಗಿರುವ ಸವಲತ್ತುಗಳು, ಹೊಸ ಆವಿಶ್ಕಾರ, ನೆಟ್ವರ್ಕಿಂಗ್, ಹೊಸ ಉದ್ಯಮ ಮತ್ತು ಉದ್ಯಮವಕಾಶಗಳ ಕುರಿತು ಚರ್ಚಿಸಲಾಯಿತು ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್ ಫೌಂಡೇಶನ್ ಪರವಾಗಿ ಶ್ರೀ ಬಸವರೆಡ್ಡಿ ಶ್ರೀ ಶ್ರೀಶೈಲ ಪಟಾಟೆಯವರೂ ಈ ವಿಷಯಗಳ ಕುರಿತು ಈ ಭಾಗದ ಯುವ ಉದ್ಯಮಿಗಳಿಗೆ ಸಹಕಾರ ನೀಡುವ ಸಲುವಾಗಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಆಡಳಿತ ಮಂಡಳಿ ಸದಸ್ಯರಾದ ಡಾ ಅನಿಲಕುಮಾರ ಪಟ್ಟಣ, ಡಾ ಎಸ್ ಆರ್ ಹರವಾಳ, ಸ್ಪಾರ್ಟ ಅಪ್ ಸಿಇಓ ಬಸವರೆಡ್ಡಿ, ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್,ಉಪ ಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟಿ, ಡಾ ಭಾರತಿ ಹರಸೂರ, ಡಾ ನಾಗೇಶ್ ಸಾಲಿಮಠ ಉಪಸ್ಥಿತರಿದ್ದರು.