ರೇಣುಕಾಚಾರ್ಯ ಜಯಂತಿ ಆಚರಣೆ

ರೇಣುಕಾಚಾರ್ಯ ಜಯಂತಿ ಆಚರಣೆ

ರೇಣುಕಾಚಾರ್ಯ ಜಯಂತಿ ಆಚರಣೆ

ನಾಗರಾಜ್ ದಂಡಾವತಿ ವರದಿ ಶಹಾಬಾದ,ನಗರದ ಲಕ್ಷ್ಮೀ ಗಂಜನ ವೀರಶೈವ ಧರ್ಮ ಸಂಸ್ಥಾಪಕರಾದ ಜಗದ್ಗುರು ರೇಣುಕಾಚಾರ್ಯರ ದೇವಸ್ಥಾನದಲ್ಲಿ ರೇಣುಕಾಚಾರ್ಯರ ಜಯಂತಿಯನ್ನು ಅಖಿಲ ಭಾರತ ವೀರಶೈವ ಲಿಂಗಾಯ ಮಹಾಸಭಾ ತಾಲೂಕ ಘಟಕದ ವತಿಯಿಂದ ಆಚರಿಸಲಾಯಿತು.

ಬೆಳಗ್ಗೆ ರೇಣುಕಾಚಾರ್ಯ ಮೂರ್ತಿಗೆ ರುದ್ರಾಭೀಷೇಕ, ಮಹಾಮಂಗಳಾರತಿ ನಡೆಯಿತು. ನಂತರ ಪಂಚಾಚಾರ್ಯ ಧ್ವಜಾರೋಹಣವನ್ನು ನೇರವೇರಿಸಿದರು. ನಂತರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಮಹಾಪ್ರಸಾದ ವಿತರಣೆ ನಡೆಯಿತು.

ಸಮಾಜದ ಅಧ್ಯಕ್ಷ ಭೀಮಾಶಂಕರ ಕುಂಬಾರ, ಶರಣಬಸಪ್ಪ ಚಂದ್ರಶೇಖ ಪಾಟೀಲ, ಶರಣಯ್ಯ ಮಠಪತಿ, ಈರಣ್ಣ ಕೋಬಾಳ, ಮೃತ್ಯುಂಜಯಸ್ವಾಮಿ ಹಿರೇಮಠ, ರಾಜೇಶ್ವರಿ ಧನಶೆಟ್ಟಿ, ಸಾಹೇಬಗೌಡ ಬೊಗುಂಡಿ, ಸೋಮಶೇಖರ ಸ್ವಾಮಿ, ನಾಗಯ್ಯ ಸ್ವಾಮಿ, ರಾಜು ಬೆಳಗುಂಪಿ, ಶರಣು ಜೇರಟಗಿ, ಬಸಯ್ಯ ಪೂಜಾರಿ ಮತ್ತು ಸಮಾಜದ ಬಾಂಧವರು ಇದ್ದರು.