ಕೆಂಚೇನಹಳ್ಳಿ ಶ್ರೀ ಪಟ್ಟದಮ್ಮ ದೇವಿ ಸರ್ಕಲ್ ನಾಮಕರಣ – ಶಾಸಕ ಎಸ್.ಟಿ. ಸೋಮಶೇಖರ್ ಗೌಡರಿಂದ ಉದ್ಘಾಟನೆ
ಕೆಂಚೇನಹಳ್ಳಿ ಶ್ರೀ ಪಟ್ಟದಮ್ಮ ದೇವಿ ಸರ್ಕಲ್ ನಾಮಕರಣ – ಶಾಸಕ ಎಸ್.ಟಿ. ಸೋಮಶೇಖರ್ ಗೌಡರಿಂದ ಉದ್ಘಾಟನೆ
ರಾಜರಾಜೇಶ್ವರಿ ನಗರ ವ್ಯಾಪ್ತಿಯ ಕೆಂಚೇನಹಳ್ಳಿ ಗ್ರಾಮ ದೇವತೆ ಶ್ರೀ ಪಟ್ಟದಮ್ಮ ದೇವಿಯ ಆಶೀರ್ವಾದದೊಂದಿಗೆ, ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಎಸ್.ಟಿ. ಸೋಮಶೇಖರ್ ಗೌಡ ಅವರು ‘ಶ್ರೀ ಪಟ್ಟದಮ್ಮ ಸರ್ಕಲ್’ ಅನ್ನು ಅಧಿಕೃತವಾಗಿ ನಾಮಕರಣ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಶ್ರೀ ಸುರೇಶ್, ಶ್ರೀನಾಥ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಹಾಜರಿದ್ದು ಕಾರ್ಯಕ್ರಮಕ್ಕೆ ಭಕ್ತಿಪೂರ್ಣ ವಾತಾವರಣ ನಿರ್ಮಾಣವಾಯಿತು.