ಇಂದು ಜೇವರ್ಗಿ ಮಹಾಲಕ್ಷ್ಮಿಪರ್ವ

ಇಂದು ಜೇವರ್ಗಿ ಮಹಾಲಕ್ಷ್ಮಿಪರ್ವ

ಇಂದು ಜೇವರ್ಗಿ ಮಹಾಲಕ್ಷ್ಮಿಪರ್ವ

ಜೇವರ್ಗಿ: ಇಲ್ಲಿನ ಪಟ್ಟಣದ ಅಧಿ ದೇವತೆ ಶ್ರೀ ಮಹಾಲಕ್ಷ್ಮೀಯ ಮಹಾಪರ್ವ ಶುಕ್ರವಾರ ಜುಲೈ 18 ರಂದು ಸಂಭ್ರಮ ಸಡಗರದಿಂದ ಜರುಗಲಿದೆ.

ಬೀದರ್ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-50 ರ ಪಕ್ಕದಲ್ಲಿರುವ ರದ್ದೇವಾಡಗಿ ಕೃಷಿ ವಿಜ್ಞಾನ ಕೇಂದ್ರದ ಹತ್ತಿರವಿರುವ ಮಹಾಲಕ್ಷ್ಮೀ ಮಂದಿರ (ಆಯಿ ತಳ) ದಲ್ಲಿ ಆಷಾಢ ಮಾಸದಲ್ಲಿ ಶುಕ್ರವಾರದ ದಿನದಂದು ಮಹಾಲಕ್ಷ್ಮೀ ಪರ್ವ ಆಚರಿಸಲಾಗುತ್ತಿದೆ.

ಕುಡಿಯುವ ನೀರು ಹಾಗೂ ಪ್ರಸಾದ ವ್ಯವಸ್ಥೆ : ಜೇವರ್ಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸರ್ವ ಜನಾಂಗದವರು ಅತ್ಯಂತ ಶ್ರದ್ದೆಯಿಂದ ಭಕ್ತಿಯಿಂದ ಪರ್ವದಲ್ಲಿ ಭಾಗವಹಿಸುತ್ತಾರೆ. ಪರ್ವಕ್ಕೆ ಆಗಮಿಸಿದ್ದ ಭಕ್ತ ಸಮೂಹಕ್ಕೆ ಟ್ರಸ್ಟ್ ಕಮಿಟಿ ಕುಡಿಯುವ ನೀರಿನ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿನ ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಿಂದ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿದ್ದು, ಕಾಲ್ನಡಿಗೆಯ ಮೂಲಕ ಭಕ್ತರು ಸಾಗಿ ಇಲ್ಲಿನ ಮಹಾಲಕ್ಷ್ಮಿದೇವಿ ದರ್ಶನ ಪಡೆಯಬೇಕು ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷಷಣ್ಮುಖಪ್ಪ ಸಾಹು ಗೋಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೇವರ್ಗಿ ಸುದ್ದಿ : ನಾಗರಾಜ್ ದಂಡಾವತಿ