ಗುರುವಿನ ಆಶೀರ್ವಾದವೇ ನಮ್ಮಗೆ ಶಕ್ತಿ: ಡಾ.ಬಸವಲಿಂಗ ಪಟ್ಟದ್ದೇವರು

ಗುರುವಿನ ಆಶೀರ್ವಾದವೇ ನಮ್ಮಗೆ ಶಕ್ತಿ: ಡಾ.ಬಸವಲಿಂಗ ಪಟ್ಟದ್ದೇವರು
ಗುರುವಿನ ಆಶೀರ್ವಾದವೇ ನಮ್ಮಗೆ ಶಕ್ತಿ: ಡಾ.ಬಸವಲಿಂಗ ಪಟ್ಟದ್ದೇವರು

ಗುರುವಿನ ಆಶೀರ್ವಾದವೇ ನಮ್ಮಗೆ ಶಕ್ತಿ: ಡಾ.ಬಸವಲಿಂಗ ಪಟ್ಟದ್ದೇವರು

ಕಮಲನಗರ ಪಟ್ಟಣದಲ್ಲಿ ಡಾಕ್ಟರ್ ಚನ್ನಬಸವ ಪಟ್ಟ ದ್ದೇವರ 136ನೇ ಜಯಂತಿ ಅದ್ಧೂರಿಯಾಗಿ ಉತ್ಸವ ನಡೆಯಿತು

ಕಮಲನಗರ: ಗುರುವಿನ ಕೃಪೆ ಶಿಷ್ಯನ ಮೇಲಿದ್ದರೆ ಗುರುವಿನ ಆಶೀರ್ವಾದವೇ ದೊಡ್ಡಶಕ್ತಿ, ಇಂದು ನಾವು ಸಮಾಜ ಮುಖಿಯಾಗಿ ಸೇವೆ ನೀಡಲು ನಮ್ಮ ಗುರುಗಳಾದ ಡಾ.ಚನ್ನಬಸವ ಪಟ್ಟದ್ದೇವರ ಮಾರ್ಗದರ್ಶನವೆ ಕಾರಣ,ಅವರ ಆದರ್ಶ ಗುಣಗಳು ನಮ್ಮಗೆ ಶಕ್ತಿ ಎಂದು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.

 ಕಮಲನಗರ ಪಟ್ಟಣದಲ್ಲಿ ಪೂಜ್ಯಶ್ರೀ ಡಾ. ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯತ್ಸವ ಮತ್ತು ರಥೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪೂಜ್ಯರ ಹುಟ್ಟೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಬಹಳ ಅದ್ಭುತ ಜಾತ್ರಾ ಮಹೋತ್ಸವ ನಡಿತಾ ಇದ್ದು, ಗಡಿಯಲ್ಲಿ ಕನ್ನಡ ಬೆಳೆಸಿದ ಗುರುಗಳ ಜನ್ಮದಿನದ ಪ್ರಯುಕ್ತ ಕನ್ನಡ ರಾಥೋತ್ಸವ ಕಾರ್ಯಕ್ರಮ ಬಹಳ ಹೆಮ್ಮೆಯ ಕಾರ್ಯಕ್ರಮವಾಗಿದೆ ಎಂದು ನುಡಿದರು.

ಶಾಸಕರಾದ ಪ್ರಭು ಚವ್ಹಾಣ ಅವರು ಮಾತನಾಡಿ, ಸನಾತನ ಧರ್ಮದ ಯಾವುದೇ ಕಾರ್ಯಕ್ಕೆ ನಾನು ಸದಾ ಸಿದ್ದನಾಗಿರುತ್ತೇನೆ, ನಮ್ಮ ಭಾಗದ ನಡೆದಾಡುವ ದೇವರು, ಡಾ.ಚನ್ನಬಸವ ಪಟ್ಟದ್ದೇವರ ಈ ಭಾಗದ ಜನಕ್ಕಾಗಿ ತಮ್ಮ ಜೀವನನ್ನು ಸಮರ್ಪಣೆ ಮಾಡಿದರು . ಹಿರೇಮಠ ವಿದ್ಯಾಪೀಠ ಸಂಸ್ಥೆಯಲ್ಲಿ ಅನಾಥ ಮಕ್ಕಳಿಗೆ ಮರುಜನ್ಮ ನೀಡುವ ಮೂಲಕ ಪೂಜ್ಯ ನಾಡೋಜ ಬಸವಲಿಂಗ ಪಟ್ಟದ್ದೇವರ ಕಾರ್ಯ ಹೃದಯ ಮಿಡಿಯುವಂಥದ್ದು ಎಂದು ಹೇಳಿದರು.

ಅನುಭಾವ ನೀಡಿದ ಶರಣಬಸವ ಮಹಾಸ್ವಾಮಿಗಳು, 12ನೇ ಶತಮಾನದ ಶರಣರ ಆಚಾರ ವಿಚಾರಗಳನ್ನು ಚನ್ನಬಸವ ಪಟ್ಟದೇವರು 19ನೇ ಶತಮಾನದಲ್ಲಿ ಜೀವ ತುಂಬಿದರು, ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆಗೆ ಡಾ. ಚನ್ನಬಸವ ಪಟ್ಟದ್ದೇವರ ಕನಸ್ಸನ್ನು ಅತಿ ದೊಡ್ಡ ರೀತಿಯಲ್ಲಿ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ

ಸಾಕಾರಗೊಳ್ಳಿಸುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ಗುರುಬಸವ ಪಟ್ಟದ್ದೇವರು ಪ್ರಾಸ್ತವಿಕ ಮಾತನಾಡಿ, ಪೂಜ್ಯರು ಈ ಭಾಗದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಕನ್ನಡವನ್ನು ಲಾಲಣೆ ಪೋಷಣೆ ಮಾಡಿ ಬೆಳೆಸಿದ್ದರು, ಗುರುವಿನ ಹೆಸರು ಉಳಿಸಿದ ಕೀರ್ತಿ ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ ಎಂದು ನುಡಿದರು.

*ಭವ್ಯ ಮೆರವಣಿಗೆ:* 

ಮುಂಜಾನೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು ಮೆರವಣಿಗೆ ಉದ್ದಕ್ಕೂ ಚನ್ನಬಸವ ಕಾಲೋನಿ ಯಿಂದ ಬೆಳಗ್ಗೆ ಆರಂಭವಾದದ್ದು ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದಿಂದ ಸಾಗಿ ಬಸ್ ನಿಲ್ದಾಣದ ಪೊಲೀಸ್ ಠಾಣೆ ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನ ಬಸವೇಶ್ವರ ವೃತ್ತ ಗ್ರಾಮ ಪಂಚಾಯತ ಅಕ್ಕಮಹಾದೇವಿ ವ್ರತ ಸಾಗಿ ಭವ್ಯ ಮೆರವಣಿಗೆಯೊಂದಿಗೆ ಹಿರೇಮಠ ಸಂಸ್ಥಾನ ಶಾಖಾ ಮಠಕ್ಕೆ ಬಂದು ತಲುಪಿತ್ತು. ಅದಕ್ಕಿಂತ ಮೊದಲು ಲಿಂಗೈಕ್ಯರಾದ ಡಾಕ್ಟರ್ ಚನ್ನಬಸವ ಪಟ್ಟದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಯಮಿ ರಾಜಕುಮಾರ್ ಬಿರಾದರ್ ಸಂತೋಷ್ ಪಾಟೀಲ್ ಸಂತೋಷ್ ಬಿರಾದರ್ ಅವರಿಂದ ಚಾಲನೆ ಪಡೆಯಲಾಯಿತು.

ಹೀಗೆ ಪ್ರಾರಂಭವಾದ ಕಾರ್ಯಕ್ರಮ ವಿವಿಧ ಶಾಲೆ ಮಕ್ಕಳ ನ್ರತ್ಯಗಳ ಮೂಲಕ ಅದ್ದೂರಿಯಾಗಿ ನಡೆಯಿತು. ದಾರಿ ಉದ್ದಕ್ಕೂ ಅಕ್ಕನ ಬಳಗ ಕೋಲಾಟ ಭಜನೆ ನೃತ್ಯ ಮಾಡಿದರು. ಶಾಲಾ ಮಕ್ಕಳಿಂದ ಮೆರವಣಿಯಲ್ಲಿ ಶರಣರ ವೇಷಭೂಷಣದ ರೂಪಗಳಲ್ಲಿ ಮಕ್ಕಳು ಇದ್ದರು.

ಕಾರ್ಯಕ್ರಮದಲ್ಲಿ ವಿವಿಧ ಮಠಾಧಿಶರು , ಗ್ರಾಮದ ಯುವಕರು, ಸುತ್ತ ಮುತ್ತಲಿನ ಭಕ್ತರು ಸೇರಿದರು.

ಮೆರವಣಿಗೆ ಸ್ವಾಗತ ಸಮಿತಿಯ ಅಧ್ಯಕ್ಷರು ಮಡಿವಾಳ ಮಾಜನ್ ಪ್ರಕಾಶ್ ಟೋಣೆ ಚಂದ್ರಕಾಂತ್ ಅವಿನಾಶ್ ಶಂಕರ್ ಸೇರಿದಂತೆ ಗಣ್ಯರು ಮತ್ತು ಅಕ್ಕನ ಬಳಗದವರು ಇದ್ದರು.ಸಿಪಿಐ ಶ್ರೀಕಾಂತ್ ಅಲ್ಲಾಪುರ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಆಶಾ ರಾಠೋಡ್ ನೇತೃತ್ವದಲ್ಲಿ ಮಾಡಲಾಯಿತು. * *ಕನ್ನಡ ರಾಥೋತ್ಸವಕ್ಕೆ ಸಂಸದ ಸಾಗರ ಖಂಡ್ರೆ ಚಾಲನೆ*  

ಕಮಲನಗರ: ಪೂಜ್ಯ. ಶ್ರೀ ಡಾ. ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯತ್ಸವ ಹಾಗೂ ಕನ್ನಡ ರಾಥೋತ್ಸವ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಿದ ಕನ್ನಡ ರಾಥೋತ್ಸವಕ್ಕೆ ಬೀದರ ಲೋಕಸಭಾ ಸದಸ್ಯರಾದ ಮಾನ್ಯ ಶ್ರೀ ಸಾಗರ ಖಂಡ್ರೆ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಪೂಜ್ಯ ಶ್ರೀಗಳು ಈ ಭಾಗದಲ್ಲಿ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಕನ್ನಡ ಬೆಳೆಸಿದ್ದರು.

ಶಿಕ್ಷಣ ಪ್ರೇಮಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಗಳ ಕೊಡಗೆ ಅಪಾರವಾಗಿದೆ.

ಕಾಯಕ ಪರಿಣಾಮಗಳಾದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ ಜಯಂತ್ಯತ್ಸವ ಕಾರ್ಯಕ್ರಮಕ್ಕೆ ಎಲ್ಲರೂ ಒಗ್ಗೂಡಿ ಕನ್ನಡ ರಥೋತ್ಸವ ಮಾಡಿದು ಹೆಮ್ಮೆ ಯ ವಿಚಾರ ಎಂದು ಹೇಳಿದರು.

 ಈ ಸಂದರ್ಭದಲ್ಲಿ ನಾಡೊಜ ಡಾ. ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥೆನ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಮುಖಂಡರಾದ ಪ್ರವೀಣ ಪಾಟೀಲ, ಸಂತೋಷ ಬಿರಾದಾರ, ಸೇರಿದಂತೆ ನೂರಾರು ಭಕ್ತರು ಇದ್ದರು.